Business Opportunity: ಸ್ವಂತ ಉದ್ಯಮ ಆರಂಭಿಸಬೇಕೆ? ಮೋದಿ ಸರ್ಕಾರ ನೀಡುತ್ತೆ 10 ಲಕ್ಷ ರೂ. ಧನ ಸಹಾಯ

Business Opportunity - ಕೊರೊನಾ ಮಹಾಮಾರಿಯ (Corona Pandemic) ಕಾಲದಲ್ಲಿ ದೇಶಾದ್ಯಂತ ಹಲವು ಉದ್ಯಮಗಳು ಸ್ಥಗಿತಗೊಂಡಿವೆ. ಹಲವು ರೀತಿಯ ವ್ಯವಹಾರಗಳು ನಿಂತುಹೋಗಿವೆ. ಆದರೆ, ನಿಮ್ಮ ಪಾಲಿಗೆ ಅವಕಾಶ ಮಾತ್ರ ಯಾವಾಗಲು ಸಿದ್ಧವಾಗಿದೆ.

Written by - Nitin Tabib | Last Updated : Jul 9, 2021, 06:34 PM IST
  • ಕೊರೊನಾ ಮಹಾಮಾರಿಯ ಕಾಲದಲ್ಲಿ ದೇಶಾದ್ಯಂತ ಹಲವು ಉದ್ಯಮಗಳು ಸ್ಥಗಿತಗೊಂಡಿವೆ.
  • ಹಲವು ರೀತಿಯ ವ್ಯವಹಾರಗಳು ನಿಂತುಹೋಗಿವೆ.
  • ಆದರೆ, ನಿಮ್ಮ ಪಾಲಿಗೆ ಅವಕಾಶ ಮಾತ್ರ ಯಾವಾಗಲು ಸಿದ್ಧವಾಗಿದೆ.
Business Opportunity: ಸ್ವಂತ ಉದ್ಯಮ ಆರಂಭಿಸಬೇಕೆ? ಮೋದಿ ಸರ್ಕಾರ ನೀಡುತ್ತೆ 10 ಲಕ್ಷ ರೂ. ಧನ ಸಹಾಯ title=
Business Opportunity (File Photo)

Business Opportunity: ಕೊರೊನಾ ಮಹಾಮಾರಿಯ (Covid-19 Pandemic) ಕಾಲದಲ್ಲಿ ದೇಶಾದ್ಯಂತ ಹಲವು ಉದ್ಯಮಗಳು (Business) ಸ್ಥಗಿತಗೊಂಡಿವೆ. ಹಲವು ರೀತಿಯ ವ್ಯವಹಾರಗಳು ನಿಂತುಹೋಗಿವೆ. ಆದರೆ, ನಿಮ್ಮ ಪಾಲಿಗೆ ಅವಕಾಶ ಮಾತ್ರ ಯಾವಾಗಲು ಸಿದ್ಧವಾಗಿದೆ. ಸ್ವಾವಲಂಭಿ ಭಾರತ ನಿರ್ಮಿಸುವ ದಾರಿಯಲ್ಲಿ ನಿಮ್ಮನ್ನು ನೀವು ಬಲಶಾಲಿಯಾಗಿಸುವುದು ತುಂಬಾ ಅವಶ್ಯಕವಾಗಿದೆ. ಪ್ರಧಾನಿ ಮೋದಿ (PM Narendra Modi) ಕೂಡ ಈ ಮಾತನ್ನು ಪದೇ ಪದೇ ಒತ್ತಿ ಹೇಳುತ್ತಾರೆ. ಹೀಗಿರುವಾಗ ಮೋದಿ ಸರ್ಕಾರ ಸ್ಥಗಿತಗೊಂಡಿರುವ ಉದ್ಯಮಗಳಿಗೆ ಮರುಚೇತನ ನೀಡಲು ಅವಕಾಶ ನೀಡುತ್ತಿದೆ. 

