Indonesia ಜೈಲಿನಲ್ಲಿ ಭೀಕರ ಅಗ್ನಿ ಆಕಸ್ಮಿಕ, 40 ಕೈದಿಗಳ ದಾರುಣ ಸಾವು

Fire At Overcrowded Indonesian Prison - ಇಂಡೋನೇಷ್ಯಾದ (Indonesia) ಬಾಂಟೆನ್ ಪ್ರಾಂತ್ಯದ (Banten Province) ತಂಗೇರಾಂಗ್ (Tangerang Prison) ಜೈಲಿನಲ್ಲಿ ಬುಧವಾರ ಕಿಕ್ಕಿರಿದ ಬ್ಲಾಕ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 40 ಕೈದಿಗಳು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.

Written by - Nitin Tabib | Last Updated : Sep 8, 2021, 10:50 AM IST
  • ಇಂಡೊನೆಷ್ಯಾದ ತಂಗೆರಂಗ್ ಜೈಲಿನಲ್ಲಿ ಭೀಷಣ ಅಗ್ನಿ ಆಕಸ್ಮಿಕ
  • ಬೆಂಕಿಯಲ್ಲಿ ಬೆಂದು 40 ಕೈದಿಗಳ ದಾರುಣ ಸಾವು.
  • ಜೈಲಿನಲ್ಲಿ ಕ್ಷಮತೆಗಿಂತ ಹೆಚ್ಚು ಕೈದಿಗಳನ್ನು ಇರಿಸಲಾಗಿತ್ತು.
Indonesia ಜೈಲಿನಲ್ಲಿ ಭೀಕರ ಅಗ್ನಿ ಆಕಸ್ಮಿಕ, 40 ಕೈದಿಗಳ ದಾರುಣ ಸಾವು  title=
Fire At Overcrowded Indonesian Prison (Representational Image)

Fire At Overcrowded Indonesian Prison - ಇಂಡೋನೇಷ್ಯಾದ (Indonesia) ಬಾಂಟೆನ್ ಪ್ರಾಂತ್ಯದ ಕಾರಾಗೃಹದಲ್ಲಿ ಬುಧವಾರ ಮುಂಜಾನೆ ಭಾರೀ ಅಗ್ನಿ(Fire) ಅನಾಹುತ ಸಂಭವಿಸಿದ್ದು, ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವು ಜನರು ಗಾಯಗೊಂಡಿದ್ದಾರೆ. ಅಗ್ನಿ ಆಕಸ್ಮಿಕದ ಕುರಿತು ಮಾಹಿತಿ ನೀಡಿರುವ ಅಲ್ಲಿನ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವಾಲಯದ ಕಾರಾಗೃಹ ಇಲಾಖೆಯ ವಕ್ತಾರ ರಿಕಾ ಅಪರಿಂತಿ, ತಂಗೇರಂಗ್ ಜೈಲಿನ ಬ್ಲಾಕ್ ಸಿ ಯಲ್ಲಿ ಮಧ್ಯಾಹ್ನ 1 ರಿಂದ 2 ರ ವೇಳೆಗೆ ಬೆಂಕಿ (Fire In Jail) ಕಾಣಿಸಿಕೊಂಡಿದ್ದು, ಈ ಅಗ್ನಿ ಆಕಸ್ಮಿಕಕ್ಕೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಜೈಲಿನ ಕ್ಷಮತೆಗಿಂತಲೂ ಹೆಚ್ಚು ಕೈದಿಗಳನ್ನು ಜೈಲಿನಲ್ಲಿ ಇರಿಸಲಾಗಿತ್ತು
ಬಾಂಟೆನ್ ಪ್ರಾಂತ್ಯದ (Banten Province) ತಂಗೇರಾಂಗ್ ಜೈಲಿನ (Indonesian Prison) ಬ್ಲಾಕ್ ಸಿ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಜೈಲಿನಲ್ಲಿ ಕ್ಷಮತೆಗಿಂತ ಹೆಚ್ಚು ಕೈದಿಗಳನ್ನು ಇರಿಸಲಾಗಿತ್ತು. ಈ ಬ್ಲಾಕ್ 122 ಕೈದಿಗಳನ್ನು ಇರಿಸುವ ಸಾಮರ್ಥ್ಯ ಹೊಂದಿದೆ, ಆದರೆ ಇರಿಸಲಾಗಿರುವ ಕೈದಿಗಳ ಸಂಖ್ಯೆಯನ್ನು ಇನ್ನೂ ದೃಢಪಟ್ಟಿಲ್ಲ. ಸೆಪ್ಟೆಂಬರ್ ತಿಂಗಳ ಸರ್ಕಾರದ ಅಂಕಿಅಂಶಗಳ ಪ್ರಕಾರ, ಇಂಡೋನೇಷ್ಯಾದ ರಾಜಧಾನಿ ಜಕಾರ್ತದ ಬಳಿ ಇರುವ ತಂಗೇರಾಂಗ್ ಜೈಲಿನಲ್ಲಿ 2,000 ಕ್ಕಿಂತಲೂ ಹೆಚ್ಚು ಕೈದಿಗಳನ್ನು ಇರಿಸಲಾಗಿದ್ದು, ಇದು ಜೈಲಿನ 600 ಕೈದಿಗಳ ಸಾಮರ್ಥ್ಯಕ್ಕಿಂತ ತುಂಬಾ ಹೆಚ್ಚಾಗಿದೆ. 

