ನವದೆಹಲಿ : ಯಾವುದೇ ಹಾಡು, ವಿಡಿಯೋ ಅಥವಾ ಚಲನಚಿತ್ರವಾಗಲಿ, ವೀಕ್ಷಣೆಗೆ ಬಳಕೆದಾರರ ಮೊದಲ ಆಯ್ಕೆ ಯೂಟ್ಯೂಬ್ (Youtube) ಆಗಿರುತ್ತದೆ. ಜನರು ಹಲವು ವರ್ಷಗಳಿಂದ ಯೂಟ್ಯೂಬ್ ಬಳಸುತ್ತಿದ್ದಾರೆ. ಇಂದಿಗೂ ಯೂಟ್ಯೂಬ್ ಅಷ್ಟೇ ಜನಪ್ರಿಯವಾಗಿದೆ. ಜನರಿಗೆ ಬೇಕಾಗುವ ಯಾವುದೇ ಮಾಹಿತಿ ಯೂಟ್ಯೂಬ್‌ನಲ್ಲಿ ತಕ್ಷಣಕ್ಕೆ ಸಿಕ್ಕಿಬಿಡುತ್ತದೆ. ಇದು ಬಳಕೆಗೂ ಸರಳವಾದ ವೇದಿಕೆಯಾಗಿದೆ. ಆದರೆ ಇದರ ಸಮಸ್ಯೆ ವೀಡಿಯೊಗಳನ್ನು ಡೌನ್‌ಲೋಡ್ (Video download) ಮಾಡಿ ಸೇವ್ ಮಾಡುವುದು. YouTube ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿದರೆ, ಅದು YouTube ನ ಫೋಲ್ಡರ್‌ನಲ್ಲಿ ಉಳಿಯುತ್ತದೆ. ಈ ವೀಡಿಯೊಗಳನ್ನು ನೀವು ಹೇಗೆ ಡೌನ್‌ಲೋಡ್ ಮಾಡಬಹುದು ಮತ್ತು ಅವುಗಳನ್ನು ನಿಮ್ಮ ಫೋನ್‌ನ ಗ್ಯಾಲರಿಯಲ್ಲಿ ಸೇವ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.
ಯೂಟ್ಯೂಬ್‌ನಲ್ಲಿ ವೀಡಿಯೊ ಡೌನ್‌ಲೋಡ್ ಮಾಡುವುದು ಹೇಗೆ?
ಯೂಟ್ಯೂಬ್‌ನಲ್ಲಿ (youtube) ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ತುಂಬಾ ಸುಲಭ. ನೀವು ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಓಪನ್ ಮಾಡಿದಾಗ, ಅದರ ಟೈಟಲ್ ವಿವರಣೆಯ ಕೆಳಗಿರುವ ನಾಲ್ಕನೇ ಆಯ್ಕೆಯೇ ಡೌನ್‌ಲೋಡ್ (Download) ಆಗಿದೆ, ಅದರ ಐಕಾನ್ ಕೆಳಗೆ, ಒಂದು ಬಾಣದ ಗುರುತು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ವೀಡಿಯೊ ಡೌನ್ಲೋಡ್ ಮಾಡಲು ಪ್ರಾರಂಭವಾಗುತ್ತದೆ. ಯೂಟ್ಯೂಬ್‌ನ ಡೌನ್‌ಲೋಡ್‌ಗಳ ಫೋಲ್ಡರ್‌ಗೆ ಹೋಗುವ ಮೂಲಕ ನೀವು ಈ ವೀಡಿಯೊಗಳನ್ನು ಇಂಟರ್ನೆಟ್ ಇಲ್ಲದೆ ಯಾವುದೇ ಸಮಯದಲ್ಲಿಯೂ ವೀಕ್ಷಿಸಬಹುದು. ಇದನ್ನು ಯೂಟ್ಯೂಬ್ ನ ಆಪ್ ನಲ್ಲಿ ಮಾಡಬಹುದೇ ಹೊರತು ಯೂಟ್ಯೂಬ್ ನ ವೆಬ್ ಆವೃತ್ತಿಯಲ್ಲಿ (youtube web series) ಸಾಧ್ಯವಿಲ್ಲ ಎನ್ನುವುದು ನೆನಪಿರಲಿ.
ಇದನ್ನೂ ಓದಿ : ದಿನ ಪೂರ್ತಿ ಬಳಸಿದರೂ ಖಾಲಿಯಾಗುವುದಿಲ್ಲ ಚಾರ್ಜ್ Xiaomi ಹೊರ ತರುತ್ತಿದೆ Redmi 10
YouTube ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ ಮತ್ತು ಅವುಗಳನ್ನು ನಿಮ್ಮ ಫೋನ್ ಗ್ಯಾಲರಿಯಲ್ಲಿ ವೀಕ್ಷಿಸಲು ನೀವು ಎರಡು ವಿಧಾನಗಳನ್ನು ಬಳಸಬಹುದು.
