Military Transport Aircraft: 56 ಮಿಲಿಟರಿ ಟ್ರಾನ್ಸ್ಪೋರ್ಟ್ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರದ ಅನುಮತಿ

Military Transport Aircraft: ಚೀನಾ-ಪಾಕಿಸ್ತಾನದಿಂದ ಹೆಚ್ಚುತ್ತಿರುವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಮೋದಿ ಸರ್ಕಾರವು ದೇಶದ ಭದ್ರತೆಯನ್ನು ಬಲಪಡಿಸುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ದೇಶದ ವಾಯುಪಡೆ ಬಲಪಡಿಸಲು ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.

Written by - Nitin Tabib | Last Updated : Sep 8, 2021, 09:17 PM IST
  • ಬುಧವಾರ ಈ ಕುರಿತು ಅನುಮತಿ ನೀಡಿದ CCS.
  • 40 ವಿಮಾನಗಳ ನಿರ್ಮಾಣ ದೇಶದಲ್ಲಿ ನಡೆಯಲಿದೆ.
  • ಇದೆ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಮಿಲಿಟರಿ ವಿಮಾನ ತಯಾರಿಸಲಿದೆ.
Military Transport Aircraft: 56 ಮಿಲಿಟರಿ ಟ್ರಾನ್ಸ್ಪೋರ್ಟ್ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರದ ಅನುಮತಿ title=
Military Transport Aircraft (File Photo)

ನವದೆಹಲಿ:  Military Transport Aircraft - ಚೀನಾ-ಪಾಕಿಸ್ತಾನದಿಂದ ಹೆಚ್ಚುತ್ತಿರುವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಮೋದಿ ಸರ್ಕಾರವು ದೇಶದ ಭದ್ರತೆಯನ್ನು ಬಲಪಡಿಸುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಭಾರತೀಯ ವಾಯುಪಡೆಗೆ 56 ಹೊಸ ಸಾರಿಗೆ ವಿಮಾನಗಳ ಖರೀದಿಗೆ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ಬುಧವಾರ ಅನುಮೋದನೆ ನೀಡಿದ CCS
ವರದಿಗಳ ಪ್ರಕಾರ, ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್‌ನ ಭದ್ರತಾ ಸಮಿತಿಯ (CCS) ಮಹತ್ವದ ಸಭೆ  ನಡೆದಿದ್ದು, ಈ ಸಭೆಯಲ್ಲಿ ಭಾರತೀಯ ವಾಯುಪಡೆಗೆ 56 C-295 MW ಸಾರಿಗೆ ವಿಮಾನ ಖರೀದಿಗೆ ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ. ಈ ವಿಮಾನಗಳನ್ನು ಸ್ಪೇನ್‌ನಿಂದ ಖರೀದಿಸಲಾಗುವುದು.

ಇದನ್ನೂ ಓದಿ-Aadhaar Card Alert : ಬೇರೆ ಯಾವುದೇ ದಾಖಲೆ ಇಲ್ಲದಿದ್ದರೂ ಮಾಡಿಸಬಹುದು ಆಧಾರ್ ಕಾರ್ಡ್

ದೇಶದಲ್ಲಿ 40 ವಿಮಾನಗಳನ್ನು ತಯಾರಿಸಲಾಗುವುದು
ಮೂಲಗಳ ಪ್ರಕಾರ, ಈ 56 ಸಾರಿಗೆ ವಿಮಾನಗಳಲ್ಲಿ 16 ಸ್ಪೇನ್ ನಲ್ಲಿ ಸಿದ್ಧವಾಗುತ್ತವೆ ಮತ್ತು ಮುಂದಿನ 48 ತಿಂಗಳಲ್ಲಿ ಅವು ಭಾರತಕ್ಕೆ ಬರಲಿವೆ. ಉಳಿದ 40 ವಿಮಾನಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಎನ್ನಲಾಗಿದೆ. ಇದಕ್ಕಾಗಿ, ಸ್ಪೇನ್‌ನ ಕಂಪನಿ ಮತ್ತು TATA ಮೈತ್ರಿ ಮಾಡಿಕೊಂಡಿವೆ. ಮುಂದಿನ 10 ವರ್ಷಗಳಲ್ಲಿ ಈ ಕಂಪನಿಗಳು ಜಂಟಿಯಾಗಿ ವಿಮಾನಗಳನ್ನು ನಿರ್ಮಾಣ ಮಾಡಲಿವೆ.

ಇದನ್ನೂ ಓದಿ-Big News: LPG ಸಿಲಿಂಡರಗೆ ಸಿಗುವ ಸಬ್ಸಿಡಿ ಸ್ಥಗಿತಗೊಳ್ಳಲಿದೇಯಾ? ಇಲ್ಲಿದೆ ಸರ್ಕಾರದ ಹೊಸ ಪ್ಲಾನ್

ಇದೇ ಮೊದಲ ಬಾರಿಗೆ ಖಾಸಗಿ ಕಂಪನಿ ಮಿಲಿಟರಿ ವಿಮಾನಗಳನ್ನು ತಯಾರಿಸಲಿದೆ
ವರದಿಯ ಪ್ರಕಾರ, ಭಾರತದಲ್ಲಿ ಈ ರೀತಿಯ ಮೊದಲ ಯೋಜನೆ ಇದಾಗಿದೆ. ಇದರಲ್ಲಿ ಖಾಸಗಿ ಕಂಪನಿಯು ದೇಶದ ವಾಯುಪಡೆಗಾಗಿ ಮಿಲಿಟರಿ ವಿಮಾನಗಳನ್ನು ತಯಾರಿಸಲಿದೆ. ಈ ಎಲ್ಲಾ 56 ವಿಮಾನಗಳು ಹೈಟೆಕ್ ಎಲೆಕ್ಟ್ರಾನಿಕ್ ಯುದ್ಧ ಸಾಧನಗಳನ್ನು ಹೊಂದಿವೆ. ಇದರಿಂದ ಅವು ಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸೈನಿಕರಿಗೆ ಸಹಾಯ ಮಾಡಬಲ್ಲವು.

ಇದನ್ನೂ ಓದಿ-ರೈತರಿಗೆ ಮೋದಿ ಸರ್ಕಾರದ ಉಡುಗೊರೆ! ರಬ್ಬಿ ಫಸಲುಗಳಿಗೆ ಸಿಗಲಿದೆ ಹೆಚ್ಚುವರಿ MSP

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News