Fake or Pure Test: ನೀವು ಬಳಸುತ್ತಿರುವ ಸಕ್ಕರೆ ಅಸಲಿಯೋ? ನಕಲಿಯೋ? ಈ ರೀತಿ ಟೆಸ್ಟ್ ಮಾಡಿ

Fake or Pure Test: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳಲ್ಲಿ ಹಲವು ಪದಾರ್ಥಗಳು ಕಲಬೆರಕೆ ಆಗಿರುತ್ತವೆ. ವಿಪರ್ಯಾಸ ಎಂದರೆ ಸುಲಭವಾಗಿ ಆ ಪದಾರ್ಥಗಳು ಅಸಲಿಯೋ/ನಕಲಿಯೋ ಎಂದು ತಿಳಿಯುವುದೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದು ತಿಳಿಯಿರಿ.

Written by - Yashaswini V | Last Updated : Sep 16, 2021, 02:24 PM IST
  • ಈ ರೀತಿಯಾಗಿ ನೀವು ನಕಲಿ ಸಕ್ಕರೆ, ಹಿಟ್ಟು, ಮಸಾಲೆಗಳು ಮತ್ತು ಹಾಲನ್ನು ಚಿಟಿಕೆಯಲ್ಲಿ ಗುರುತಿಸಬಹುದು
  • ನಾವು ಮಾರುಕಟ್ಟೆಯಿಂದ ಖರೀದಿಸುವ ಹಲವು ಮಸಾಲೆಗಳನ್ನು ಉಪ್ಪಿನೊಂದಿಗೆ ಕಲಬೆರಕೆ ಮಾಡಲಾಗಿರುತ್ತದೆ
  • ಯಾರಾದರೂ ನಿಮಗೆ ಕೃತಕ ಹಾಲನ್ನು ನೀಡುತ್ತಿದ್ದರೆ ನಕಲಿ ಹಾಲನ್ನು ಗುರುತಿಸುವುದು ಕೂಡ ತುಂಬಾ ಸುಲಭ
Fake or Pure Test: ನೀವು ಬಳಸುತ್ತಿರುವ ಸಕ್ಕರೆ ಅಸಲಿಯೋ? ನಕಲಿಯೋ? ಈ ರೀತಿ ಟೆಸ್ಟ್ ಮಾಡಿ title=
Food Purity Test

ಬೆಂಗಳೂರು: ಯಾವುದೇ ಆಹಾರ ಪದಾರ್ಥಗಳನ್ನು ಮಾರುಕಟ್ಟೆಯಿಂದ ಕುರುಡಾಗಿ ತೆಗೆದುಕೊಳ್ಳಬಾರದು. ಏಕೆಂದರೆ, ಕೆಲವು ದುರುದ್ದೇಶಪೂರಿತ ಉತ್ಪಾದಕರು ಅಥವಾ ಮಧ್ಯವರ್ತಿಗಳು ನಕಲಿ ಅಥವಾ ಕಲಬೆರಕೆ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಹಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳಲ್ಲಿ ಹಲವು ಪದಾರ್ಥಗಳು ಕಲಬೆರಕೆ ಆಗಿರುತ್ತವೆ. ವಿಪರ್ಯಾಸ ಎಂದರೆ ಸುಲಭವಾಗಿ ಆ ಪದಾರ್ಥಗಳು ಅಸಲಿಯೋ/ನಕಲಿಯೋ ಎಂದು ತಿಳಿಯುವುದೇ ಇಲ್ಲ. ಆದರೆ,  ಇಂತಹ ನಕಲಿ ಉತ್ಪನ್ನಗಳನ್ನು ಖರೀದಿಸುವುದರಿಂದ ನಿಮ್ಮ ಜೇಬಿಗೆ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ಹಾನಿಕಾರಕ.

ಆದರೆ FSSAI ಅಂತಹ ಕೆಲವು ವಿಧಾನಗಳ ಬಗ್ಗೆ ಹೇಳಿದೆ, ಇದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಖರೀದಿಸುವ ಆಹಾರ ಪದಾರ್ಥಗಳು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಒಂದೇ ಒಂದು ನಿಮಿಷದಲ್ಲಿ ಪತ್ತೆ ಹಚ್ಚಬಹುದು. 

ಈ ನಾಲ್ಕು ಪದಾರ್ಥಗಳು ಅಸಲಿಯೋ/ನಕಲಿಯೋ ಎಂದು ಈ ರೀತಿ ಪರಿಶೀಲಿಸಿ:
ಎಫ್‌ಎಸ್‌ಎಸ್‌ಎಐ (FSSAI) ಪ್ರಕಾರ, ಕೆಲವು ಆಹಾರ ಪದಾರ್ಥಗಳ ಸಂವೇದನಾ ಮೌಲ್ಯಮಾಪನ ತ್ವರಿತ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ ಆ ಪದಾರ್ಥಗಳು ನೈಜವೋ ಅಥವಾ ನಕಲಿಯೋ ಎಂದು ಗುರುತಿಸಬಹುದು. 

