ನವದೆಹಲಿ: ರಿಯೊ ಡಿ ಜನೈರೊ ಒಲಿಂಪಿಕ್ಸ್ 2016 ರಲ್ಲಿ ದೀಪಾ ಕರ್ಮಕರ್ (Dipa Karmakar) ಫೈನಲ್‌ಗೆ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ ಆ ಕ್ಷಣವನ್ನು ಭಾರತೀಯ ಕ್ರೀಡಾ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ದೀಪಾಗೆ ಕಂಚಿನ ಪದಕ ಗೆಲ್ಲಲು ಸಾಧ್ಯವಾಗದಿದ್ದರೂ, ಅವರು ಖಂಡಿತವಾಗಿಯೂ ಅನೇಕ ಆಟಗಾರರಿಗೆ ಸ್ಫೂರ್ತಿಯಾದರು.
ದೀಪ ಕರ್ಮಕರ್ ಹಾದಿಯಲ್ಲಿ ಪ್ರಣತಿ ನಾಯಕ್ :
ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics) ಭಾರತದ ಜಿಮ್ನಾಸ್ಟ್ ದೀಪಾ ಕರ್ಮಕರ್ ಕಾಣಿಸುವುದಿಲ್ಲ, ಆದರೆ ಪ್ರಣತಿ ನಾಯಕ್ (Pranati Nayak) ಅವರ ಹೆಜ್ಜೆಗಳನ್ನು ಅನುಸರಿಸಿ ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ.
ಪ್ರಣತಿ ಬಸ್ ಚಾಲಕನ ಮಗಳು :
ಪ್ರಣತಿ ನಾಯಕ್ (Pranati Nayak) ಪಶ್ಚಿಮ ಬಂಗಾಳದ ಮಿಡ್ನಾಪೋರ್ ಜಿಲ್ಲೆಯವರಾಗಿದ್ದು, ಅವರು ಮಧ್ಯಮ ಕುಟುಂಬದಿಂದ ಬಂದವರು. ಆಕೆಯ ತಂದೆ ಬಸ್ ಚಾಲಕರಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪ್ರಣತಿ ಸ್ಪರ್ಧೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ತಮ್ಮ ಮಗಳಿಗೆ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದು ತಮಗೆ ಬಹಳ ಹೆಮ್ಮೆಯ ವಿಷಯ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ- India vs England 2021: ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು!
ಇದೇ ವೇಳೆ ತಮಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಲು ಅವಕಾಶ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಣತಿ ನಾಯಕ್ (Pranati Nayak), ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಪ್ರಣತಿ ನಾಯಕ್, ಕರೋನಾ ಸಾಂಕ್ರಾಮಿಕದಿಂದಾಗಿ ನಾನು ಒಂದು ವರ್ಷಕ್ಕೂ ಹೆಚ್ಚು ಸಮಯ ಮನೆಯಲ್ಲಿಯೇ ಇದ್ದೇ. ಇದೀಗ ಕಳೆದ ಎರಡು ತಿಂಗಳಿನಿಂದ ಮತ್ತೆ ತರಬೇತಿಯನ್ನು ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಕೊರೊನಾವೈರಸ್ (Coronavirus) ಸಾಂಕ್ರಾಮಿಕ ಯುಗದಲ್ಲಿ ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನ ಒಂದೇ ರೀತಿ ಆಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪ್ರಣತಿ ನಾಯಕ್, ನಾನು ಇತರ ಜಿಮ್ನಾಸ್ಟ್‌ಗಳ ಸಿದ್ಧತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಶಕ್ತಿಯಿರುವವರು ಲಾಕ್‌ಡೌನ್‌ನಲ್ಲಿಯೂ ಸಹ ನಿರಂತರವಾಗಿ ತರಬೇತಿ ಪಡೆಯುತ್ತಿದ್ದರು. ಆದರೆ ನನ್ನ ಬಳಿ ಫಿಟ್‌ನೆಸ್‌ಗಾಗಿ ಯಾವುದೇ ಜಿಮ್ ಇರಲಿಲ್ಲ. ಈ ದೊಡ್ಡ ಪಂದ್ಯಾವಳಿಗಾಗಿ ಮನೆಯಲ್ಲಿಯೇ ನಾನು ನನ್ನನ್ನು ಸಿದ್ಧಪಡಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- ರಿಶಬ್ ಪಂತ್ ನಂತರ ಸಹಾಯಕ ಸಿಬ್ಬಂದಿಯೊಬ್ಬರಿಗೆ ಕೊರೊನಾ ಧೃಢ
ಟೋಕಿಯೊದ ಏಕೈಕ ಭಾರತೀಯ ಜಿಮ್ನಾಸ್ಟ್:
ಪ್ರಣತಿ ನಾಯಕ್ ಅವರು ದೀಪ ಕರ್ಮಕರ್ ನಂತರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಎರಡನೇ ಭಾರತೀಯ ಮಹಿಳಾ ಜಿಮ್ನಾಸ್ಟ್ ಆಗಿದ್ದಾರೆ. ಇದಲ್ಲದೆ ಪ್ರಣತಿ ನಾಯಕ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಏಕೈಕ ಭಾರತೀಯ ಜಿಮ್ನಾಸ್ಟ್ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