ಬಿಜಿಂಗ್: Uighur Muslims Issue - ಚೀನಾ ಹಾಗೂ ಅಮೇರಿಕಾ ನಡುವಿನ ಹಗ್ಗಜಗ್ಗಾಟ ಮತ್ತೆ ತೀವ್ರಗೊಂಡಿದೆ. ಅಮೇರಿಕಾ ಚೀನಾ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ (US Blacklisted Chinese Companies). ಉಯಿಗರ್ ಸಮುದಾಯ (Uighur Muslim Community) ಮತ್ತು ಇತರ ಮುಸ್ಲಿಂ ಜನಾಂಗೀಯ ಅಲ್ಪಸಂಖ್ಯಾತರ ಕಿರುಕುಳದಲ್ಲಿ ಚೀನಾದ ಕಂಪೆನಿಗಳ ಪಾತ್ರದ ಆರೋಪದ ಹಿನ್ನೆಲೆ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಯುಎಸ್ ಕ್ರಮಕ್ಕೆ ಉತ್ತರಿಸಲು "ಅಗತ್ಯ ಕ್ರಮಗಳನ್ನು" ತೆಗೆದುಕೊಳ್ಳುವುದಾಗಿ ಚೀನಾ ಭಾನುವಾರ ಘೋಷಿಸಿದೆ.
ಅಮೇರಿಕಾ (US) ಕ್ರಮವನ್ನು ವಿರೋಧಿಸಿದ ಚೀನಾ (China)
ಈ ಕುರಿತು ಹೇಳಿಕೆ ನೀಡಿರುವ ಅಮೆರಿಕಾದ ವಾಣಿಜ್ಯ ಸಚಿವಾಲಯ, ಅಮೇರಿಕಾ ತೆಗೆದುಕೊಂಡಿರುವ ಈ ಕ್ರಮ 'ಚೀನಾ ಉದ್ಯಮದ ಮೇಲೆ ಅನಗತ್ಯ ದಬ್ಬಾಳಿಕೆ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ವ್ಯಾಪಾರ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ' ಎಂದು ಹೇಳಿದೆ.
ತನ್ನ ಕಂಪನಿಗಳ ಹಿತರಕ್ಷಣೆಗೆ ಮುಂದಾಗಲಿದೆ ಚೀನಾ
'ಚೀನಾ ತನ್ನ ಕಂಪನಿಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ' ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ- Coronavirus Latest News: ಕೊರೊನಾಗೆ ಸಂಬಂಧಿಸದಂತೆ ಬೆಚ್ಚಿಬೀಳಿಸುವ ಮಾಹಿತಿ ಪ್ರಕಟ, ವೈರಸ್ ವಿರುದ್ಧದ ಹೋರಾಟ ಇನ್ನಷ್ಟು ಕಠಿಣ
ಪ್ರತಿಕ್ರಿಯೆ ನೀಡಲು ಆರಂಭಿಸಿದ ಚೀನಾ (China To Retaliate US)
ಪಶ್ಚಿಮ ಪ್ರಾಂತ್ಯದ ಶಿನ್ಜಿಯಾಂಗ್ ನಲ್ಲಿ ಉಯಿಗರ್ ಸಮುದಾಯ ಜನರನ್ನು ಅಕ್ರಮವಾಗಿ ಬಂಧಿಸಿ, ಅವರಿಂದ ಬಲವಂತವಾಗಿ ಕೆಲಸ ಮಾಡಿಸಿರುವ ಆರೋಪವನ್ನು ಚೀನಾ ಖಂಡಿಸಿದೆ. ಇದರ ಜೊತೆಗೆ ತನ್ನ ಕಂಪನಿಗಳು ಮತ್ತು ಅಧಿಕಾರಿಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಗೆ ಉತ್ತರವಾಗಿ ವಿಜಾ ಹಾಗೂ ಆರ್ಥಿಕ ಸಂಬಂಧಗಳ ಮೇಲೆ ನಿರ್ಬಂಧನೆ ವಿಧಿಸಲು ಆರಂಭಿಸಿದೆ.
ಇದನ್ನೂ ಓದಿ- Study: ಈ ಜನರು Coronavirus ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತೆ ಸಂಶೋಧನೆ!
ಚೀನಾ ಕಂಪನಿಗಳ ಮೇಲೆ ಏಕೆ ನಿರ್ಬಂಧ ವಿಧಿಸಲಾಗಿದೆ
ಈ ಕುರಿತು ಶುಕ್ರವಾರ ಹೇಳಿಕೆ ಹೊರಡಿಸಿದ್ದ ಅಮೆರಿಕಾದ ವಾಣಿಜ್ಯ ವಿಭಾಗ. "ಎಲೆಕ್ಟ್ರಾನಿಕ್, ಟೆಕ್ನಾಲಜಿ ಕಂಪನಿಗಳು ಮತ್ತು ಇತರೆ ವ್ಯಾಪಾರ ಘಟಕಗಳು ಶಿನ್ಜಿಯಾಂಗ್ ನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ 'ಚೀನಾ ಸರ್ಕಾರದ ದಬ್ಬಾಳಿಕೆ, ಸಾಮೂಹಿಕ ಬಂಧನ ಹಾಗೂ ಹೈಟೆಕ್ ಸರ್ವಿಲೆನ್ಸ್ ಕ್ಯಾಂಪೇನ್ ಗಳನ್ನು" ಬಲಪಡಿಸಲು ಸಹಾಯ ಮಾಡಿವೆ ಎಂದು ಆರೋಪಿಸಿದೆ. ಈ ನಿರ್ಬಂಧನೆಗಳ ಅಡಿ ಅಮೇರಿಕಾ ಈ ಚೀನಿ ಕಂಪನಿಗಳ ಸರಕುಗಳ ಮಾರಾಟ ನಡೆಸುವುದಿಲ್ಲ ಎಂದಿದೆ.
ಇದನ್ನೂ ಓದಿ-Study: ಈ ಜನರು Coronavirus ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತೆ ಸಂಶೋಧನೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.