Modi Government ನ ಈ ಯೋಜನೆಯ ಲಾಭ ಪಡೆಯಿರಿ
ಒಂದು ವೇಳೆ ನೀವೂ ಕೂಡ ಸ್ವಂತ ಉದ್ಯಮ ಆರಂಭಿಸಲು ಬಯಸುತ್ತಿದ್ದರೆ, ಕೇಂದ್ರದ ಮೋದಿ ಸರ್ಕಾರ (Modi Government) ಇದಕ್ಕಾಗಿ ನಿಮಗೆ ಧನ ಸಹಾಯ ಒದಗಿಸುತ್ತದೆ. ಸಣ್ಣ ವ್ಯಾಪಾರ ಆರಂಭಿಸಲು ಅಥವಾ ಹಳೆ ನಿಂತುಹೋಗಿರುವ ವ್ಯಾಪಾರ ಆರಂಭಿಸಲು ಸರ್ಕಾರ 10 ಲಕ್ಷ ರೂ. ಸಾಲ ನೀಡುವ ಯೋಜನೆಯನ್ನು ಆರಂಭಿಸಿದೆ.

PMMY Loan Scheme ಅಡಿ ಸಿಗುತ್ತದೆ ಸಾಲ
ಇದಕ್ಕಾಗಿ ಮೋದಿ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು (Pradhan Mantri Mudra Yojana)ಆರಂಭಿಸಿದೆ. ಬ್ಯಾಂಕ್ ಗಳ ನಿಯಮಗಳನ್ನು  ಸಂಪೂರ್ಣವಾಗಿ ಅನುಸರಿಸಲು ಆಗದೆ ಇರುವ ಜನರಿಗೆ ಈ ಯೋಜನೆ ತುಂಬಾ ಲಾಭಕಾರಿಯಾಗಿದೆ. ಗೃಹ ಉದ್ಯೋಗ ಹೊಂದಿರುವ ಅಥವಾ ಪಾರ್ಟ್ನರ್ ಶಿಪ್ ದಾಖಲೆ ಇರುವ ಯಾವುದೇ ವ್ಯಕ್ತಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿ ಸಾಲವನ್ನು ಪಡೆಯಬಹುದು. 

ಮೂರು ಹಂತಗಳಲ್ಲಿ ಸಾಲ ಸಿಗುತ್ತದೆ
ಪ್ರಧಾನ ಮಂತ್ರಿ ಮುದ್ರಾ (PMMY) ಯೋಜನೆಯ ಅಡಿ ಒಟ್ಟು ಮೂರು ಹಂತಗಳಲ್ಲಿ ಸಾಲ ನೀಡಲಾಗುತ್ತದೆ. ಸರ್ಕಾರ ಇದಕ್ಕೆ ಶಿಶು ಸಾಲ, ಕಿಶೋರ ಸಾಲ ಹಾಗೂ ತರುಣ ಸಾಲಗಳೆಂದು ಹೆಸರಿಸಿದೆ.
>> ಶಿಶು ಸಾಲ ಯೋಜನೆ -  ಈ ಯೋಜನೆಯ ಅಡಿ ಅಂಗಡಿ ತೆರೆಯಲು ರೂ.50000 ವರೆಗೆ ಸಾಲ ಪಡೆಯಬಹುದು. 
>> ಕಿಶೋರ ಸಾಲ ಯೋಜನೆ -  ಈ ಯೋಜನೆಯ ಅಡಿ ನೀವು 50,000 ದಿಂದ 5 ಲಕ್ಷ ರೂ.ಗಳ ವರೆಗೆ ಸಾಲ ಪಡೆಯಬಹುದು.
>> ತರುಣ ಸಾಲ ಯೋಜನೆ  - ಒಂದು ವೇಳೆ ನೀವು ಸಣ್ಣ ಗಾತ್ರದ ಉದ್ಯಮ ಆರಂಭಿಸಲು (Small Business Opportunity) ಯೋಜನೆ ರೂಪ್ಸುತ್ತಿದ್ದರೆ, ನಿಮಗೆ ತರುಣ ಸಾಲ ಯೋಜನೆಯ ಅಡಿ ರೂ.5 ಲಕ್ಷದಿಂದ ರೂ.10 ಲಕ್ಷಗಳವರೆಗೆ ಸಾಲ ಸಿಗುತ್ತದೆ. 

