ಮುಂಬೈ: Portion of Under-Construction Flyover Collapses in Mumbai: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಶುಕ್ರವಾರ ಮುಂಜಾನೆ ಭಾರೀ ಅಪಘಾತ ಸಂಭವಿಸಿದ್ದು, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ನ ಒಂದು ಭಾಗ ಕುಸಿದಿದೆ (Portion of Under-Construction Flyover Collapses in Mumbai) . ಅಪಘಾತದಲ್ಲಿ 14 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಸಾಂತಾ ಕ್ರೂಜ್ ನ ವಿಎನ್ ದೇಸಾಯಿ ಆಸ್ಪತ್ರೆಗೆ (VN Desai Hospital) ದಾಖಲಿಸಲಾಗಿದೆ ಎಂದು ವರದಿಯಾಗಿದೆ.
#UPDATE | A total of 14 persons are injured after a part of a bridge collapsed in Bandra Kurla Complex, Bandra East, earlier today. The condition of all the injured persons is stable: Brihanmumbai Municipal Corporation (BMC)#Maharashtra
— ANI (@ANI) September 17, 2021
Maharashtra: A portion of an under-construction flyover collapses in Mumbai's Bandra Kurla Complex, injuring some labourers; police & fire brigade are at the spot. Details awaited. pic.twitter.com/2GxqLKo5Bb
— ANI (@ANI) September 17, 2021
#WATCH | Nine people sustained minor injuries & were taken to a nearby hospital after a portion of an under-construction flyover collapsed in Mumbai's Bandra Kurla Complex at around 4:40 am today, as per a fire brigade official present at the spot
(Latest visuals from the spot) pic.twitter.com/Ddrzw0uzT5
— ANI (@ANI) September 17, 2021
ಮುಂದುವರೆದ ರಕ್ಷಣಾ ಕಾರ್ಯಾಚರಣೆ:
ಮಾಹಿತಿಯ ಪ್ರಕಾರ, ಶುಕ್ರವಾರ ಮುಂಜಾನೆ 4:40 ಕ್ಕೆ ಅಪಘಾತ ಸಂಭವಿಸಿದ್ದು, ಮುಂಬೈನ ಪಾಶ್ ಪ್ರದೇಶದ ಬಾಂದ್ರಾ-ಕುರ್ಲಾ (Bridge collapses in Bandra-Kurla) ಕಾಂಪ್ಲೆಕ್ಸ್ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಒಂದು ಭಾಗ ಕುಸಿದಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಆಗಮಿಸಿವೆ. ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದ್ದು, ಅವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ:
ಈ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ (ವಲಯ 8) ಮಂಜುನಾಥ ಸಿಂಗೆ, "ಬಿಕೆಸಿ ಮುಖ್ಯ ರಸ್ತೆ ಮತ್ತು ಸಾಂತಾಕ್ರೂಜ್-ಚೆಂಬೂರ್ ಲಿಂಕ್ ರಸ್ತೆಯನ್ನು ಸಂಪರ್ಕಿಸುವ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ನ ಒಂದು ಭಾಗ (Under-Construction Flyover Collapses in Mumbai) ಮುಂಜಾನೆ 4:30 ರ ಸುಮಾರಿಗೆ ಕುಸಿದಿದೆ. 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲಿ ಯಾವುದೇ ಪ್ರಾಣಾಪಾಯವಿಲ್ಲ ಮತ್ತು ಯಾವುದೇ ವ್ಯಕ್ತಿ ಕಾಣೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
Mumbai: A portion of under-construction flyover connecting BKC main road & Santa Cruz–Chembur Link Road collapsed around 4:30 am. 13 people have sustained minor injuries & have been shifted to a hospital. There is no life loss & no person is missing: DCP (Zone 8) Manjunath Singe pic.twitter.com/26TjBSRi3N
— ANI (@ANI) September 17, 2021
ಇದನ್ನೂ ಓದಿ- Post office Jan Dhan Account: ಅಂಚೆ ಕಚೇರಿಯಲ್ಲಿ ಜನ್ ಧನ್ ಖಾತೆ ತೆರೆಯಿರಿ, 2 ಲಕ್ಷ ಲಾಭ ಪಡೆಯಿರಿ
ಮುಂಬೈನ ಮಂಕುರ್ದ್ ಪ್ರದೇಶದಲ್ಲಿ ಅಗ್ನಿ ಅನಾಹುತ:
ಅದೇ ಸಮಯದಲ್ಲಿ, ಮುಂಜಾನೆ ಮುಂಬೈನ ಮಂಕುರ್ದ್ ಪ್ರದೇಶದ ಸ್ಕ್ರ್ಯಾಪ್ ಯಾರ್ಡ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಆರು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಅಪಘಾತದಲ್ಲಿ ಇದುವರೆಗೂ ಯಾವುದೇ ಸಾವುನೋವಿನ ಬಗ್ಗೆ ವರದಿಯಾಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.