BSNL Plans: BSNLನ ಹೊಸ ಸೂಪರ್ ಸ್ಟಾರ್ ಪ್ಲಾನ್, 2000GB ಡೇಟಾ ಜೊತೆಗೆ ಹಲವು ಸೌಲಭ್ಯ, ಬೆಲೆ ಕೇಳಿ ದಂಗಾಗುವಿರಿ

BSNL Broadband Plans - BSNL ಅಕ್ಟೋಬರ್ 5 ರಿಂದ ಎರಡು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ, ಅವುಗಳ ಬೆಲೆ ರೂ.749 ಮತ್ತು ರೂ.949 ರೂ. ಆಗಿದೆ. ಈ ಯೋಜನೆಗಳಲ್ಲಿ  ನೀವು ಡೇಟಾ ಮತ್ತು ಕರೆಗಳ ಜೊತೆಗೆ OTT ಪ್ರಯೋಜನಗಳನ್ನು ಸಹ ಪಡೆಯುವಿರಿ.

Written by - Nitin Tabib | Last Updated : Oct 9, 2021, 03:55 PM IST
  • BSNL ಬ್ರಾಡ್‌ಬ್ಯಾಂಡ್ ಯೋಜನೆಗಳು
  • ಎರಡು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ ಸರ್ಕಾರಿ ಟೆಲಿಕಾಂ ಕಂಪನಿ
  • ರೂ.949 ಕ್ಕೆ 2000GB ಡೇಟಾ ಮತ್ತು ಹಲವು ಲಾಭಗಳು
BSNL Plans: BSNLನ ಹೊಸ ಸೂಪರ್ ಸ್ಟಾರ್ ಪ್ಲಾನ್, 2000GB ಡೇಟಾ ಜೊತೆಗೆ ಹಲವು ಸೌಲಭ್ಯ, ಬೆಲೆ ಕೇಳಿ ದಂಗಾಗುವಿರಿ title=
BSNL Latest Broadband Plans (File Photo)

BSNL New Plans: ಸರ್ಕಾರಿ ಟೆಲಿಕಾಂ ಕಂಪನಿ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಅನೇಕ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಒದಗಿಸುತ್ತದೆ. ಅವುಗಳ ಜೊತೆಗೆ BSNL ತನ್ನ ಗ್ರಾಹಕರಿಗೆ ಖಾಸಗಿ ಟೆಲಿಕಾಂ ಕಂಪನಿಗಳಂತೆ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಸಹ ಒದಗಿಸುತ್ತದೆ. ಬಿಎಸ್‌ಎನ್‌ಎಲ್‌ನ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಎರಡು ಹೊಚ್ಚ ಹೊಸ ಬ್ರಾಡ್ ಬ್ಯಾಂಡ್ ಯೋಜನೆಗಳ (BSNL Latest Broadband Plans) ಕುರಿತು ಮಾಹಿತಿ ಪಡೆಯೋಣ ಬನ್ನಿ.

ಈ ಯೋಜನೆಯಲ್ಲಿ 2000 GB ಡೇಟಾ ಜೊತೆಗೆ ಹಲವು ಲಾಭಗಳಿವೆ
ಸರ್ಕಾರಿ ಟೆಲಿಕಾಂ ಕಂಪನಿಯ ಈ ಬ್ರಾಡ್‌ಬ್ಯಾಂಡ್ (BSNL Broadband Plans) ಯೋಜನೆ ಕೇವಲ 949 ರೂ. ಪಾವತಿಸಿ ಪಡೆಯಬಹುದು. ಈ ಬೆಲೆಯಲ್ಲಿ, BSNL ನಿಮಗೆ 2,000GB ಡೇಟಾವನ್ನು ನೀಡುತ್ತಿದೆ, ಇದರಲ್ಲಿ ಇಂಟರ್ನೆಟ್ ವೇಗ 150Mbps ಆಗಿರಲಿದೆ.  ಇದರಲ್ಲಿ ಒಂದು ವೇಳೆ ನಿಮಗೆ ನೀಡಲಾಗಿರುವ ಡೇಟಾ ಖಾಲಿಯಾದರೆ, ನೀವು ಪಡೆಯುವ ಇಂಟರ್ನೆಟ್ ವೇಗವು 10Mbpsಗೆ ಇಳಿಕೆಯಾಗಲಿದೆ.

