ಚೆನ್ನೈ: ತಮಿಳುನಾಡಿ(Tamil Nadu)ನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ( AIADMK) ಪಕ್ಷದ ಸಂಯೋಜಕ ಓ.ಪನ್ನೀರಸೆಲ್ವಂ(O Panneerselvam) ಅವರ ಪತ್ನಿ ವಿಜಯಲಕ್ಷ್ಮಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪನೀರಸೆಲ್ವಂ ಅವರ ಪತ್ನಿ ವಿಜಯಲಕ್ಷ್ಮಿಯವರು ಅನಾರೋಗ್ಯದ ಕಾರಣ ಕಳೆದ ಎರಡು ವಾರಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಗ್ಗೆ ಅವರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದರು ಅಂತಾ ತಿಳಿದುಬಂದಿದೆ.
63 ವರ್ಷದ ವಿಜಯಲಕ್ಷ್ಮಿ(Vijayalakshmi) ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ (ಜೆಮ್ ಆಸ್ಪತ್ರೆ) ದಾಖಲಿಸಲಾಗಿತ್ತು. ಅವರು ಪತಿ ಓ.ಪನ್ನೀರಸೆಲ್ವಂ ಮತ್ತು ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇದನ್ನೂ ಓದಿ: Rules Change In September: ಇಂದಿನಿಂದ ಅನೇಕ ನಿಯಮಗಳಲ್ಲಿ ಬದಲಾವಣೆ; ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ
Very shocked and saddened by the passing of Mrs Vijayalakshmi. She is the wife of AIADMK coordinator Annan OPS and mother of MP @OPRavindhranath. My heart goes out to the family at this time of grief. I pray for the departed soul to rest in peace. @OfficeOfOPS pic.twitter.com/mUqi8hEDYa
— Dr C Vijayabaskar (@Vijayabaskarofl) September 1, 2021
ಚೆನ್ನೈನ ಜೆಮ್ ಆಸ್ಪತ್ರೆಯು ಪನ್ನೀರಸೆಲ್ವಂ ಪತ್ನಿ ವಿಜಯಲಕ್ಷ್ಮಿ ಸಾವಿನ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ‘ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸಿದ್ದ ಅವರು ಚೇತರಿಸಿಕೊಳ್ಳುತ್ತಿದ್ದರು. ಒಂದು ವೇಳೆ ಗುಣಮುಖರಾಗಿದ್ದರೆ ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತಿತ್ತು. ಕಳೆದ 10 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರಿಗೆ ಬುಧವಾರ ಬೆಳಗ್ಗೆ ಹೃದಯಾಘಾತ(Heart Attack)ವಾಗಿದೆ’ ಎಂದು ತಿಳಿಸಲಾಗಿದೆ.
ವಿಜಯಲಕ್ಷ್ಮಿಗೆ ಚಿಕಿತ್ಸೆ ನೀಡುತ್ತಿದ್ದ ಹೃದ್ರೋಗ ತಜ್ಞರು ಮತ್ತು ತೀವ್ರ ನಿಗಾ ವೃತ್ತಿಪರರು ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇಂದು ಬೆಳಗ್ಗೆ 6.45ಕ್ಕೆ ಅವರು ಸಾವನ್ನಪ್ಪಿದರು ಎಂದು ವರದಿಯಾಗಿದೆ.
ಇದನ್ನೂ ಓದಿ: PM Kisan ಯೋಜನೆ ಅಡಿ ಈಗ ರೈತರಿಗೆ ಸಿಗಲಿದೆ 6000 ಬದಲಿಗೆ,12000 ರೂ.!
ಓ.ಪನ್ನೀರಸೆಲ್ವಂ(O Panneerselvam) ಪತ್ನಿ ವಿಜಯಲಕ್ಷ್ಮಿ ಸಾವಿಗೆ ತಮಿಳುನಾಡಿನ ರಾಜಕೀಯ ನಾಯಕರು ಗಣ್ಯರು ಸಂತಾಪ ಸೂಚಿಸಿದ್ದಾರೆ. ವಿರಾಳಿಮಲೈ ಶಾಸಕ ಮತ್ತು ತಮಿಳುನಾಡಿನ ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸಿ.ವಿಜಯಭಾಸ್ಕರ್ ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.