ನವದೆಹಲಿ: ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಹೆಚ್ಚುತ್ತಿರುವ ತೂಕದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಬ್ಯುಸಿ ಜೀವನಶೈಲಿಯಿಂದ ಬಹುತೇಕ ಜನರು ಸರಿಯಾದ ಆಹಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಅವರ ತೂಕವು ಬಹಳಷ್ಟು ಹೆಚ್ಚಾಗುತ್ತದೆ ಅಥವಾ ಅಗತ್ಯಕ್ಕೆ ತಕ್ಕಂತೆ ಕಡಿಮೆಯಾಗಲು ಆರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ತೂಕವನ್ನು ನಿಯಂತ್ರಿಸಲು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಕೆಲವು ಜನರು ಮಾತ್ರ ತಾವು ಅಧಿಕ ತೂಕ ಹೊಂದಿದ್ದೇನೆಂದು ಚಿಂತಿತರಾಗುತ್ತಾರೆ. ಬಳಿಕ ವಿಭಿನ್ನ ಆಹಾರಕ್ರಮಗಳನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ನಂತರ ಅವರು ಕಡಿಮೆ ತೂಕ ಹೊಂದಿರುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ.
ಇದನ್ನೂ ಓದಿ: Side Effects Of Paneer :ಈ ಸಮಸ್ಯೆಗಳಿರುವವರು ಪನ್ನೀರ್ ತಿನ್ನುವುದನ್ನು ತಕ್ಷಣ ನಿಲ್ಲಿಸಬೇಕು
ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಗೊತ್ತಾ? ಆರೋಗ್ಯವಂತ ವ್ಯಕ್ತಿಯ ತೂಕ, ವಯಸ್ಸು ಮತ್ತು ಎತ್ತರ ಹೇಗಿರಬೇಕು ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ತಜ್ಞರ ಪ್ರಕಾರ, ಎತ್ತರಕ್ಕೆ ಅನುಗುಣವಾಗಿ ತೂಕದ ಸಮತೋಲನವಿದ್ದರೆ ಉತ್ತಮ ಆರೋಗ್ಯದ ಮಾನದಂಡವಾಗಿದೆ. ಅದಕ್ಕಾಗಿಯೇ ಇಂದು ನಾವು ನಿಮ್ಮ ಎತ್ತರಕ್ಕೆ ಅನುಗುಣವಾಗಿ ತೂಕ ಎಷ್ಟು ಇರಬೇಕು ಎಂದು ತಿಳಿಸುತ್ತಿದ್ದೇವೆ. ಇದಲ್ಲದೆ ಸರಾಸರಿ ವಯಸ್ಸಿನ ಪ್ರಕಾರ ಯಾರ ತೂಕ ಎಷ್ಟಿರಬೇಕೆಂದು ತಿಳಿಸಿಕೊಡುತ್ತೇವೆ. ಇದರ ಪ್ರಕಾರ ನೀವು ದಪ್ಪಗಾಗಿದ್ದೀರಾ ಅಥವಾ ತೆಳ್ಳಗಾಗಿದ್ದೀರಾ ಎಂದು ಸುಲಭವಾಗಿ ತಿಳಿಯಲು ಸಾಧ್ಯವಾಗುತ್ತದೆ. ಆ ಮಾನದಂಡಗಳು ಯಾವುವು ಎಂಬ ಉಪಯುಕ್ತ ಮಾಹಿತಿ ಇಲ್ಲಿವೆ ನೋಡಿ…
ಇದನ್ನೂ ಓದಿ: Benefits of Cake: ಕೇಕ್ ತಿನ್ನುವುದರಿಂದಲೂ ಪ್ರಯೋಜನಗಳಿವೆಯೇ? ಈ ಲೇಖನವನ್ನು ಒಮ್ಮೆ ಓದಿ
ಎಷ್ಟು ತೂಕದ ಅವಶ್ಯಕತೆ ಇದೆ ಎಂದು ತಿಳಿದುಕೊಳ್ಳಿ
1) 4 ಅಡಿ 10 ಇಂಚು ಉದ್ದವಿರುವ ಸಾಮಾನ್ಯ ತೂಕದ ವ್ಯಕ್ತಿ 41 ರಿಂದ 52 ಕೆಜಿ ಇರಬೇಕು. ಇದಕ್ಕಿಂತ ಹೆಚ್ಚಿನ ತೂಕವು ಅಧಿಕ ತೂಕದ ವರ್ಗದಲ್ಲಿ ಬರುತ್ತದೆ.
2) 5 ಅಡಿ ಉದ್ದದ ಯಾರೇ ಆಗಿರಲಿ ಅವರ ಸಾಮಾನ್ಯ ತೂಕ 44 ರಿಂದ 55.7 ಕೆಜಿ ನಡುವೆ ಇರಬೇಕು. ಇದು ಆರೋಗ್ಯಕರ ದೇಹದ ಸಂಕೇತವಾಗಿದೆ.
3) 5 ಅಡಿ 2 ಇಂಚು ಎತ್ತರದ ವ್ಯಕ್ತಿಯ ತೂಕ 49 ರಿಂದ 63 ಕೆಜಿ ನಡುವೆ ಇರಬೇಕು.
4) 5 ಅಡಿ 4 ಇಂಚು ಎತ್ತರದ ಸಾಮಾನ್ಯ ತೂಕದ ವ್ಯಕ್ತಿ 49 ರಿಂದ 63 ಕೆಜಿ ನಡುವೆ ಇರಬೇಕು.
5) 5 ಅಡಿ 6 ಇಂಚು ಉದ್ದದ ವ್ಯಕ್ತಿಯ ಸಾಮಾನ್ಯ ತೂಕ 53 ರಿಂದ 67 ಕೆಜಿ ನಡುವೆ ಇರಬೇಕು
6) 5 ಅಡಿ 8 ಇಂಚು ಎತ್ತರದ ವ್ಯಕ್ತಿಯ ಸಾಮಾನ್ಯ ತೂಕವು 56 ರಿಂದ 71 ಕೆಜಿ ನಡುವೆ ಇರಬೇಕು.
7) 5 ಅಡಿ 10 ಇಂಚು ಇರುವ ಸಾಮಾನ್ಯ ವ್ಯಕ್ತಿಯ ತೂಕ 59 ರಿಂದ 75 ಕೆಜಿ ಇರಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.