Black Fungus ಬಳಿಕ ಇದೀಗ ಕೋರೋನಾ ರೋಗಿಗಳ ಮೇಲೆ ಮತ್ತೊಂದು ಕಾಯಿಲೆಯ ದಾಳಿ

Aspergillosis: ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಈ ಕಾಯಿಲೆ ಬ್ಲಾಕ್ ಫಂಗಸ್ ನಷ್ಟು ಮಾರಕವಾಗಿಲ್ಲ ಎಂದಿದ್ದಾರೆ. ಆದರೆ, ಇದನ್ನು ಲಘುವಾಗಿ ಕೂಡ ಪರಿಗಣಿಸುವಂತಿಲ್ಲ ಎಂಬುದು ಅವರ ಅಭಿಪ್ರಾಯ. ಹಾಗಾದರೆ ಏನಿದು Aspergillosis? ಮತ್ತು ಅದರ ಲಕ್ಷಣಗಳೇನು (aspergillosis precautions)? ತಿಳಿಯೋಣ ಬನ್ನಿ.

Written by - Nitin Tabib | Last Updated : May 30, 2021, 03:29 PM IST

    ಕೊರೊನಾ ಹಾಗೂ ಕೊರೊನಾದಿಂದ ಚೇತರಿಸಿ ಕೊಂಡವರಲ್ಲಿ ಹೊಸ ಶಿಲೀಂಧ್ರಿ ಸೋಂಕು (aspergillosis causes) ಕಾಣಿಸಿಕೊಳ್ಳುತ್ತಿದೆ.

    ವೈದರು ಈ ಫಂಗಸ್ ಅನ್ನು ಅಸ್ಪರ್ಗಿಲೋಸಿಸ್ ಎಂದು ಗುರುತಿಸಿದ್ದಾರೆ.

    ಬ್ಲಾಕ್ ಅಥವಾ ವೈಟ್ ಫಂಗಸ್ ಗಿಂತ ಇದು ಕಡಿಮೆ ಮಾರಕವಾಗಿದೆ ಎಂಬುದು ವೈದ್ಯರ ಅಭಿಪ್ರಾಯ.

Black Fungus ಬಳಿಕ ಇದೀಗ ಕೋರೋನಾ ರೋಗಿಗಳ ಮೇಲೆ ಮತ್ತೊಂದು ಕಾಯಿಲೆಯ ದಾಳಿ title=
Aspergillosis (File Photo)

ನವದೆಹಲಿ: Aspergillosis - ಬ್ಲಾಕ್ ಫಂಗಸ್ ಬಳಿಕ ಇದೀಗ ಮತ್ತೊಂದು ಶಿಲೀಂಧ್ರಿ ರೋಗ ಕೊರೊನಾ ರೋಗಿಗಳ ಚಿಂತೆಯನ್ನು ಹೆಚ್ಚಿಸತೊಡಗಿದೆ. ಈ ರೋಗವನ್ನು ಅಸ್ಪರ್ಗಿಲ್ಲೋಸಿಸ್ (Aspergillosis) ಎಂದು ಕರೆಯಲಾಗಿದೆ. ಬ್ಲಾಕ್ ಫಂಗಸ್ ಕಾಯಿಲೆಯ ರೀತಿಯೇ ಇದೂ ಕೂಡ ಕೊರೊನಾ (Coronavirus)ರೋಗಿಗಳ ಮೇಲೆ ದಾಳಿ ಇಡುತ್ತಿದೆ. ಕೊರೊನಾ ಪಾಸಿಟಿವ್ ಅಥವಾ ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಈ ಕಾಯಿಲೆ ದಾಳಿ ಇಡುತ್ತಿದೆ. ಪ್ರಸ್ತುತ ಈ ಕಾಯಿಲೆಯ 8 ಪ್ರಕರಣಗಳು ಗುಜರಾತ್ ನಿಂದ ವರದಿಯಾಗಿವೆ. ಇದಲ್ಲದೆ ಈ ಕಾಯಿಲೆಗೆ ಗುರಿಯಾದ ಕೆಲ ಜನರು ಮುಂಬೈ ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Aspergillosis ಎಂದರೇನು (aspergillosis in kannada) ಮತ್ತು ಅದರ ಲಕ್ಷಣಗಳು ಯಾವುವು? ಈ ಶಿಲೀಂಧ್ರ ದಾಳಿಯ ಅಪಾಯ ಯಾವ ಜನರಿಗೆ ಇದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಸುಲಭ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ ಬನ್ನಿ.