ಇದನ್ನೂ ಓದಿ-Taliban : ಶಾಲಾ-ಕಾಲೇಜಿಗೆ ತೆರಳುವ ಹುಡುಗಿಯರಿಗಾಗಿ 7 ಕಠಿಣ ನಿಯಮ ಜಾರಿಗೊಳಿಸಿದ ತಾಲಿಬಾನ್

ಬಹುತೇಕ ಕೈದಿಗಳು ಮಲಗಿದ್ದರು
ಬುಧವಾರ ಮಧ್ಯಾಹ್ನ 1 ಅಥವಾ 2 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಈ ಸಮಯದಲ್ಲಿ ಕಾರಾಗ್ರಹದ ಬಹುತೇಕ  ಕೈದಿಗಳು ಮಲಗಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಹಲವು ಕೈದಿಗಳು ಗಂಭೀರ ಸುಟ್ಟಗಾಯಗಳಾಗಿವೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ತಂಗೇರಂಗ್ ಜೈಲಿನ ಬ್ಲಾಕ್ ಸಿ ಅನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗುತ್ತಿದೆ.

ಇದನ್ನೂ ಓದಿ-Afghanistan: ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ ಹೇಗಿರುತ್ತೆ? ತಾಲಿಬಾನ್‌ನ ನಾಯಕ ಹೇಳಿದ್ದೇನು?

ಈ ಜೈಲಿನಲ್ಲಿ ಮಾದಕ ಪದಾರ್ಥ ವ್ಯಸನಿ ಕೈದಿಗಳಿದ್ದರು 
ಈ ಕುರಿತು ಹೇಳಿಕೆ ನೀಡಿರುವ ಅಲ್ಲಿನ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವಾಲಯದ ಜೈಲು ವಿಭಾಗದ ವಕ್ತಾರೆ ರಿಕಾ ಅಪರಿಂತಿ, ಜೈಲಿನ ಈ ಬ್ಲಾಕ್ ನಲ್ಲಿ ಮಾದಕ ವ್ಯಸನಕ್ಕೆ ಸಂಬಂಧಿಸಿದ ಕೈದಿಗಳನ್ನು ಇರಿಸಲಾಗಿತ್ತು. ಇನ್ನೊಂದೆಡೆ ಕೊಂಪಾಸ್ ಟಿವಿ ಪ್ರಕಟಿಸಿರುವ ವರದಿಯ ಪ್ರಕಾರ, ಈ ಅಗ್ನಿ ಆಕಸ್ಮಿಕದಲ್ಲಿ 41 ಕೈದಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 8 ಕೈದಿಗಳಿಗೆ ಗಂಭೀರ ಗಾಯಗಳಾಗಿವೆ ಎಂದಿದೆ. ಆಕಸ್ಮಿಕಕ್ಕೆ ಸಂಬಂಧಿಸಿದಂತೆ ಮೆಟ್ರೋ ಟಿವಿಗೆ ಹೇಳಿಕೆ ನೀಡಿರುವ ಪೊಲೀಸ್ ವಕ್ತಾರ ಯುಸರಿ ಯೂನಸ್ ಪ್ರಾಥಮಿಕ ಮಾಹಿತಿಯ ಅನುಸಾರ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರುವ ಶಂಕೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ಕ್ವಾರಂಟೈನ್ ಉಲ್ಲಂಘಿಸಿ ಕೊರೊನಾ ಹರಡಿದ್ದ ವ್ಯಕ್ತಿಗೆ 5 ವರ್ಷ ಜೈಲುಶಿಕ್ಷೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News