Garlic For Men At Night: ಪುರುಷರು ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ಸೇವಿಸಿದರೆ ಸಿಗುತ್ತೆ ಅದ್ಭುತ ಪ್ರಯೋಜನ

Garlic For Men At Night: ಬೆಳ್ಳುಳ್ಳಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿಯೊಬ್ಬರೂ ಬೆಳ್ಳುಳ್ಳಿಯನ್ನು ಸೇವಿಸಬಹುದಾದರೂ, ಪುರುಷರು ಇದನ್ನು ರಾತ್ರಿಯ ಸಮಯದಲ್ಲಿ ಸೇವಿಸಿದರೆ ಅದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

Written by - Yashaswini V | Last Updated : Jun 17, 2021, 03:28 PM IST
  • ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಅಂಶವಿದೆ
  • ಇದು ಪುರುಷರ ಹಾರ್ಮೋನ್ ಅನ್ನು ಸರಿಯಾಗಿ ಇಡುತ್ತದೆ
  • ವಿಟಮಿನ್ ಮತ್ತು ಸೆಲೆನಿಯಮ್ ಸಹ ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ
Garlic For Men At Night: ಪುರುಷರು ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ಸೇವಿಸಿದರೆ ಸಿಗುತ್ತೆ ಅದ್ಭುತ ಪ್ರಯೋಜನ title=
ರಾತ್ರಿ ಮಲಗುವ ಮೊದಲು ಪುರುಷರು ಬೆಳ್ಳುಳ್ಳಿಯನ್ನು ಸೇವಿಸಿದರೆ ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ

Garlic For Men At Night: ಆರೋಗ್ಯವೇ ಭಾಗ್ಯ ಎಂದು ಹಿರಿಯರು ಹೇಳುತ್ತಾರೆ. ಯಾರಿಗೇ ಆದರೂ ಆರೋಗ್ಯ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ, ಉತ್ತಮ ಆಹಾರ ಸೇವನೆ ಅವಶ್ಯಕ. ಅಂತಹ ಆಹಾರಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು. ಬೆಳ್ಳುಳ್ಳಿ ಆಹಾರವನ್ನು ಮೃದುಗೊಳಿಸಲು ಬಳಸಲಾಗುತ್ತದೆ. ಇದು ಒಳ್ಳೆಯ ರುಚಿ ನೀಡುವುದು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಅದರಲ್ಲೂ ಮುಖ್ಯವಾಗಿ ಪುರುಷರು ಬೆಳ್ಳುಳ್ಳಿ ಸೇವನೆಯಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.

ಬೆಳ್ಳುಳ್ಳಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿಯೊಬ್ಬರೂ ಬೆಳ್ಳುಳ್ಳಿಯನ್ನು ಸೇವಿಸಬಹುದಾದರೂ, ಪುರುಷರು ಇದನ್ನು ರಾತ್ರಿಯ ಸಮಯದಲ್ಲಿ ಸೇವಿಸಿದರೆ ಅದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ರಾತ್ರಿ ಮಲಗುವ ಮೊದಲು ಪುರುಷರು ಬೆಳ್ಳುಳ್ಳಿಯನ್ನು ಏಕೆ ಸೇವಿಸಬೇಕು ಎಂದು ತಿಳಿಯಿರಿ...

ಇದನ್ನೂ ಓದಿ- ತಲೆದಿಂಬಿನ ಕೆಳಗೆ ಬೆಳ್ಳುಳ್ಳಿ ಎಸಳು ಇಟ್ಟು ಮಲಗಿದರೆ ಸಿಗಲಿದೆ ಅದ್ಬುತ ಪ್ರಯೋಜನ

ರಕ್ತದೊತ್ತಡವನ್ನು ನಿಯಂತ್ರಿಸಿ (Control blood pressure)- ರಕ್ತದೊತ್ತಡದ ತೊಂದರೆ ಇರುವ ಪುರುಷರು ರಾತ್ರಿ ಮಲಗುವ ಮೊದಲು ಬೆಳ್ಳುಳ್ಳಿಯನ್ನು (Garlic For Men At Night) ಸೇವಿಸಬೇಕು. ಬೆಳ್ಳುಳ್ಳಿಯನ್ನು ಸೇವಿಸುವುದರಿಂದ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಸುಲಭ ಎನ್ನಲಾಗುತ್ತದೆ.

ದೇಹದ ದೌರ್ಬಲ್ಯ ನಿವಾರಣೆ (Remove weakness of the body)- ಪುರುಷರು ರಾತ್ರಿ ಬೆಳ್ಳುಳ್ಳಿ (Garlic) ಯನ್ನು ಸೇವಿಸಿದರೆ, ಅದು ಅವರ ದೇಹದ ದೌರ್ಬಲ್ಯವನ್ನು ತೆಗೆದುಹಾಕುತ್ತದೆ. ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಅಂಶವಿದೆ, ಇದು ಪುರುಷರ ಹಾರ್ಮೋನ್ ಅನ್ನು ಸರಿಯಾಗಿ ಇಡುತ್ತದೆ.

ಇದನ್ನೂ ಓದಿ- Viral video : ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ವಿಧಾನ ತಿಳಿಯಿರಿ

ದುರ್ಬಲತೆಯ ಅಪಾಯ ಕಡಿಮೆಯಾಗುತ್ತದೆ (Risk of impotence away)- ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಪುರುಷರಲ್ಲಿ ದುರ್ಬಲತೆಯ ಅಪಾಯವೂ ನಿವಾರಣೆಯಾಗುತ್ತದೆ. ವಿಟಮಿನ್ ಮತ್ತು ಸೆಲೆನಿಯಮ್ ಸಹ ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ವೀರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಲೈಂಗಿಕ ಕ್ಷೀಣತೆ ಸಮಸ್ಯೆಗೆ ಪರಿಹಾರ (Solution to the problem of sexual atrophy) - ಪ್ರಾಚೀನ ಕಾಲದಲ್ಲಿ, ಲೈಂಗಿಕ ಕ್ಷೀಣತೆಯಂತಹ ಸಮಸ್ಯೆಯನ್ನು ತೆಗೆದುಹಾಕಲು ಅನೇಕ ರೀತಿಯ ಗಿಡಮೂಲಿಕೆಗಳನ್ನು ಬಳಸಲಾಗುತ್ತಿತ್ತು. ಆ ಗಿಡಮೂಲಿಕೆಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು. ಪುರುಷರು ರಾತ್ರಿ ಮಲಗುವ ಮೊದಲು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹಲವು ರೀತಿಯ ಲೈಂಗಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. 

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News