ಈ ಆಯ್ಕೆಗಳಲ್ಲಿ ಮೊದಲನೆಯದ್ದು ಥರ್ಡ್ ಪಾರ್ಟಿ app. ಅದೇ ಸ್ನಾಪ್ ಟ್ಯೂಬ್. ಪ್ಲೇಸ್ಟೋರ್ ನಲ್ಲಿ ಈ ಆಪ್ ಸಿಗುವುದಿಲ್ಲ. ಹಾಗಾಗಿ ಆಂಡ್ರಾಯ್ಡ್ ಬಳಕೆದಾರರು snaptubeapp.com ಗೆ ಹೋಗಿ ಅಲ್ಲಿಂದ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ನಂತರ ನೀವು ಸ್ನ್ಯಾಪ್ ಟ್ಯೂಬ್ ನ ಸರ್ಚ್ ಬಾರ್ ನಲ್ಲಿ ಯಾವುದೇ ಯೂಟ್ಯೂಬ್ ವಿಡಿಯೋದ ಯುಆರ್ ಎಲ್ ಅನ್ನು ಪೇಸ್ಟ್ ಮಾಡಿ, ಎಂಟರ್ ಒತ್ತಿದ ತಕ್ಷಣ ಡೌನ್‌ಲೋಡ್ ಆಯ್ಕೆ ನಿಮ್ಮ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಯಾವುದೇ ಗುಣಮಟ್ಟದಲ್ಲಿ ವೀಡಿಯೋ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಇಲ್ಲಿಂದ ಡೌನ್‌ಲೋಡ್ ಆಗುವ ವೀಡಿಯೋವನ್ನು ನೀವು ನಿಮ್ಮ ಗ್ಯಾಲರಿ ಫೋಲ್ಡರ್‌ನಲ್ಲಿ ಅಥವಾ ಫೋನ್‌ನ ಡೌನ್‌ಲೋಡ್ ಫೋಲ್ಡರ್‌ನಲ್ಲಿ ಕಾಣಬಹುದು. ಯಾವುದೇ ಯೂಟ್ಯೂಬ್ ವಿಡಿಯೋ ಡೌನ್‌ಲೋಡ್ (youtube video download) ಮಾಡುವ ಮುನ್ನ, ಆ ವಿಡಿಯೋದ ಹಾಕಿದವರ ಅನುಮತಿಯನ್ನು ಪಡೆಯಲು ಮರೆಯಬೇಡಿ. ಈ ಆಪ್‌ನೊಂದಿಗೆ ನೀವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.
ಇದನ್ನೂ ಓದಿ : WhatsApp Scam Alert! WhatsApp ಬಳಕೆದಾರರೇ ಈಗಲೇ ಎಚ್ಚೆತ್ತುಕೊಂಡು ಈ ಸುದ್ದಿಯನ್ನೊಮ್ಮೆ ಓದಿ
ಎರಡನೇ ಮಾರ್ಗವೆಂದರೆ ಯಾರು ತಮ್ಮ ಮೊಬೈಲ್ ನಲ್ಲಿ ಥರ್ಡ್ ಪಾರ್ಟಿ app ಡೌನ್‌ಲೋಡ್ ಮಾಡಲು ಬಯಸುವುದಿಲ್ಲವೋ ಅವರು ಯಾವುದೇ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ಈ ಕೆಲಸವನ್ನು ಮಾಡಬಹುದು. En.savefrom.net ಹೆಸರಿನ ವೆಬ್‌ಸೈಟ್ ಇದೆ. ನಿಮ್ಮ ಗೂಗಲ್ ಅಥವಾ ಕ್ರೋಮ್‌ಗೆ ಹೋಗುವ ಮೂಲಕ ಈ ವೆಬ್‌ಸೈಟ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ಯೂಟ್ಯೂಬ್ ವೀಡಿಯೊದ ಲಿಂಕ್ (URL) ಅನ್ನು ಅಲ್ಲಿನ ಸರ್ಚ್ ಬಾರ್‌ನಲ್ಲಿ ಪೇಸ್ಟ್ ಮಾಡಿ. ಈಗ ನಿಮ್ಮ ಯೂಟ್ಯೂಬ್ ವೀಡಿಯೋಗಳನ್ನು ಡೌನ್‌ಲೋಡ್ ಮಾಡಲು ಮತ್ತು ಅವುಗಳನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಲು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.