ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಭಾನುವಾರ 23ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೆಂದರೆ ತಮ್ಮ ಹುಟ್ಟುಹಬ್ಬದ ಸಂಭ್ರಮದಂದೇ ಇಶಾನ್ ಕಿಶನ್ ಮತ್ತು ಅವರ ಸಹವರ್ತಿ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕಳೆದ 2 ಐಪಿಎಲ್ ಟೂರ್ನಿಗಳಲ್ಲಿ ತಮ್ಮ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿಕೊಂಡಿರುವ ಇಶಾನ್(Ishan Kishan) ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ತಮ್ಮ ಸ್ಫೋಟಕ ಬ್ಯಾಟಿಂಗ್ ವೈಖರಿಯಿಂದ ಇಶಾನ್ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದು, ಕಡಿಮೆ ಅವಧಿಯಲ್ಲಿಯೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ವಿರುದ್ಧ 99 ರನ್ ಸಿಡಿಸಿದ್ದ ಇಶಾನ್ ಕಿಶನ್ ಗೆ 22 ವರ್ಷದ ಸೂಪರ್ ಮಾಡೆಲ್ ಅದಿತಿ ಹುಂಡಿಯಾ(Aditi Hundia) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಸಂದೇಶ ನೀಡಿದ್ದರು.
ಇದನ್ನೂ ಓದಿ: Sri Lanka vs India, 1st ODI: ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್
ಆ ಬಳಿಕ ಇಶಾನ್ ಮತ್ತು ಅದಿತಿ ಹುಂಡಿಯಾ ನಡುವೆ ಏನೋ ಗುಸು-ಗುಸು ನಡೆಯುತ್ತಿದೆ ಎಂಬ ವದಂತಿಗಳು ಹರಡಿದ್ದವು. ಸೂಪರ್ ಮಾಡೆಲ್ ಅದಿತಿ ಹುಂಡಿಯಾ ಕಾರಣಕ್ಕೆ ಇಶಾನ್ ಅನೇಕ ವೇಳೆ ಮೈದಾನದಿಂದ ಹೊರಗೆ ಸುದ್ದಿಯಾಗಿದ್ದಾರೆ. ಅದಿತಿ ಅವರು ಇಶಾನ್ ಅವರ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್(Mumbai Indians) ನ ಕಟ್ಟಾ ಅಭಿಮಾನಿಯಾಗಿದ್ದಾರೆ. ಇಶಾನ್ ಯಾವಾಗ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಡುತ್ತಾರೋ ಆಗ ಅದಿತಿ ಅವರನ್ನು ಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಾರೆ. ಹೀಗಾಗಿ ಇಶಾನ್ ಕಿಶನ್ ಅವರು ಅದಿತಿ ಹುಂಡಿಯಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆಂಬ ಗಾಳಿಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇಬ್ಬರು ಅಧಿಕೃತವಾಗಿ ಏನೂ ಹೇಳಿಕೊಂಡಿಲ್ಲ. ಆದರೆ ಅದಿತಿ ಇಶಾನ್ ಅವರ ಪ್ರೇಯಸಿ, ಇಬ್ಬರು ಗುಟ್ಟಾಗಿ ಡೇಟಿಂಗ್(Dating) ಮಾಡುತ್ತಿದ್ದಾರೆಂಬ ಗುಲ್ಲು ಹರಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಎಲೈಟ್ ಮಿಸ್ ರಾಜಸ್ಥಾನ್ 2016ರ ಸ್ಪರ್ಧೆಯಲ್ಲಿ ಅದಿತಿ ಅವರು ಮಿಸ್ ಬ್ಯೂಟಿಫುಲ್ ಐಸ್ ಮತ್ತು ಮಿಸ್ ಬಾಡಿ ಬ್ಯೂಟಿಫುಲ್ ಮುಂತಾದ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸೂಪರ್ ಮಾಡೆಲ್ ಅದಿಯವರು ಎಲೈಟ್ ಮಿಸ್ ರಾಜಸ್ಥಾನ್ 2016 ರಲ್ಲಿ ಭಾಗವಹಿಸಿ ಪ್ರಥಮ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದರು.
ಅದಿತಿ ಮಿಸ್ ದಿವಾ 2018 ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದರು. ಅಲ್ಲಿ ಅವರು ಮಿಸ್ ದಿವಾ ಸೂಪರ್ ನ್ಯಾಷನಲ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಬಳಿಕ ಪೋಲೆಂಡ್ ನಲ್ಲಿ ನಡೆದ ಪ್ರತಿಷ್ಠಿತ ಮಿಸ್ ಸೂಪರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಅದಿತಿ ತಮ್ಮ ಮಾಡೆಲಿಂಗ್ ಮತ್ತು ಫ್ಯಾಷನ್ ಜರ್ನಿಯನ್ನು ಶುರು ಮಾಡಿದ್ದು ಮಿಸ್ ಇಂಡಿಯಾ 2017ರ ಸ್ಪರ್ಧೆಯೊಂದಿಗೆ. ಅವರು FBB ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ರಾಜಸ್ಥಾನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಅದಿತಿ ಹುಂಡಿಯಾ ಫ್ಯಾಷನ್ ಮತ್ತು ಗ್ಲಾಮರ್ ಜಗತ್ತಿನಲ್ಲಿ ಜನಪ್ರಿಯತೆ ಗಳಿಸಿದ್ದಾರೆ.