ಲಂಡನ್: ಇತ್ತೀಚೆಗೆ ಅರಬ್ಬಿ ಸಮುದ್ರದಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ (Oil Tanker Attack) ನಡೆಸಿದ ನಂತರ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಬ್ರಿಟನ್ (Britain) ಮತ್ತು ಇರಾನ್ (Iran) ಸೋಮವಾರ ಪರಸ್ಪರ ರಾಜತಾಂತ್ರಿಕರನ್ನು ಕರೆಸಿಕೊಂಡವು. ಗುರುವಾರ ತೈಲ ಟ್ಯಾಂಕರ್ ಎಂವಿ ಮರ್ಸರ್ ಸ್ಟ್ರೀಟ್ ಮೇಲೆ ಡ್ರೋನ್ ದಾಳಿಯ (Drone Attack) ನಂತರ ಬ್ರಿಟನ್ ಇರಾನ್ ನ ರಾಯಭಾರಿ ಮೊಹ್ಸಿನ್ ಬಹರ್ವಾಂಡ್ ಅವರನ್ನು ವಿದೇಶಿ, ಕಾಮನ್ ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಗೆ ಕರೆಸಿತು. ಈ ದಾಳಿಯಲ್ಲಿ ಬ್ರಿಟಿಷ್ ಪ್ರಜೆ ಮತ್ತು ರೊಮೇನಿಯನ್ ನಾಗರಿಕರು ಸಾವನ್ನಪ್ಪಿದ್ದಾರೆ.
ಇರಾನ್ ಮೇಲೆ ಆರೋಪ:
"ಇರಾನ್ (Iran) ತಕ್ಷಣವೇ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡುವ ಚಟುವಟಿಕೆಗಳನ್ನು ನಿಲ್ಲಿಸಬೇಕು ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಹಡಗುಗಳ ಮುಕ್ತ ಚಲನೆಯನ್ನು ಖಾತ್ರಿಪಡಿಸಬೇಕು" ಎಂದು ಪಶ್ಚಿಮ ಏಷ್ಯಾದ ವ್ಯವಹಾರಗಳ ಸಚಿವ ಜೇಮ್ಸ್ ಕ್ಲೆವರ್ಲಿ ಕರೆ ನೀಡಿದ್ದಾರೆ. ಆದರೆ ಇರಾನ್ ಈ ಘಟನೆಯಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿದೆ.
ಇದನ್ನೂ ಓದಿ- London: ಬಜಾರ್‌ನಲ್ಲಿ 90 ಪೈಸೆಗೆ ಖರೀದಿಸಿದ ಮುರಿದ ಚಮಚ 2 ಲಕ್ಷ ರೂ.ಗೆ ಮಾರಾಟ!
ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬ್ರಿಟನ್‌ನ (Britain) ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಭಾನುವಾರ ಇದನ್ನು ಹೇಡಿಗಳ ದಾಳಿ ಎಂದು ಬಣ್ಣಿಸಿದರು. ಮಾತ್ರವಲ್ಲ, ಬ್ರಿಟನ್ ಮತ್ತು ಅದರ ಮಿತ್ರರಾಷ್ಟ್ರಗಳು ಸಂಘಟಿತ ಕ್ರಮವನ್ನು ಯೋಜಿಸುತ್ತಿವೆ ಎಂದು ಹೇಳಿದರು.
ಇರಾನ್‌ನ ವಿದೇಶಾಂಗ ಸಚಿವಾಲಯವು ಬ್ರಿಟನ್‌ನ ವಿದೇಶಾಂಗ ಸಚಿವ ಡೊಮಿನಿಕ್ ರಾಬ್‌ನ ಆರೋಪಗಳನ್ನು ಪ್ರತಿಭಟಿಸಲು ಸೋಮವಾರ ಟೆಹ್ರಾನ್‌ನಲ್ಲಿ ಬ್ರಿಟನ್‌ನ ಮಿಷನ್ ಮುಖ್ಯಸ್ಥರನ್ನು ಕರೆಸಿತು. ಇದೇ ವೇಳೆ ಅಂತಹ ಆತುರದ, ಆಧಾರರಹಿತ, ವಿರೋಧಾತ್ಮಕ ಹೇಳಿಕೆಗಳನ್ನು ತೀವ್ರವಾಗಿ ಆಕ್ಷೇಪಿಸಿತು.
ಇದನ್ನೂ ಓದಿ- Airstrike on Taliban Terrorists: ತಾಲಿಬಾನ್ ಉಗ್ರರ ಮೇಲೆ Airstrike, 254 ಉಗ್ರರ ಹತ್ಯೆ
ಇರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಯಾವುದೇ ದುಷ್ಕೃತ್ಯಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತದೆ. ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲದೆ ಇರಾನ್ ವಿರುದ್ಧ ಬ್ರಿಟನ್ ಆರೋಪ ಹೊರಿಸುವುದು ಇದೇ ಮೊದಲಲ್ಲ ಎಂದು ಸಚಿವಾಲಯ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