ಇದನ್ನೂ ಓದಿ-ಆರ್ಥಿಕವಾಗಿ ತೊಂದರೆಗೊಳಗಾದ ಗ್ರಾಹಕರಿಗಾಗಿ ಮನೆ ಮನೆ ರೇಶನ್ ಸ್ಕೀಮ್ ಆರಂಭಿಸಿದ IDFC First Bank

ಯಾರು ಈ ಸಾಲ ಪಡೆಯಬಹುದು?
ತನ್ನ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಯಾವುದೇ ಭಾರತೀಯ ಪ್ರಜೆ ಪಿಎಂಎಂವೈ (PMMY) ಅಡಿಯಲ್ಲಿ ಸಾಲ ಪಡೆಯಬಹುದು. ನೀವು ಪ್ರಸ್ತುತ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಮತ್ತು ಅದಕ್ಕಾಗಿ ಹಣದ ಅಗತ್ಯವಿದ್ದರೆ, ನೀವು ಪ್ರಧಾನ್ ಮಂತ್ರಿ ಮುದ್ರಾ ಯೋಜನೆಯಡಿ 10 ಲಕ್ಷ ರೂಪಾಯಿಗಳ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಏಪ್ರಿಲ್ 2015 ರಲ್ಲಿ ಪ್ರಾರಂಭವಾಗಿದೆ.

ಇದನ್ನೂ ಓದಿ- Zomato App ನಲ್ಲಿ ಈ ವಸ್ತುವನ್ನು ಹುಡುಕಿದರೆ ಲಕ್ಷಾಧಿಪತಿಯಾಗುವ ಅವಕಾಶ..!

ಎಲ್ಲಿಂದ ಈ ಸಾಲ ಪಡೆಯಬಹುದು?
ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿ ಯಾವುದೇ ಸರ್ಕಾರಿ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಸಹಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್ ಅಥವಾ ವಿದೇಶಿ  ಬ್ಯಾಂಕ್ ನಿಂದ ಸಾಲ ಪಡೆಯಬಹುದು. ಇದಕ್ಕಾಗಿ RBI, 27 ಸರ್ಕಾರಿ ಬ್ಯಾಂಕ್, 17 ಖಾಸಗಿ ಬ್ಯಾಂಕ್, 31 ಗ್ರಾಮೀಣ ಬ್ಯಾಂಕ್, 4 ಸಹಕಾರಿ ಬ್ಯಾಂಕ್, 36 ಮೈಕ್ರೋ ಫೈನಾನ್ಸ್  ಸಂಸ್ಥೆಗಳು ಹಾಗೂ 25 ಬ್ಯಾಂಕೇತರ ಆರ್ಥಿಕ ಸಂಸ್ಥೆಗಳಿಗೆ ಮುದ್ರಾ ಸಾಲ ನೀಡಲು ಅಧಿಕೃತ ಅನುಮತಿ ನೀಡಿದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಮುದ್ರಾ ಯೋಜನೆಯ ಅಧಿಕೃತ ವೆಬ್ ಸೈಟ್ ಆಗಿರುವ  mudra.org.in ಗೆ ಭೇಟಿ ನೀಡಿ. 

ಇದನ್ನೂ ಓದಿ-PPF : ನೀವು ದಿನಕ್ಕೆ  ₹416 ಹೂಡಿಕೆ ಮಾಡಿ 55 ನೇ ವಯಸ್ಸಿನಲ್ಲಿ ಪಡೆಯಿರಿ ₹1 ಕೋಟಿ : ಹೇಗೆ ಇಲ್ಲಿಯೇ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News