ಮನೆ ನಿರ್ಮಾಣಕ್ಕೆ ಈ ಸರ್ಕಾರ ಉಚಿತವಾಗಿ ನೀಡಲಿದೆ ಮರಳು

"ಪಿಎಂಎವೈ ಫಲಾನುಭವಿಗಳು  ಮರಳಿನ ಅಧಿಕ ಬೆಲೆಯಿಂದಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕಾಗಿಯೇ PMAY ಫಲಾನುಭವಿಗಳು ತಮ್ಮ ಮನೆಯನ್ನು ನಿರ್ಮಿಸಲು ಉಚಿತ ಮರಳನ್ನು ಪಡೆಯಲಿದ್ದಾರೆ".

Written by - Ranjitha R K | Last Updated : Oct 5, 2021, 07:10 PM IST
  • ಮನೆ ನಿರ್ಮಿಸಲು ಸರ್ಕಾರದಿಂದ ಉಚಿತ ಮರಳು
  • ಮಧ್ಯಪ್ರದೇಶ ಸಿಎಂ ಶಿವರಾಜ್ ಘೋಷಣೆ
  • PMAY ಫಲಾನುಭವಿಗಳಿಗೆ ನೀಡಲಾಗುತ್ತದೆ ಪ್ರಯೋಜನ
ಮನೆ ನಿರ್ಮಾಣಕ್ಕೆ ಈ ಸರ್ಕಾರ ಉಚಿತವಾಗಿ ನೀಡಲಿದೆ ಮರಳು  title=
ಮನೆ ನಿರ್ಮಿಸಲು ಸರ್ಕಾರದಿಂದ ಉಚಿತ ಮರಳು (file photo)

ಭೋಪಾಲ್ : ಮಧ್ಯಪ್ರದೇಶದಲ್ಲಿ ವಾಸಿಸುವ ಜನರಿಗೆ ಸ್ವಂತ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಿದೆ.   ಶಿವರಾಜ್ ಸಿಂಗ್ ಚೌಹಾಣ್ (Shivraj singh chauhan) ಸರ್ಕಾರವು, ಈಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PMAY) ಫಲಾನುಭವಿಗಳಿಗೆ ಮರಳನ್ನು ಉಚಿತವಾಗಿ ನೀಡುತ್ತಿದೆ.  

ಸಿಎಂ ಶಿವರಾಜ್ ಘೋಷಣೆ :
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chauhan), ಸಿಂಗ್ರೌಲಿ ಜಿಲ್ಲೆಯ ಚಿತ್ರಾಂಗಿ ಪಟ್ಟಣದಲ್ಲಿ ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡುತ್ತಾ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PMAY) ಫಲಾನುಭವಿಗಳಿಗೆ ಉಚಿತವಾಗಿ ಮರಳು ನೀಡುವ ಸಲುವಾಗಿ, ರಾಜ್ಯ ಸರ್ಕಾರ ಮರಳು ನೀತಿಯನ್ನು ತಿದ್ದುಪಡಿ ಮಾಡಲಿದೆ ಎಂದು ಹೇಳಿದ್ದಾರೆ. "ಪಿಎಂಎವೈ ಫಲಾನುಭವಿಗಳು  ಮರಳಿನ ಅಧಿಕ ಬೆಲೆಯಿಂದಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕಾಗಿಯೇ PMAY ಫಲಾನುಭವಿಗಳು ತಮ್ಮ ಮನೆಯನ್ನು ನಿರ್ಮಿಸಲು ಉಚಿತ ಮರಳನ್ನು ಪಡೆಯಲಿದ್ದಾರೆ ಎಂದು ಘೋಷಿಸಿದ್ದಾರೆ. 

ಇದನ್ನೂ ಓದಿ: CoronaVirus Third Wave: ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಮತ್ತೆ ಹೇರಬೇಕಾದೀತು ಲಾಕ್ ಡೌನ್ , ICMR ನೀಡಿದೆ ಎಚ್ಚರಿಕೆ

ಹಲವಾರು ಯೋಜನೆಗಳ ಘೋಷಣೆ :
2011 ರ ಪಟ್ಟಿಯಲ್ಲಿ ಉಳಿದಿರುವ ಹೆಸರುಗಳನ್ನು ಸೇರಿಸಲು ಮತ್ತೊಂದು ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಈ ಯೋಜನೆಯಡಿಯಲ್ಲಿ ಗರಿಷ್ಠ ಸಂಖ್ಯೆಯ ಬಡ ಕುಟುಂಬಗಳು ಮನೆಯನ್ನು ಪಡೆಯುವಂತಾಗಬೇಕು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ, ಚೌಹಾಣ್ ಚಿತ್ರಾಂಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಕೂಡಾ ಘೋಷಿಸಿದ್ದಾರೆ. ಇವುಗಳಲ್ಲಿ ಮಿನಿ ಕ್ರೀಡಾಂಗಣ, ಹಲವಾರು ರಸ್ತೆಗಳ ನಿರ್ಮಾಣ ಸೇರಿವೆ. ಅವರು 1,663 ಕೋಟಿ ಅಂದಾಜು ವೆಚ್ಚದಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ ನಲ್ ಜಲ್ ಯೋಜನೆಯ ಅಡಿಪಾಯವನ್ನು ಹಾಕಿದರು.

ಇದನ್ನೂ ಓದಿ: Indian Railway Recruitment: 4,000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News