7th Pay Commission: ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ 7 ಲಕ್ಷಕ್ಕೆ ಏರಿಕೆ? ಪೂರ್ಣ ಲೆಕ್ಕಾಚಾರ ಪರಿಶೀಲಿಸಿ

ಕೇಂದ್ರ ಸರ್ಕಾರ ಶೇ.28ರಷ್ಟು ಡಿಎ ತೆಗೆದುಕೊಳ್ಳುವ ನೌಕರರಿಗೆ ಇತ್ತೀಚೆಗೆ ಅನುಮೋದನೆ ನೀಡಿರುವುದನ್ನುಇಲ್ಲಿ ಸ್ಮರಿಸಬಹುದು. ಆದರೆ ವರದಿಗಳ ಪ್ರಕಾರ, ಕೇಂದ್ರವು ಈಗ ಡಿಎಯನ್ನು ಶೇ.31ಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ.

Written by - Puttaraj K Alur | Last Updated : Sep 25, 2021, 06:43 AM IST
  • ಕೇಂದ್ರ ಸರ್ಕಾರ 1 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಹೆಚ್ಚಿಸಿತ್ತು
  • ಇದೀಗ ಕೇಂದ್ರ ಸರ್ಕಾರವು ಈಗ ಗ್ರಾಚ್ಯುಟಿ ಮತ್ತು ಲೀವ್ ಎನ್ಕಾಶ್ಮೆಂಟ್ ಅನ್ನು ಪರಿಗಣಿಸುವಂತೆ ಸೂಚಿಸಿದೆ
  • ಜನವರಿ 1, 2020 ಮತ್ತು ಜುಲೈ 30, 2021ರ ನಡುವೆ ನಿವೃತ್ತರಾದ ಎಲ್ಲ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಇದು ಅನ್ವಯಿಸಲಿದೆ
7th Pay Commission: ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ 7 ಲಕ್ಷಕ್ಕೆ ಏರಿಕೆ? ಪೂರ್ಣ ಲೆಕ್ಕಾಚಾರ ಪರಿಶೀಲಿಸಿ  title=
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ (Photo Courtesy: @DNA)

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತಷ್ಟು ಒಳ್ಳೆಯ ಸುದ್ದಿಗಳನ್ನು ನೀಡಿದೆ. 1 ಕೋಟಿಗೂ ಹೆಚ್ಚು ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಡಿಯರ್ನೆಸ್ ಅಲೋವೆನ್ಸ್ (Dearness Allowance) ಮತ್ತು ಡಿಯರ್ನೆಸ್ ರಿಲೀಫ್ (Dearness Relief) ಅನ್ನು ಹೆಚ್ಚಿಸಿದ ನಂತರ, ಸರ್ಕಾರವು ಈಗ ಗ್ರಾಚ್ಯುಟಿ ಮತ್ತು ಲೀವ್ ಎನ್ಕಾಶ್ಮೆಂಟ್ ಅನ್ನು ಪರಿಗಣಿಸಲು ಕೇಳಿದೆ. ಜನವರಿ 1, 2020 ಮತ್ತು ಜುಲೈ 30, 2021 ರ ನಡುವೆ ನಿವೃತ್ತರಾದ ಎಲ್ಲ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ.

ಶೇ.28ರಷ್ಟು ಡಿಎ(DA) ತೆಗೆದುಕೊಳ್ಳುವ ನೌಕರರಿಗೆ ಕೇಂದ್ರ ಸರ್ಕಾರ(Central Government) ಇತ್ತೀಚೆಗೆ ಅನುಮೋದನೆ ನೀಡಿರುವುದನ್ನುಇಲ್ಲಿ ಸ್ಮರಿಸಬಹುದು. ಆದರೆ ವರದಿಗಳ ಪ್ರಕಾರ, ಕೇಂದ್ರವು ಈಗ ಡಿಎಯನ್ನು ಶೇ.31ಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ. ಡಿಎ ಮೊದಲು ಶೇ.17ರಷ್ಟು ಆಗಿತ್ತು, ಆದರೆ ಜುಲೈನಲ್ಲಿ ಡಿಎ ಶೇ.28ಕ್ಕೆ ಏರಿಸಲಾಯಿತು.

ಇದನ್ನೂ ಓದಿ: UPI payments: Cashback ಆಫರ್ ಆರಂಭಿಸಿದ WhatsApp..!

ಇದೀಗ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ)1972 ರ ನಿಯಮಗಳ ಪ್ರಕಾರ, ಡಿಎ, ನಿವೃತ್ತಿಯ ಸಮಯದಲ್ಲಿ ಅಥವಾ ನೌಕರನ ಸಾವಿನ ಸಮಯದಲ್ಲಿ ಗ್ರಾಚ್ಯುಟಿ ಲೆಕ್ಕಾಚಾರಕ್ಕೆ ಪರಿಹಾರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ವೆಚ್ಚ ಇಲಾಖೆಯಿಂದ ನೀಡಲಾದ ಆಫೀಸ್ ಮೆಮೊರಾಂಡಮ್ (OM) ಪ್ರಕಾರ, ಈ ಉದ್ಯೋಗಿಗಳ ನಿವೃತ್ತಿ ಪ್ರಯೋಜನಗಳನ್ನು ಈ ಕೆಳಗಿನಂತೆ ಪಡೆಯಲಿದ್ದಾರೆ.

