Cadbury Viral Post: Cadbury Chocolate ನಲ್ಲಿ ಗೋಮಾಂಸವಿದೆಯಾ? ಕಂಪನಿ ಹೇಳಿದ್ದೇನು?

Cadbury Viral Post - ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಒಂದು ಪೋಸ್ಟ್ ನಲ್ಲಿ ಯಾವುದೇ ಒಂದು ಉತ್ಪನ್ನದಲ್ಲಿ ಜಿಲೆಟಿನ್ ಹೆಸರಿಂದ ಪದಾರ್ಥವಿದ್ದರೆ, ಅದರರ್ಥ ಆ ಸಾಮಗ್ರಿಯ ತಯಾರಿಕೆಗೆ ಗೋಮಾಂಸ ಉಪಯೋಗಿಸಲಾಗಿದೆ ಎಂದರ್ಥ ಎನ್ನಲಾಗಿದೆ.

Written by - Nitin Tabib | Last Updated : Jul 19, 2021, 03:29 PM IST
  • ಕ್ಯಾಡ್ಬರಿ ಚಾಕ್ಲೆಟ್ ಗಳಲ್ಲಿ ಗೋಮಾಂಸವಿದೆಯಾ?
  • ಸದ್ಯ ಈ ಕುರಿತಾದ ಪೋಸ್ಟ್ ಇದೀಗ ಭಾರಿ ವೈರಲ್ ಆಗುತ್ತಿದೆ.
  • ವೈರಲ್ ಆಗುತ್ತಿರುವ ಈ ಪೋಸ್ಟ್ ಗೆ ಕಂಪನಿ ನೀಡಿರುವ ಪ್ರತಿಕ್ರಿಯೆ ಏನು?
Cadbury Viral Post: Cadbury Chocolate ನಲ್ಲಿ ಗೋಮಾಂಸವಿದೆಯಾ? ಕಂಪನಿ ಹೇಳಿದ್ದೇನು? title=
Beef In Cadbury Chocolate (File Photo)

Cadbury Viral Post - ಸಾಮಾಜಿಕ ಮಾಧ್ಯಮಗಳಲ್ಲಿ ದಿನ ನಿತ್ಯ  ಅನೇಕ ಪೋಸ್ಟ್‌ಗಳು ವೈರಲ್ ಆಗುತ್ತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಯಾಡ್ಬರಿ ಕುರಿತಾದ ಪೋಸ್ಟ್ ವೊಂದು ಸಾಕಷ್ಟು ಚರ್ಚೆಯಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಂದೇಶವು ಹೆಚ್ಚು ವೈರಲ್ ಆಗುತ್ತಿದೆ, ಅದರ ಪ್ರಕಾರ ಕ್ಯಾಡ್ಬರಿಯ (Cadbury) ಚಾಕೊಲೇಟ್ (Cadbury Chocloate) ಗೋಮಾಂಸವನ್ನು (Beef) ಹೊಂದಿರುತ್ತದೆ ಎನ್ನಲಾಗಿದೆ. ವೆಬ್‌ಸೈಟ್‌ನಿಂದ ತೆಗೆಯಲಾಗಿರುವ ಈ ಸ್ಕ್ರೀನ್‌ಶಾಟ್‌ಗಳು  ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಿದಾಡತೊಡಗಿವೆ. ಯಾವುದೇ ಒಂದು ಉತ್ಪನ್ನ ಜೆಲಾಟಿನ್ (Gelatin) ಎಂಬ ವಸ್ತುವನ್ನು ಹೊಂದಿದ್ದರೆ, ಆ ವಸ್ತುವನ್ನು ಗೋಮಾಂಸ ಬಳಸಿ ತಯಾರಿಸಲಾಗಿದೆ ಎಂದು ಅವುಗಳಲ್ಲಿ ಹೇಳಲಾಗುತ್ತಿದೆ.

