ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯೂ ವ್ಯಕ್ತಿತ್ವದಲ್ಲಿ ವಿಭಿನ್ನ ಮತ್ತು ವಿಶೇಷವಾಗಿರುತ್ತಾನೆ. ಬಣ್ಣ , ರೂಪ, ಅಭ್ಯಾಸ, ನಡವಳಿಕೆ ಹೀಗೆ ಎಲ್ಲಾ ವಿಷಯಗಳಲ್ಲೂ ಭಿನ್ನವಾಗಿರುತ್ತಾನೆ. ಅದರೂ, ಒಂದೇ ದಿನಾಂಕ, ಒಂದೇ ತಿಂಗಳು ಮತ್ತು ಒಂದೇ ರಾಶಿಯಲ್ಲಿ ಜನಿಸಿರುವವರ ನಡುವೆ ಕೆಲವೊಂದು ವಿಷಯಗಳಲ್ಲಿ ಹೋಲಿಕೆ ಇರುತ್ತದೆ. ಇದರ ಆಧಾರದ ಮೇಲೆ, ಅವರ ಮೂಲ ಸ್ವಭಾವ ಹೊರಬರುತ್ತದೆ. ಜ್ಯೋತಿಷ್ಯದ ಪ್ರಕಾರ ಆಗಸ್ಟ್ ತಿಂಗಳಲ್ಲಿ ಜನಿಸಿದ ಜನರ ಸ್ವಭಾವ (Qualities of August born) ಹೇಗಿರುತ್ತದೆ ನೋಡೋಣ ..
ಆಗಸ್ಟ್ನಲ್ಲಿ ಜನಿಸಿದ ಪ್ರತಿಭಾವಂತರು :
ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಜನಿಸಿದವರು ತುಂಬಾ ಪ್ರತಿಭಾವಂತರು. ಅವರು ಸೃಜನಶೀಲ ಕ್ಷೇತ್ರಗಳಲ್ಲಿ ಕೆಲಸ ಮಾಡಿದರೆ, ಅವರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ.
ಇದನ್ನೂ ಓದಿ: Hair Tips: ತಲೆ ಬಾಚುವಾಗ ಇಂತಹ ತಪ್ಪುಗಳನ್ನು ಎಂದಿಗೂ ಮಾಡಲೇಬಾರದು!
- ಆಗಸ್ಟ್ ನಲ್ಲಿ ಜನಿಸಿದವರು (Augst month born) , ಮನಿ ಮೈಂಡೆಡ್ ಆಗಿರುತ್ತಾರೆ. ಅವರು ಹಣದ ವಹಿವಾಟಿನಲ್ಲಿ ಸಾಕಷ್ಟು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಳೆದು ತೂಗಿ ಖರ್ಚು ಮಾಡುತ್ತಾರೆ. ಹಣದ ಶೋ ಆಫ್ ಮಾಡುವುದರಲ್ಲಿ ಎಲ್ಲರಿಗಿಂತ ಮುಂದಿರುತ್ತಾರೆ ಆದರೆ ಖರ್ಚು ಮಾಡುವುದರಲ್ಲಿ ಮಾತ್ರ ಹಿಂದೆ .
- ಇವರು ತನಗೆ ಬೇಕಾದಂತೆ ನಡೆದುಕೊಳ್ಳುವವರು, ತಮ್ಮ ಇಚ್ಚಾನುಸಾರವೇ ಬದುಕುವವರು
- ಜನರಿಗೆ ಸಹಾಯ ಮಾದುತ್ತಾರೆ. ಆದರೆ ಅದಕ್ಕೆ ಪ್ರತಿಯಾಗಿ ಏನನ್ನಾದರೂ ನಿರೀಕ್ಷಿಸುತ್ತಾರೆ.
-ಸಂಬಂಧಗಳಲ್ಲಿ (Relationship) ಪ್ರಾಮಾಣಿಕವಾಗಿರಲು ಇಷ್ಟಪಡುತ್ತಾರೆ.
-ಸದಾ ಅವರನ್ನು ಯಾರಾದರೂ ಪ್ರಶಂಸೆ , ಮಾಡುತ್ತಲೇ ಇರಬೇಕು ಎಂದು ಬಯಸುತ್ತಾರೆ.
- ಇವರಿಗೆ ಎಲ್ಲರನ್ನೂ ಸುಲಭವಾಗಿ ನಂಬುವುದಿಲ್ಲ, ಹಾಗಾಗಿ ಅವರಿಗೆ ಕಡಿಮೆ ಸ್ನೇಹಿತರಿರುತ್ತಾರೆ.
- ಹಠಮಾರಿ ಮತ್ತು ಅಹಂಕಾರವನ್ನು ಹೊಂದಿರುತ್ತಾರೆ.
-ಈ ಜನರು ಅನೇಕ ರೀತಿಯಲ್ಲಿ ಹಣ ಗಳಿಸಲು ಇಷ್ಟಪಡುತ್ತಾರೆ.
ಇದನ್ನೂ ಓದಿ: Vastu Tips: ನಿಮ್ಮ ಮನೆಯಲ್ಲೂ ಇಂತಹ ವಿಗ್ರಹಗಳಿದ್ದರೆ ಸದಾ ಶಾಂತಿ-ಸಮೃದ್ಧಿ ತುಂಬಿರುತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