1) ಉದ್ಯೋಗಿ ಜನವರಿ 1, 2020 ಮತ್ತು ಜುಲೈ 30, 2021ರ ನಡುವೆ ನಿವೃತ್ತರಾದರೆ, ಅನ್ವಯವಾಗುವ ಡಿಎ ದರವು ಶೇ.21ರಷ್ಟು, - 17% + 4% ಜನವರಿ 1, 2020 ರಿಂದ ಜೂನ್ 30, 2020 ರವರೆಗೆ ಇರುತ್ತದೆ.

2) ಉದ್ಯೋಗಿ ಜುಲೈ 1, 2020, ಡಿಸೆಂಬರ್ 31, 2020ರ ನಡುವೆ ನಿವೃತ್ತರಾದರೆ ಅನ್ವಯವಾಗುವ ಡಿಎ ದರ ಶೇ.24ರಷ್ಟು, - 17% + 4% ಜನವರಿ 1, 2020 ರಿಂದ 2020ರ ಜೂನ್ 30, + 1% 2020ರ ಜುಲೈ 1ರಿಂದ 2020ರ ಡಿಸೆಂಬರ್ 31ರವರೆಗೆ ಇರುತ್ತದೆ.

3) ಉದ್ಯೋಗಿ ಜನವರಿ 1, 2021 ರಿಂದ ಜೂನ್ 30, 2021ರ ನಡುವೆ ನಿವೃತ್ತರಾದರೆ ಅನ್ವಯವಾಗುವ ಡಿಎ ದರವು ಶೇ.28 ರಷ್ಟು, - 17% + 4% 2020ರ ಜನವರಿ 1ರಿಂದ 2020ರ ಜೂನ್ 30, + 1% 2020ರ ಜುಲೈ 1 ರಿಂದ 2020ರ ಡಿಸೆಂಬರ್ 31, + 3% 2021ರ ಜನವರಿ 1 ರಿಂದ ಜೂನ್ 30 ರವರೆಗೆ ಇರುತ್ತದೆ.

ಇದನ್ನೂ ಓದಿ: ಕೊರೊನಾ ಭಯ ಮರೆಯಾಗುತ್ತಿರುವಂತೆಯೇ ಸೆನ್ಸೆಕ್ಸ್ ನಲ್ಲಿ ಭಾರಿ ಜಿಗಿತ..!

7 ನೇ ವೇತನ ಆಯೋಗ: ಗ್ರಾಚ್ಯುಟಿಯಲ್ಲಿ 7 ಲಕ್ಷ ರೂ. ವರೆಗೆ ಹೆಚ್ಚಳ

ಪ್ರಯಾಗರಾಜ್ ಅಟಾರ್ನಿ ಜನರಲ್ ಆಫೀಸ್ ನ ಮಾಜಿ ಅಧ್ಯಕ್ಷ  ಎಚ್‌.ಎಸ್.ತಿವಾರಿ ಅವರ ಪ್ರಕಾರ, ನಿವೃತ್ತಿಯ ಸಮಯದಲ್ಲಿ ಉದ್ಯೋಗಿ ಮೂಲ ವೇತನ 40,000 ರೂ. ಗಳಿಸಿದರೆ, ಅವರ ಗ್ರಾಚ್ಯುಟಿ ಮತ್ತು ಲೀವ್ ಎನ್ಕಾಶ್ಮೆಂಟ್ ಮೊತ್ತವು ಸುಮಾರು 1,17,000 ರೂ.ಗಳಷ್ಟು ಹೆಚ್ಚಾಗುತ್ತದೆ(DA ಹೆಚ್ಚಳದಿಂದಾಗಿ), ಈ ಮಧ್ಯೆ ಮೂಲ ವೇತನವು ತಿಂಗಳಿಗೆ 2,50,000 ರೂ. ಆಗಿದ್ದರೆ ನಿವೃತ್ತಿ ನಿಧಿಯು 7 ಲಕ್ಷ ರೂ.ಕ್ಕಿಂತ ಹೆಚ್ಚಾಗುತ್ತದೆ.

ಪ್ರಸ್ತುತ ನಿಬಂಧನೆಗಳ ಪ್ರಕಾರ ಉದ್ಯೋಗಿ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಗ್ರಾಚ್ಯುಟಿ ಪಾವತಿ ಅನ್ವಯವಾಗುತ್ತದೆ. ಆದರೆ ಈ ನಿಮಯವು ಶೀಘ್ರವೇ ಬದಲಾಗಲಿದೆ ಎನ್ನಲಾಗುತ್ತಿದೆ. ಏಕೆಂದರೆ ಹೊಸ ಕಾರ್ಮಿಕ ಸಂಹಿತೆಯ ಅಡಿಯಲ್ಲಿ ಉದ್ಯೋಗಿಗಳು ಕೇವಲ 1 ವರ್ಷದ ಸೇವೆಯನ್ನು ಪೂರ್ಣಗೊಳಿಸಬೇಕಿದ್ದು, ಇದಕ್ಕೆ ಗ್ರಾಚ್ಯುಟಿ ಪಾವತಿ ಅನ್ವಯವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News