ಆರ್ಥಿಕವಾಗಿ ತೊಂದರೆಗೊಳಗಾದ ಗ್ರಾಹಕರಿಗಾಗಿ ಮನೆ ಮನೆ ರೇಶನ್ ಸ್ಕೀಮ್ ಆರಂಭಿಸಿದ IDFC First Bank

IDFC First Bank  ಮನೆ ಬಾಗಿಲಿಗೆ ಪಡಿತರ ಯೋಜನೆಯನ್ನು ಪ್ರಾರಂಭಿಸಿದೆ. ಬ್ಯಾಂಕ್ ಸಿಬ್ಬಂದಿ ಸಹಯೋಗದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ.

Written by - Ranjitha R K | Last Updated : Jul 9, 2021, 05:38 PM IST
  • ಮನೆ ಬಾಗಿಲಿಗೆ ಪಡಿತರ ಯೋಜನೆ ಪ್ರಾರಂಭಿಸಿದ IDFC First Bank
  • ಸಿಬ್ಬಂದಿ ಸಹಯೋಗದೊಂದಿಗೆ ಈ ಯೋಜನೆಯನ್ನು ಆರಂಭಿಸಿದ ಬ್ಯಾಂಕ್
  • ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗಾಗಿ ಜಾರಿಯಾದ ಯೋಜನೆ
ಆರ್ಥಿಕವಾಗಿ ತೊಂದರೆಗೊಳಗಾದ ಗ್ರಾಹಕರಿಗಾಗಿ ಮನೆ ಮನೆ ರೇಶನ್ ಸ್ಕೀಮ್ ಆರಂಭಿಸಿದ IDFC First Bank title=
ಮನೆ ಬಾಗಿಲಿಗೆ ಪಡಿತರ ಯೋಜನೆ ಪ್ರಾರಂಭಿಸಿದ IDFC First Bank (photo india.com)

ನವದೆಹಲಿ : IDFC First Bank  : IDFC First Bank  ಮನೆ ಬಾಗಿಲಿಗೆ ಪಡಿತರ ಯೋಜನೆಯನ್ನು ಪ್ರಾರಂಭಿಸಿದೆ. ಬ್ಯಾಂಕ್ ಸಿಬ್ಬಂದಿ ಸಹಯೋಗದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಕಡಿಮೆ ಆದಾಯ ಹೊಂದಿರುವ ಗ್ರಾಹಕರು ಮತ್ತು ಕೋವಿಡ್‌ನಿಂದಾಗಿ (COVID-19) ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಬ್ಯಾಂಕ್ ವತಿಯಿಂದ ಜಾರಿ ಮಾಡಲಾದ ಈ ಕಿಟ್ ನಲ್ಲಿ 10 ಕೆಜಿ ಗೋಧಿ  ಹಿಟ್ಟು ಮತ್ತು ಅಕ್ಕಿ, 2 ಕೆಜಿ ಬೇಳೆ, 1 ಕೆಜಿ ಸಕ್ಕರೆ, 1 ಲೀಟರ್ ಅಡುಗೆ ಎಣ್ಣೆ, 5 ಪ್ಯಾಕೆಟ್ ಮಸಾಲೆಗಳು, ಚಹಾ ಪುಡಿ, ಬಿಸ್ಕತ್ತು ಪ್ಯಾಕೆಟ್‌ಗಳನ್ನು ನೀಡಲಾಗುತ್ತಿದೆ. ಬ್ಯಾಂಕಿನ ಸಿಬ್ಬಂದಿ ಬೆಂಬಲದೊಂದಿಗೆ ಈ ಯೋಜನೆಯನ್ನು ಒಂದು ತಿಂಗಳ ಅವಧಿಗೆ ಆರಂಭಿಸಲಾಗಿದೆ. 

ಬ್ಯಾಂಕ್ (Bank) ವತಿಯಿಂದ ಇದನ್ನು ಗ್ರಾಹಕರ ಮನೆಗೆ ತಲುಪಿಸಲಾಗುವುದು. ಬ್ಯಾಂಕಿನ ಸಿಬ್ಬಂದಿ ಮೂಲಕವೇ ದೂರದ ಹಳ್ಳಿಗಳಿಗೆ ಈ ಸಾಮಗ್ರಿಗಳನ್ನು ತಲುಪಿಸಲಾಗುವುದು. ಇದಲ್ಲದೆ ಬಡ ಕುಟುಂಬಗಳಿಗೆ 1,800 ರೂ.ಗಳ ಪ್ರಿಪೇಯ್ಡ್ ಕಾರ್ಡ್ (Prepaid card) ಅನ್ನು ಒದಗಿಸಲಾಗುತ್ತದೆ. ಅಗತ್ಯ ವಸ್ತುಗಳನ್ನು ಖರೀದಿಗೆ ಇದನ್ನು ಬಳಸಬಹುದಾಗಿದೆ. 

ಇದನ್ನೂ ಓದಿ : Zomato App ನಲ್ಲಿ ಈ ವಸ್ತುವನ್ನು ಹುಡುಕಿದರೆ ಲಕ್ಷಾಧಿಪತಿಯಾಗುವ ಅವಕಾಶ..!

ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಆದರೆ, ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬಹುದು,   ಎಂದು ಬ್ಯಾಂಕ್ ಸಿಇಒ ವಿ ವೈದ್ಯನಾಥನ್ (V Vaidyanathan) ಹೇಳಿದರು. ನಮ್ಮಿಂದ ಸಾಧ್ಯವಾಗುವ ಮಟ್ಟಿಗೆ ನಮ್ಮ ಗ್ರಾಹಕರನ್ನು ಬೆಂಬಲಿಸಲಾಗುವುದು ಎಂದು ಅವರು  ಹೇಳಿದ್ದಾರೆ.  ಗ್ರಾಹಕರನ್ನು ಬೆಂಬಲಿಸುವ ಉದ್ದೇಶದಿಂದಲೇ ಈ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ. 

ಯೋಜನೆಯ ಲಾಭವನ್ನು ಪಡೆಯಲು ಬಯಸುವ ಗ್ರಾಹಕರು, ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು. ಮಹಾರಾಷ್ಟ್ರ (Maharastra), ಹರಿಯಾಣ ಮತ್ತು ರಾಜಸ್ಥಾನದಲ್ಲಿ ಈವರೆಗೆ 1,000 ಕಿಟ್‌ಗಳನ್ನು ವಿತರಿಸಲಾಗಿದೆ. ಇದಕ್ಕಾಗಿ ಬ್ಯಾಂಕಿನ ಸಿಬ್ಬಂದಿ ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದಾರೆ.

ಬ್ಯಾಂಕ್ ನೌಕರರ ಕೋವಿಡ್ ಕೇರ್ ಸ್ಕೀಮ್ 2021 (Bank Employee covid care scheme) ಅನ್ನು ಪ್ರಾರಂಭಿಸಿದೆ. ಈ ಮೂಲಕ, ಕೋವಿಡ್‌ನಿಂದಾಗಿ ತೊಂದರೆಗೊಳಗಾದ  ಬಡ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ.

ಇದನ್ನೂ ಓದಿ : PPF : ನೀವು ದಿನಕ್ಕೆ  ₹416 ಹೂಡಿಕೆ ಮಾಡಿ 55 ನೇ ವಯಸ್ಸಿನಲ್ಲಿ ಪಡೆಯಿರಿ ₹1 ಕೋಟಿ : ಹೇಗೆ ಇಲ್ಲಿಯೇ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News