ಇದನ್ನೂ ಓದಿ- Viral Video: ಟ್ರೈನ್ ಕೆಳಗಡೆ ಬಂದ 70 ವರ್ಷದ ವೃದ್ಧ, ಮುಂದೇನಾಯ್ತು ನೀವೇ ನೋಡಿ

ಆದರೆ ಕ್ಯಾಡ್ಬರಿ ಕಂಪನಿ (Cadbury Company) ಈ ಪೋಸ್ಟ್ ಗೆ ಉತ್ತರಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಮಾಹಿತಿ (Viral Post) ಸಂಪೂರ್ಣ ಭ್ರಾಂತಿ ಹುಟ್ಟಿಸುವ ಪ್ರಯತ್ನವಾಗಿದೆ. ಏಕೆಂದರೆ, ಆ ಉತ್ಪನ್ನ ಭಾರತಕ್ಕೆ ಸಂಬಂಧಿಸಿದ್ದಾಗಿಲ್ಲ. ಕಂಪನಿ ಪ್ರಕಾರ ಭಾರತದಲ್ಲಿ ಮಾರಾಟಮಾಡಲಾಗುವ ಕಂಪನಿಯ ಉತ್ಪನ್ನದಲ್ಲಿ ಬೀಫ್ ಅಥವಾ ಇತರ ಯಾವುದೇ ಪ್ರಕಾರದ ಮಾಂಸದ ಪ್ರಯೋಗ ನಡೆಸಲಾಗುವುದಿಲ್ಲ ಎಂದು ಹೇಳಿದೆ.

ಇದ್ನೂ ಓದಿ-Tokyo Olympic 2020: ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್

ಕಂಪನಿಯ ಚಾಕ್ಲೆಟ್ ಗಳಿಗೆ ಸಂಬಂಧಿಸಿದ ಸಂದೇಶ ವೈರಲ್ ಆಗುತ್ತಿದ್ದಂತೆ, ಹಲವು ಜನರು ಈ ಕುರಿತು ಕಂಪನಿಗೆ ಉತ್ತರಿಸಲು ಕೋರಿದ್ದಾರೆ ಮತ್ತು ಅವರು ಕಂಪನಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಗೆ ಟ್ಯಾಗ್ ಕೂಡ ಮಾಡಿದ್ದಾರೆ. ಬಳಿಕ ಜನರಿಗೆ ಪ್ರತಿಕ್ರಿಯೆ ನೀಡಿರುವ ಕ್ಯಾಡ್ಬರಿ, ಹಂಚಿಕೊಳ್ಳಲಾದ ಸ್ಕ್ರೀನ್ ಶಾಟ್ ಗಳು ಭಾರತದಲ್ಲಿ ಉತ್ಪಾದಿಸಲಾಗುವ ಕ್ಯಾಡ್ಬರಿ ಚಾಕ್ಲೆಟ್ ಗೆ ಸಂಬಂಧಿಸಿಲ್ಲ ಎಂದು ಹೇಳಿದೆ.  ಆ ಉತ್ಪನ್ನಗಳು ಮೊಂಡಲೆಂಜ್ ಇಂಟರ್ನ್ಯಾಷನಲ್ ಗೆ ಸೇರಿವೆ. ಇದೊಂದು ಅಮೆರಿಕಾದ ಕಂಪನಿಯಾಗಿದ್ದು, ಪ್ರಸ್ತುತ ಅದು ಬ್ರಿಟಿಷ್ ಕ್ಯಾಡ್ಬರಿ ಕಂಪನಿಯ ಮೂಲ ಕಂಪನಿಯಾಗಿದೆ ಎಂದಿದೆ. ಅಷ್ಟೇ ಅಲ್ಲ ಭಾರತದಲ್ಲಿ ಉತ್ಪಾದಿಸಲಾಗುವ ಕ್ಯಾಡ್ಬರಿ ಚಾಕ್ಲೆಟ್ ಗಳ ರಾಪರ್ ಮೇಲೆ ಹಸಿರುವ್ ಬಣ್ಣದ ಸರ್ಕಲ್, ಭಾರತದಲ್ಲಿ ನಿರ್ಮಿಸಲಾಗುವ ಕ್ಯಾಡ್ಬರಿ ಉತ್ಪನ್ನ ಶೇ.100 ರಷ್ಟು ಶಾಕಾಹಾರಿಯಾಗಿದೆ ಎಂಬುದನ್ನು ಎತ್ತಿತೋರಿಸುತ್ತದೆ ಎಂಬುದರ ಮೇಲೆ ಕಂಪನಿ ಒತ್ತು ನೀಡಿದೆ.

ಇದನ್ನೂ ಓದಿ-Viral video: ಮನೆಯೊಳಗೆ ಸರಸರಣೆ ಬಂದು ಮಗು ಹಿಂಬಾಲಿಸಿದ ಕಾಳಿಂಗ ಸರ್ಪ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News