ನವದೆಹಲಿ: ಅರ್ಜೆಂಟೀನಾ ಫುಟ್‌ಬಾಲ್ ತಂಡದ ಸ್ಟಾರ್ ಆಟಗಾರ ಮತ್ತು 6 ಬಾರಿಯ ಬ್ಯಾಲನ್ ಡಿ' ಓರ್ ಪ್ರಶಸ್ತಿ ವಿಜೇತ ಲಿಯೊನೆಲ್ ಮೆಸ್ಸಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ಬ್ರೆಜಿಲ್ ಗೆ ಶಾಕ್ ನೀಡಿ ಕೋಪಾ ಅಮೆರಿಕಾ ಫುಟ್‌ಬಾಲ್ ಚಾಂಪಿಯನ್ ಆಗಿರುವ ಸಂಭ್ರಮದಲ್ಲಿದ್ದಾರೆ. ಈ ಮಧ್ಯೆ ಬೀಡಿ ಪ್ಯಾಕೆಟ್ ಮೇಲಿನ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹೌದು, ಬೀಡಿ ಪ್ಯಾಕೆಟ್ ವೊಂದರಲ್ಲಿ ಅರ್ಜೆಂಟೀನಾ ಸೂಪರ್ ಸ್ಟಾರ್ ಮೆಸ್ಸಿ ಫೋಟೋ ಕಂಡುಬಂದಿದೆ. ಮೆಸ್ಸಿ ನಗುತ್ತಿರುವ ಫೋಟೋವನ್ನು ಪ್ಯಾಕೆಟ್ ನಲ್ಲಿ ಮುದ್ರಿಸಿ ‘ಮೆಸ್ಸಿ ಬೀಡಿ’ ಎಂದು ಬರೆಯಲಾಗಿದೆ. ಪಶ್ಚಿಮ ಬಂಗಾಳದ ಧುಲಿಯನ್ ಮೂಲದ ಆರೀಫ್ ಬೀಡಿ ಫ್ಯಾಕ್ಟರಿಯಲ್ಲಿ ತಯಾರಿಯಾಗಿರುವ ಈ ಬೀಡಿ ಪ್ಯಾಕೆಟ್ ಸದ್ಯ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
Messi's first endorsement in India
☺️☺️☺️☺️☺️ pic.twitter.com/07vh7bTMwC— Rupin Sharma IPS (@rupin1992) July 13, 2021
ಇದನ್ನೂ ಓದಿ: Viral Video: ‘ಭಾರತ್ ಮಾತಾಕೀ ಜೈ’ ಎಂದ ಡೇವಿಡ್ ವಾರ್ನರ್..!
ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬೀಡಿ ಫ್ಯಾಕೆಟ್ ಅನ್ನು ಹಂಚಿಕೊಂಡಿದ್ದಾರೆ. ‘ಭಾರತದಲ್ಲಿ ಮಸ್ಸಿಯವರ ಮೊದಲ ಅನುಮೋದನೆ(Endorsement)’ ಅಂತಾ ಕ್ಯಾಪ್ಶನ್ ನೀಡಿದ್ದಾರೆ. ಅನೇಕ ನೆಟಿಜನ್ ಗಳು ಮೆಸ್ಸಿ ಯಾವಾಗ ಭಾರತ ದೇಶದ ಬೀಡಿ ಪ್ಯಾಕೆಟ್(Beedi Packet) ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆಂದು ಟ್ರೋಲ್ ಮಾಡುತ್ತಿದ್ದಾರೆ. ವಿವಿಧ ರೀತಿಯ ಕಾಮೆಂಟ್ ಮಾಡುವ ಮೂಲಕ ಮೆಸ್ಸಿ ಭಾವಚಿತ್ರವಿರುವ ಈ ಬೀಡಿ ಪ್ಯಾಕೆಟ್ ಅನೇಕರು ಶೇರ್ ಮಾಡುತ್ತಿದ್ದಾರೆ. ‘ಮೆಸ್ಸಿ ಬೀಡಿ’ ಬಗ್ಗೆ ಸಾಕಷ್ಟು ಜೋಕ್ಸ್, ಮೀಮ್ಸ್, ಟ್ರೋಲ್ ಗಳು ಹರಿದಾಡುತ್ತಿವೆ.
ಇದನ್ನೂ ಓದಿ: "ಜನರು ನಿವೃತ್ತರಾದಾಗ ದಂತಕಥೆಗಳಾಗುತ್ತಾರೆ. ಕೊಹ್ಲಿ 30 ನೇ ವಯಸ್ಸಿನಲ್ಲಿಯೇ ದಂತಕಥೆ"
ಇತ್ತೀಚೆಗಷ್ಟೇ ಮುಕ್ತಾಯವಾದ ಕೋಪಾ ಅಮೆರಿಕಾ ಫುಟ್‌ಬಾಲ್(Copa América 2021) ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ(Lionel Messi) ನೇತೃತ್ವದ ಅರ್ಜೆಂಟೀನಾ ತಂಡ ಬ್ರೆಜಿಲ್ ತಂಡದ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅರ್ಜೆಂಟಿನಾ ಬರೋಬ್ಬರಿ 28 ವರ್ಷಗಳ ಬಳಿಕ ಮಹತ್ವದ ಅಂತಾರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.