Tamil Nadu: ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಿ ಚುನಾವಣಾ ಭರವಸೆ ಈಡೇರಿಸಿದ DMK

Tamil Nadu: ದೇವಸ್ಥಾನಗಳಲ್ಲಿ ತರಬೇತಿ ಪಡೆದ ವಿವಿಧ ಜಾತಿಯ ಅರ್ಚಕರನ್ನು ನೇಮಿಸುವ ಮೂಲಕ ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ, ಎಲ್ಲಾ ಜಾತಿಯ ಅಭ್ಯರ್ಥಿಗಳನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸುವ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿತು.

Written by - Zee Kannada News Desk | Last Updated : Aug 16, 2021, 01:10 PM IST
  • ಮೇ 7 ರಂದು ಸ್ಟಾಲಿನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು
  • ಆಗಸ್ಟ್ 14 ರಂದು ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ರಚಿಸಿ 100 ದಿನಗಳು ಕಳೆದಿವೆ
  • ಡಿಎಂಕೆ ಚುನಾವಣೆ ಪ್ರಣಾಳಿಕೆಯಲ್ಲಿ, ದೇವಸ್ಥಾನಗಳಲ್ಲಿ ಅರ್ಚಕರ ಹುದ್ದೆಗೆ ತರಬೇತಿ ಪೂರ್ಣಗೊಳಿಸಿದ ಎಲ್ಲಾ ಜಾತಿಯ ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗುವುದು ಎಂದು ಪಕ್ಷವು ಭರವಸೆ ನೀಡಿತ್ತು
Tamil Nadu: ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಿ ಚುನಾವಣಾ ಭರವಸೆ ಈಡೇರಿಸಿದ DMK title=
Representational Image

ಚೆನ್ನೈ:  ಹಿಂದೂ ಧಾರ್ಮಿಕ ಮತ್ತು ದತ್ತಿ (HRCE) ಇಲಾಖೆಯಿಂದ ನಡೆಸಲ್ಪಡುವ ದೇವಸ್ಥಾನಗಳಲ್ಲಿ ಮೂವರು ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಲಾಗಿದೆ. ಈ ಮೂಲಕ ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರವು ಎಲ್ಲಾ ಜಾತಿಯ ಅಭ್ಯರ್ಥಿಗಳನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸುವ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿದೆ. 

ಅದೇ ಸಮಯದಲ್ಲಿ, ಇಬ್ಬರು ಬ್ರಾಹ್ಮಣೇತರ ಅರ್ಚಕರು - ಪಿ ಮಹಾರಾಜನ್ ಮತ್ತು ಎಸ್ ಅರುಣಕುಮಾರ್ - ಹಿಂದೂ ಧಾರ್ಮಿಕ ವ್ಯವಹಾರಗಳ ಇಲಾಖೆಯಿಂದ ನಡೆಸಲ್ಪಡುವ ಮಧುರೈ ದೇವಸ್ಥಾನಗಳಲ್ಲಿ (Madhurai Temple) ನೇಮಕಗೊಂಡಿದ್ದಾರೆ. ಈ ಬಗ್ಗೆ ದೇವಾಲಯದ ಜಂಟಿ ಆಯುಕ್ತ ಕೆ ಚೆಲ್ಲದುರೈ ಭಾನುವಾರ ಸ್ವತಃ ಈ ಮಾಹಿತಿಯನ್ನು ನೀಡಿದ್ದಾರೆ.

ನೇಮಕಗೊಂಡವರಲ್ಲಿ, 24 ಅಭ್ಯರ್ಥಿಗಳು ರಾಜ್ಯ ಸರ್ಕಾರ ನಡೆಸುತ್ತಿರುವ ತರಬೇತಿ ಕೇಂದ್ರದಿಂದ ಹಿಂದೂ ದೇವಸ್ಥಾನಗಳಲ್ಲಿ (Hindu Temples) ಅರ್ಚಕರಾಗಲು ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದರೆ, 34 ಮಂದಿ ಇತರ ಶಾಲೆಗಳಿಂದ ಅರ್ಚಕರ (ಅರ್ಚಕರ) ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ- ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಈ ಅದ್ಭುತ ಯೊಗ ನಿರ್ಮಾಣಗೊಳ್ಳುತ್ತಿದೆ