ಇದನ್ನೂ ಓದಿ- ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯುವುದರಿಂದ ಎದುರಾಗುವ ಸಮಸ್ಯೆಗಳು ತಿಳಿದಿದೆಯಾ ? ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ

Fake Milk: ನಕಲಿ ಹಾಲು:
ಯಾರಾದರೂ ನಿಮಗೆ ಕೃತಕ ಹಾಲನ್ನು ನೀಡುತ್ತಿದ್ದರೆ ನಕಲಿ ಹಾಲನ್ನು ಗುರುತಿಸುವುದು ತುಂಬಾ ಸುಲಭ. ನೀವು ಅದನ್ನು ಚಿಟಿಕೆಯಲ್ಲಿ ಗುರುತಿಸಬಹುದು. ಏಕೆಂದರೆ, ಸಿಂಥೆಟಿಕ್ ಹಾಲು ಕುಡಿದ ನಂತರ ಸ್ವಲ್ಪ ಕಹಿ ರುಚಿಯನ್ನು ನೀಡುತ್ತದೆ. ಮತ್ತೊಂದೆಡೆ, ನೀವು ಸಿಂಥೆಟಿಕ್ ಹಾಲನ್ನು (Fake Milk) ಬೆರಳುಗಳ ನಡುವೆ ಉಜ್ಜಿದರೆ, ಅದು ಸಾಬೂನಿನಂತಹ ಭಾವನೆಯನ್ನು ನೀಡುತ್ತದೆ.

Fake Sugar: ನಕಲಿ ಸಕ್ಕರೆ:
ಸಕ್ಕರೆಯಲ್ಲಿ ಯೂರಿಯಾವನ್ನು ಬೆರೆಸಿದರೆ, ನೀವು ಅದನ್ನು ವಾಸನೆ ಮೂಲಕ ಗುರುತಿಸಬಹುದು. ಅಂಗೈಗಳ ನಡುವೆ ಸ್ವಲ್ಪ ಸಕ್ಕರೆಯನ್ನು ಉಜ್ಜಿಕೊಳ್ಳಿ ಮತ್ತು ನಂತರ ಅಂಗೈಯನ್ನು ವಾಸನೆ ಮಾಡಿ. ಇದು ಕಲಬೆರಕೆಯ ಸಕ್ಕರೆಯಾಗಿದ್ದರೆ, ಅದು ಅಮೋನಿಯದ ವಾಸನೆಯನ್ನು ಹೊಂದಿರುತ್ತದೆ. ಅದೇ ಸಮಯದಲ್ಲಿ, ಇನ್ನೊಂದು ರೀತಿಯಲ್ಲಿ, ನೀರಿನಲ್ಲಿ ಸ್ವಲ್ಪ ಸಕ್ಕರೆ ಬೆರೆಸಿ ನಂತರ ಅದನ್ನು ವಾಸನೆ ಮಾಡಿ. ಒಂದೊಮ್ಮೆ ಅದು ಕಲಬೆರಕೆ (Fake Sugar) ಆಗಿದ್ದರೆ ಇದು ಅಮೋನಿಯದ ವಾಸನೆಯನ್ನೂ ನೀಡುತ್ತದೆ.

ಇದನ್ನೂ ಓದಿ- High Blood Pressure: ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತೆ ಈ ಆಹಾರ ಪದಾರ್ಥಗಳು

Spice Powder: ಮಸಾಲೆ ಪೌಡರ್ ಗಳು: ಪುಡಿ ಮಾಡಿದ ಮಸಾಲೆಗಳು 
ನಾವು ಮಾರುಕಟ್ಟೆಯಿಂದ ಖರೀದಿಸುವ ಹಲವು ಮಸಾಲೆಗಳನ್ನು (Spice Powder) ಉಪ್ಪಿನೊಂದಿಗೆ ಕಲಬೆರಕೆ ಮಾಡಲಾಗಿರುತ್ತದೆ. ನಿಮ್ಮ ಮಸಾಲೆಗಳಲ್ಲಿ ಉಪ್ಪು ಇದ್ದರೆ, ನೀವು ಅದನ್ನು ರುಚಿಯ ಮೂಲಕ ಪರಿಶೀಲಿಸಬಹುದು.  ಚಿಟಿಕೆ ಮಸಾಲೆಯನ್ನು ಟೇಸ್ಟ್ ಮಾಡಿ ನೋಡಿ ಅದು ಉಪ್ಪಿನ ರುಚಿ ನೀಡಿದರೆ ಅದು ನಕಲಿಯಾಗಿರಬಹುದು.

Fake Atta: ನಕಲಿ ಹಿಟ್ಟನ್ನು ಹೇಗೆ ಗುರುತಿಸುವುದು?
ನೀವು ಬಳಸುವ  ಹಿಟ್ಟಿನೊಂದಿಗೆ ಕಲಬೆರಕೆ ಮಾಡಿದ್ದರೆ, ಅದನ್ನು ಗುರುತಿಸುವ ವಿಧಾನವು ತುಂಬಾ ಸುಲಭ. ಹಿಟ್ಟನ್ನು ಬೆರೆಸಿದಾಗ, ಕಲಬೆರಕೆ ಹಿಟ್ಟಿಗೆ (Fake Atta) ಬಹಳ ಕಡಿಮೆ ನೀರು ಬೇಕಾಗುತ್ತದೆ. ಅದೇ ಸಮಯದಲ್ಲಿ, ಶುದ್ಧ ಹಿಟ್ಟಿನಿಂದ ಮಾಡಿದ ರೊಟ್ಟಿಗಳು ರುಚಿಯಲ್ಲಿ ಸಿಹಿಯಾಗಿರುತ್ತವೆ ಮತ್ತು ನಕಲಿ ಹಿಟ್ಟಿನಿಂದ ಮಾಡಿದ ರೊಟ್ಟಿಗಳಲ್ಲಿ ರುಚಿಯಿರುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News