Spitting at Public Place- ಈ ರಾಜ್ಯದಲ್ಲೀಗ ರಸ್ತೆಯಲ್ಲಿ ಉಗುಳುವುದು ದುಬಾರಿಯಾಗಲಿದೆ!

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ವಿಧಿಸಲಾಗುವ ದಂಡವನ್ನು 200 ರೂ.ನಿಂದ 1200 ರೂ.ಗೆ ಹೆಚ್ಚಿಸಲು ಬಿಎಂಸಿ ಚಿಂತಿಸುತ್ತಿದೆ.

Written by - Yashaswini V | Last Updated : Jun 2, 2021, 06:53 AM IST
  • ದೇಶದ ಈ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕಾಗಿ ಜನರು ಇನ್ನು ಮುಂದೆ ಭಾರಿ ಬೆಲೆ ತೆರಬೇಕಾಗಬಹುದು
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ವಿಧಿಸಲಾಗುವ ದಂಡವನ್ನು 1200 ರೂ.ಗೆ ಹೆಚ್ಚಿಸಲು ಚಿಂತನೆ ನಡೆದಿದೆ
  • ಕಳೆದ ಆರು ತಿಂಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಜನರಿಂದ ಬಿಎಂಸಿ 28.67 ಲಕ್ಷ ರೂ.ವರೆಗೆ ದಂಡ ಸಂಗ್ರಹಿಸಿದೆ
Spitting at Public Place- ಈ ರಾಜ್ಯದಲ್ಲೀಗ ರಸ್ತೆಯಲ್ಲಿ ಉಗುಳುವುದು ದುಬಾರಿಯಾಗಲಿದೆ! title=
Increasing the fine for Spitting at Public Place from Rs 200 to Rs 1200

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕಾಗಿ (Spitting at Public Place) ಜನರು ಇನ್ನು ಮುಂದೆ ಭಾರಿ ಬೆಲೆ ತೆರಬೇಕಾಗಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ವಿಧಿಸಲಾಗುವ ದಂಡವನ್ನು 200 ರೂ.ನಿಂದ 1200 ರೂ.ಗೆ ಹೆಚ್ಚಿಸಲು ಬಿಎಂಸಿ ಚಿಂತಿಸುತ್ತಿದೆ ಎಂದು ಬಿಎಂಸಿಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಬಿಎಂಸಿ ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಾಹಲ್ (Iqbal Singh Chahal)  ಇತ್ತೀಚೆಗೆ ಇದೇ ರೀತಿಯ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು, ಅದರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ (Spitting in Public Places) ದಂಡದ ಮೊತ್ತವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- ರಾಜ್ಯಸಭೆಗೆ ಸ್ವಪನ್ ದಾಸ್‌ಗುಪ್ತಾ ಮರು ನಾಮನಿರ್ದೇಶನ

ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ:
ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರವೇ ಇದನ್ನು ಜಾರಿಗೆ ತರಲಾಗುವುದು ಎಂದು ಬಿಎಂಸಿ (BMC) ಅಧಿಕಾರಿ ತಿಳಿಸಿದ್ದಾರೆ. ಇದನ್ನು ಕಾರ್ಯಗತಗೊಳಿಸಲು, ಮುಂಬೈ ನೈರ್ಮಲ್ಯ ಮತ್ತು ನೈರ್ಮಲ್ಯ ಬೈ-ಕಾನೂನುಗಳು 2006 ರಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ-  CBSE Class 12 Board Exam 2021 Cancelled: 12ನೇತರಗತಿ ಬೋರ್ಡ್ ಪರೀಕ್ಷೆಗಳು ರದ್ದು, ಪ್ರಧಾನಿ ಮೋದಿ ಸಭೆಯಲ್ಲಿ ನಿರ್ಧಾರ

ದಂಡದಿಂದ 28 ಲಕ್ಷ ರೂ. ಸಂಗ್ರಹ:
ವಿಶೇಷವೆಂದರೆ, ಕಳೆದ ಆರು ತಿಂಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಜನರಿಂದ ಬಿಎಂಸಿ 28.67 ಲಕ್ಷ ರೂ.ವರೆಗೆ ದಂಡದ ಮೊತ್ತವನ್ನು ಸಂಗ್ರಹಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News