ಶ್ರೀನಗರ : ಆರು ವರ್ಷದ ಕಾಶ್ಮೀರಿ ಬಾಲಕಿಯ ಬೇಡಿಕೆ ಕೊನೆಗೂ ಈಡೇರಿದೆ. ದೀರ್ಘ ಕಾಲದವರೆಗೆ ನಡೆಯುವ ಆನ್ ಲೈನ್ ಕ್ಲಾಸ್ (online class) ಮತ್ತು ಹೋಂ ವರ್ಕ್ ಬಗ್ಗೆ ಬಾಲಕಿ ವಿಡಿಯೋ ಮೂಲಕ ಪ್ರಧಾನ ಮಂತ್ರಿ ಮೋದಿಗೆ (Pm Modi) ದೂರು ಸಲ್ಲಿಸಿದ್ದಳು. ಬಾಲಕಿಯ ವಿಡಿಯೀ ವೈರಲ್ ಆಗುತ್ತಿದ್ದಂತೆ ಕಾಶ್ಮೀರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದೆ. ಆನ್ ಲೈನ್ ತರಗತಿಯ ಸಮಯವನ್ನು ನಿಗದಿಪಡಿಸಿದೆ. ಅಲ್ಲದೆ ಹೋಂ ವರ್ಕ್ (Home work) ಬಗ್ಗೆಯೂ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
೪೮ ಗಂಟೆಗಳ ಒಳಗೆ ಹೊಸ ನೀತಿ :
ಬಾಲಕಿಯ ವಿಡಿಯೋ ವೈರಲ್ (Viral video) ಆದ ನಂತರ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಾರ್ಯಪ್ರವೃತರಾಗಿದ್ದಾರೆ. ಮಕ್ಕಳ ಹೋಂವರ್ಕ್ ಹೊರೆ ಕಡಿಮೆ ಮಾಡಲು 48 ಗಂಟೆಗಳ ಒಳಗೆ ನೀತಿ ರೂಪಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj sinha) ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ : ಹೋಂವರ್ಕ್ ವಿರುದ್ಧ ಪ್ರಧಾನಿಗೆ ದೂರು.! ಮುದ್ದು ಕಂದನ ವಿಡಿಯೋ ವೈರಲ್
ಈ ಎಲ್ಲಾ ಬದಲಾವಣೆ ಮಾಡಿದ ಶಿಕ್ಷಣ ಇಲಾಖೆ :
ಪುಟ್ಟ ಬಾಲಕಿಯ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಕೆಲ ಬದಲಾವಣೆಗಳನ್ನು ಮಾಡಲಾಗಿದೆ ಎಂದು, ಮನೋಜ್ ಸಿನ್ಹಾ ಹೇಳಿದ್ದಾರೆ. ಪ್ರಾಥಮಿಕ ಮಕ್ಕಳ ಆನ್ ಲೈನ್ ಕ್ಲಾಸ್ (Online class) ದಿನಕ್ಕೆ 30 ನಿಮಿಷಗಳನ್ನು ಮೀರುವಂತಿಲ್ಲ. ಒಂದರಿಂದ ಎಂಟನೇ ತರಗತಿವರೆಗೆ ಗರಿಷ್ಠ ಒಂದೂವರೆ ಗಂಟೆಗಳ ಅವಧಿಗೆ ಮಾತ್ರ ಕ್ಲಾಸ್ ನಿಗದಿ ಮಾಡಲಾಗಿದೆ. 5 ನೇ ತರಗತಿಯವರೆಗೆ ಹೋಂ ವರ್ಕ್ ನೀಡುವಂತಿಲ್ಲ ಎನ್ನಲಾಗಿದೆ.
The school education department has decided to limit daily online classes for a maximum one and half hours for class 1 to 8, spread across two sessions. For class 9 to 12 online synchronous learning will not be more than 3 hours. https://t.co/ihB3bkxUBa
— Office of LG J&K (@OfficeOfLGJandK) June 1, 2021
ಪ್ರಧಾನಿಗೆ ಮನವಿ ಮಾಡಿದ್ದ ಬಾಲಕಿ :
6 ವರ್ಷದ ಮಕ್ಕಳಿಗೆ ಯಾಕೆ ಇಷ್ಟೋಂದು ಹೊರೆ. ಮೊದಲು ಇಂಗ್ಲೀಷ್, ಗಣಿತ, ಉರ್ದು, ಇತಿಹಾಸ ನಂತರ ಕಂಪ್ಯೂಟರ್ ಕ್ಲಾಸ್ ಇರುತ್ತದೆ. ನನಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕ್ಲಾಸ್ ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಬಾಲಕಿ ವಿಡಿಯೋದಲ್ಲಿ (video) ಬೇಸರ ವ್ಯಕ್ತಪಡಿಸಿದ್ದಳು. ಈ ವಿಡಿಯೋದಲ್ಲಿ ಬಾಲಕಿ ಪ್ರಧಾನ ಮಂತ್ರಿ (PM Modi) ಯನ್ನು ಸಂಭೋದಿಸಿದ್ದಳು.
ಇದನ್ನೂ ಓದಿ : Spitting at Public Place- ಈ ರಾಜ್ಯದಲ್ಲೀಗ ರಸ್ತೆಯಲ್ಲಿ ಉಗುಳುವುದು ದುಬಾರಿಯಾಗಲಿದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.