ಏನಿದು Aspergillosis? (aspergillosis fungal infection)
ಈ ರೀತಿಯ ಶಿಲೀಂಧ್ರಗಳು ನಿಮ್ಮ ಮನೆಯಲ್ಲಿ ಅಥವಾ ಮನೆಯ ಹತ್ತಿರದಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಅವು ಸತ್ತ ಎಲೆಗಳು ಮತ್ತು ಕೊಳೆತ ವಸ್ತುಗಳ ಮೇಲೆ ಉತ್ಪತ್ತಿಯಾಗುತ್ತವೆ. ಹಾಗೆ ನೋಡಿದರೆ, ಈ ಶಿಲೀಂಧ್ರವು ನಮ್ಮ ಉಸಿರಾಟದ ಮೂಲಕ ನಮ್ಮ ದೇಹದೊಳಗೆ (aspergillosis mode of transmission) ಹೋಗುತ್ತದೆ, ಆದರೆ ನಾವು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ರೋಗ ನಿರೋಧಕ ಶಕ್ತಿ ತುಂಬಾ ದುರ್ಬಲವಾಗಿರುವ ಜನರ ಮೇಲೆ ಈ ಶಿಲೀಂಧ್ರವು ದಾಳಿ ಇಡುತ್ತದೆ. ಅದರಲ್ಲೂ ವಿಶೇಷವಾಗಿ ಇಂದಿನ ದಿನಗಳಲ್ಲಿ ಕೊರೊನಾ ವೈರಸ್ (Covid-19) ಸೋಂಕಿಗೆ ಗುರಿಯಾದ ಅಥವಾ ಅದರಿಂದ ಚೇತರಿಸಿಕೊಳ್ಳುತ್ತಿರುವ ಜನರಲ್ಲಿ ಇಮ್ಯೂನಿಟಿ ದುರ್ಬಲವಾಗಿರುವ ಕಾರಣ ಅವರ ಮೇಲೆ ಈ ಸಿಲೀಂಧ್ರಿ ದಾಳಿ ಮಾಡುತ್ತಿದೆ.

ಇದನ್ನೂ ಓದಿ-PM Modi Big Announcement: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ಪರಿಹಾರ ಧನ

>> ಸಾಮಾನ್ಯವಾಗಿ ಇಮ್ಯೂನಿಟಿ ದುರ್ಬಲವಾಗಿರುವ ಜನರ ಮೇಲೆ ಈ ಶಿಲೀಂಧ್ರಿ ಹಲ್ಲೆ ಮಾಡುತ್ತದೆ. ಅಮೆರಿಕಾದ ಆರೋಗ್ಯ ಸಂಸ್ಥೆಯೊಂದರ ಪ್ರಕಾರ, ಅಸ್ತಮಾ ಇರುವ ಜನರಲ್ಲಿ ಇದು ವ್ಯಾಪಕವಾಗಿ ಹರಡುತ್ತದೆ  ಎನ್ನಲಾಗಿದೆ.

>> ಕ್ರೋನಿಕ್ ಪಲ್ಮೊನರಿ ಅಸ್ಪರ್ಗಿಲೋಸಿಸ್ ಸಾಮಾನ್ಯವಾಗಿ ಕ್ರಾನಿಕ್ ಅಬ್ ಸ್ಟ್ರಾಕ್ಟಿವ್ ಪಲ್ಮೊನರಿ ಡಿಸೀಜ್  ಅಥವಾ ಸಾರ್ಕಾಯಿಡೋಸಿಸ್ ಸೇರಿದಂತೆ ಇತರೆ ಪುಪ್ಪುಸಕ್ಕೆ ಸಂಬಂಧಿಸಿದ ರೋಗಗಳಾಗಿವೆ.

>> ಇದರ ಸ್ಟೆಮ್ ಜೀವಕೋಶ ಕಸಿ ಅಥವಾ ಅಂಗ ಕಸಿ ಯಿಂದ ನಿರ್ಮಾಣಗೊಂಡಿದೆ. ಕ್ಯಾನ್ಸರ್ ಗಾಗಿ ಕೀಮೋಥೆರಪಿಗೆ ಒಳಗಾಗುವ ಜನರಲ್ಲಿ ಇದು ಕಂಡುಬರುತ್ತದೆ.

ಇದನ್ನೂ ಓದಿ- ರಾಜ್ಯದಲ್ಲಿ 1250 ಮಂದಿಗೆ ಬ್ಲಾಕ್ ಫಂಗಸ್: 35 ಮಂದಿ ಸಾವು!

ಲಕ್ಷಣಗಳು (Aspergillosis Symptoms)
>> ಮೂಗು ಸೋರುವಿಕೆ
>>ತಲೆನೋವು
>>ವಾಸನೆ ಗ್ರಹಿಕೆ ಕಡಿಮೆಯಾಗುವಿಕೆ
>>ಕೆಮ್ಮಿನ ಮೂಲಕ ರಕ್ತ ಬರುವಿಕೆ.
>>ಉಸಿರಾಟದಲ್ಲಿ ತೊಂದರೆ
>>ತೂಕ ಕಡಿಮೆಯಾಗುವಿಕೆ.
>>ಆಯಾಸ 

ತಜ್ಞರು ಹೇಳುವ ಪ್ರಕಾರ ಇದು ಬ್ಲಾಕ್ ಫಂಗಸ್ ಗಿಂದ ಕಡಿಮೆ ಮಾರಕವಾಗಿದೆ ಎನ್ನುತ್ತಾರೆ. ಆದರೆ ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎನ್ನುತ್ತಾರೆ. ಇದು ವೈಟ್ ಫಂಗಸ್ ನ ಒಂದು ರೂಪವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಬ್ಲಾಕ್ (Black Fungus)ಅಥವಾ ವೈಟ್ ಫಂಗಸ್ (White Fungus) ಗಳ ಹೋಲಿಕೆಯಲ್ಲಿ ಇದರ ಮಾರಕತೆ ತುಂಬಾ ಕಡಿಮೆಯಾಗಿದೆ.

ಇದನ್ನೂ ಓದಿ-12 ಕೋಟಿ ಡೋಸ್ ಗಳನ್ನು ರಾಷ್ಟ್ರೀಯ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ನೀಡಲಿರುವ ಕೇಂದ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News