ನೇಮಕಗೊಂಡ 208 ಜನರಲ್ಲಿ ಭಟ್ಟಾಚಾರ್ಯ, ಓಧುವರ್ಯ ಪೂಜಾರಿ ಮತ್ತು ತಾಂತ್ರಿಕ ಮತ್ತು ಕಚೇರಿ ಸಹಾಯಕರು ಸೇರಿದ್ದಾರೆ ಎಂದು ಸರ್ಕಾರ ಹೇಳಿದೆ. ನಿಗದಿತ ಕಾರ್ಯವಿಧಾನದ ಪ್ರಕಾರ ಇವರೆಲ್ಲರನ್ನೂ ನೇಮಿಸಲಾಗಿದೆ.

ಭಟ್ಟಾಚಾರ್ಯರು ವೈಷ್ಣವ ಪುರೋಹಿತರಾಗಿದ್ದು, ಓಧುವರ್ಯರು ಅಪ್ಪರ್ ಮತ್ತು ಮಾಣಿಕವಾಸಾಗರ್ ಸೇರಿದಂತೆ  ಶೈವ ಮುನಿಗಳು ರಚಿಸಿದ ಸ್ತೋತ್ರಗಳನ್ನು ಶಿವನನ್ನು ಸ್ತುತಿಸಲು ಹಾಡುವ ತಮಿಳು ಶೈವ ಸಂಪ್ರದಾಯಗಳಲ್ಲಿ ತರಬೇತಿ ಪಡೆದಿದ್ದಾರೆ.

ಆಗಸ್ಟ್ 14 ರಂದು ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ (DMK Govt) ರಚಿಸಿ 100 ದಿನಗಳು ಕಳೆದಿವೆ. ರಾಜ್ಯದಲ್ಲಿ ಏಪ್ರಿಲ್ 6 ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ, ದೇವಸ್ಥಾನಗಳಲ್ಲಿ ಅರ್ಚಕರ ಹುದ್ದೆಗೆ ತರಬೇತಿ ಪೂರ್ಣಗೊಳಿಸಿದ ಎಲ್ಲಾ ಜಾತಿಯ ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗುವುದು ಎಂದು ಪಕ್ಷವು ಭರವಸೆ ನೀಡಿತ್ತು. ಮೇ 7 ರಂದು ಸ್ಟಾಲಿನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇದನ್ನೂ ಓದಿ- Vastu Tips: ನಿಮ್ಮ ಮನೆಯ ಹತ್ತಿರವೂ ದೇವಸ್ಥಾನ ಇದೆಯಾ? ಹಾಗಾದರೆ ಈ ವರದಿಯನ್ನು ತಪ್ಪದೆ ಓದಿ

ಸುಧಾರಣಾವಾದಿ ನಾಯಕ ಥನಾಥೈ ಪೆರಿಯಾರ್ ಇವಿ ರಾಮಸ್ವಾಮಿಯನ್ನು ಉಲ್ಲೇಖಿಸಿ, ಸರ್ಕಾರವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ದೇವರನ್ನು ನಂಬುವ ಎಲ್ಲರಿಗೂ ಆರಾಧನೆಯ ಸಮಾನ ಹಕ್ಕುಗಳಿಗಾಗಿ ಹೋರಾಡಿದೆ ಎಂದು ಹೇಳಿದೆ.

ಅವರ ಹೆಜ್ಜೆಗಳನ್ನು ಅನುಸರಿಸಿ, ಮುಖ್ಯಮಂತ್ರಿ ಎಂ.ಕರುಣಾನಿಧಿ ನೇತೃತ್ವದ ಅಂದಿನ ಡಿಎಂಕೆ ಸರ್ಕಾರ (2006 ರಿಂದ 11) ಎಲ್ಲಾ ಜಾತಿಯ ಹಿಂದುಗಳನ್ನು ದೇವಾಲಯಗಳ ಅರ್ಚಕರನ್ನಾಗಿ ನೇಮಿಸಲು ಸರ್ಕಾರಿ ಆದೇಶವನ್ನು ಹೊರಡಿಸಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News