115 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ- 19 ಕ್ಕೆ ತಲುಪಿದ ಸತ್ತವರ ಸಂಖ್ಯೆ

ಈ ವರ್ಷ ಸುಮಾರು 1,620 ಮಿಮೀ ದಾಖಲೆಯ ಮಳೆ ಪಡೆದ ನಗರ.

Last Updated : Oct 16, 2017, 11:19 AM IST
115 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ- 19 ಕ್ಕೆ ತಲುಪಿದ ಸತ್ತವರ ಸಂಖ್ಯೆ  title=

ಬೆಂಗಳೂರು: ಈ ವರ್ಷದ ಬೆಂಗಳೂರಿನ ಮಳೆಯು 115 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಈವರ್ಷ ನಗರವು ಸುಮಾರು 1,620 ಮಿಮೀ ದಾಖಲೆ ಪ್ರಮಾಣದ ಮಳೆ ಬಿದ್ದಿದ್ದು, 2005 ರಲ್ಲಿ 1,600 ಮಿ.ಮೀ. ದಾಖಲಾಗಿದ್ದ ಮಳೆಯ ದಾಖಲೆಯನ್ನು ಇದು ಮುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

ಅಲ್ಲದೆ ರಾಜ್ಯಾದ ಹಲವೆಡೆ ಭಾರಿ ಮಳೆಯಾಗಿದ್ದು, ಹಲವು ಮಂದಿ ಸಾವನ್ನಪ್ಪಿರುವ ಘಟನೆಯೂ ನಡೆದಿದೆ. ಗದಗ ಜಿಲ್ಲೆಯ  ಗಜೇಂದ್ರಗಡದಲ್ಲಿ ಭಾನುವಾರ ಸುರಿದ ಭಾರಿ ಮಳೆಯ ಪ್ರಭಾವದಿಂದಾಗಿ ಮನೆಯ ಮೇಲ್ಚಾವಣಿ ಕುಸಿದು ಹೋದ ನಂತರ ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದಾರೆ. 

ಭಾನುವಾರ ರಾತ್ರಿ ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ಎರಡು ತಿಂಗಳಿನಿಂದ ಅಭೂತಪೂರ್ವ ಮಳೆಯಾಗಿದೆ. ಇದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಮೈಸೂರು ನೆಟ್ವರ್ಕ್ ವರದಿಗಾರರಿಗೆ ತಿಳಿಸಿದ್ದಾರೆ. ಹಿಂದಿನ ಸರ್ಕಾರಗಳು ನಗರದ ಒಳಚರಂಡಿ ವ್ಯವಸ್ಥೆಯನ್ನು ಸರಿಪದಿಸಿಲ್ಲ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ದೂಷಿಸಿದ್ದಾರೆ. 350 ಕಿ.ಮೀ.ಗಳಷ್ಟು ಚರಂಡಿಗಳನ್ನು ಸರಿಪಡಿಸಲು  800 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದೂ ಸಹ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಸಚಿವರಾದ ಕೆ.ಜೆ. ಜಾರ್ಜ್, ಸ್ಥಳೀಯ ಶಾಸಕರು ಮತ್ತು ಬಿಬಿಎಂಪಿ ಸೇರಿ 15 ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಒಟ್ಟು 16 ಸಾವಿರ ಗುಂಡಿಗಳನ್ನು ಸರಿಪಡಿಸಲಾಗಿದೆ ಎಂದು ಸಿಎಂ ತಿಳಿಸಿದರು. 

ಕಳೆದ ಎರಡು ತಿಂಗಳುಗಳಲ್ಲಿ ಮಳೆಗಾಲವು ಬೆಂಗಳೂರಿಗೆ 2017 ರಲ್ಲಿ ಹರ್ಷಧಾರೆ ತಂದಿದೆ. ಹೈದರಾಬಾದ್, ಮೈಸೂರು ಮತ್ತು ಹತ್ತಿರದ ಪ್ರದೇಶಗಳಲ್ಲಿ ಕೂಡಾ ಭಾರೀ ಮಳೆಯಾಗಿದೆ.

Trending News