ಈ ಪ್ಲಾನ್ ಅಡಿ ನೀವು ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆ ಕೂಡ ಮಾಡಬಹುದು. ಈ ಪ್ಲಾನ್ ನಲ್ಲಿ ಸಿಗುವ OTT ಲಾಭಗಳ ಕುರಿತು ಹೇಳುವುದಾದರೆ, ಇದರಲ್ಲಿ ನಿಮಗೆ ಸೋನಿ ಲಿವ್ ಪ್ರಿಮಿಯಂ, ಝೀ5, ವೋಟ್ ಸೆಲೆಕ್ಟ್ ಹಾಗೂ YUP ಟಿವಿ ಚಂದಾದಾರಿಕೆ ಉಚಿತವಾಗಿ ನೀಡಲಾಗುವುದು.

ಈ ಪ್ಲಾನ್ ಸಿಂಧುತ್ವ ಒಂದು ತಿಂಗಳದ್ದಾಗಿದ್ದು, ಇದರಲ್ಲಿ ನಿಮಗೆ ಪ್ಲಾನ್ ಆರಂಭಕ್ಕೂ ಮುನ್ನ ಒಂದು ಸೆಕ್ಯೂರಿಟಿ ಡಿಪಾಸಿಟ್ ನೀಡಬೇಕು.

BSNL ರೂ. 749ರ ಬ್ರಾಡ್ ಬಂದ್ ರೀಚಾರ್ಜ್ ಪ್ಲಾನ್
ರೂ .749 ರ ಈ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ, ನಿಮಗೆ ಒಂದು ತಿಂಗಳವರೆಗೆ ಒಟ್ಟು 1,000GB ಡೇಟಾವನ್ನು 100Mbps ವೇಗದಲ್ಲಿ ನೀಡಲಾಗುವುದು ಮತ್ತು ಈ ಡೇಟಾ ಮುಗಿದ ನಂತರ ನಿಮ್ಮ ಇಂಟರ್ನೆಟ್ ವೇಗವನ್ನು 5Mbps ಗೆ ಇಳಿಸಲಾಗುತ್ತದೆ.

ಅಲ್ಲದೆ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ. ಒಟಿಟಿ ಪ್ರಯೋಜನಗಳ ಕುರಿತು ಹೇಳುವುದಾದರೆ, ಇದರಲ್ಲಿ ನಿಮಗೆ ಸೋನಿ ಲಿವ್ ಪ್ರೀಮಿಯಂ, ಜಿ 5, ವೂಟ್ ಸೆಲೆಕ್ಟ್ ಮತ್ತು ಯುಪ್ ಟಿವಿಯ ಚಂದಾದಾರಿಕೆಯನ್ನು ನೀಡಲಾಗುವುದು.

ಇದನ್ನೂ ಓದಿ-Aadhaar Card:e-Aadhaarಗೆ ಮಾನ್ಯತೆ ಎಷ್ಟು? ಇದಕ್ಕಾಗಿ ಯಾವ ಸಂಗತಿಗಳು ಬೇಕು... ಇಲ್ಲಿದೆ ವಿವರ

ಈ ಯೋಜನೆಯ ಸಿಂಧುತ್ವವು ಒಂದು ತಿಂಗಳಾಗಿದ್ದು, ಇದರಲ್ಲಿಯೂ ಕೂಡ ಯೋಜನೆ ಆರಂಭವಾಗುವ ಮೊದಲು ನೀವು ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ-Facebook, Instagram Apologize : ಒಂದು ವಾರದಲ್ಲಿ 2ನೇ ಬಾರಿ ಸ್ಥಗಿತಗೊಂಡ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ : ಕ್ಷಮೆ ಕೇಳಿದ ಕಂಪನಿ

BSNL ಈ ಎರಡೂ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಅಕ್ಟೋಬರ್ 5 ರಿಂದ ಬಿಡುಗಡೆ ಮಾಡಿದೆ ಮತ್ತು ಅಂಡಮಾನ್-ನಿಕೋಬಾರ್ ಹೊರತುಪಡಿಸಿ ಎಲ್ಲಾ ವಲಯಗಳ ಬಳಕೆದಾರರು ಅವುಗಳ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ-Airtel Offer: ಸ್ಮಾರ್ಟ್ ಫೋನ್ ಖರೀದಿಸಿದರೆ ಸಿಗಲಿದೆ 6 ಸಾವಿರ ರೂಪಾಯಿಗಳ ಕ್ಯಾಶ್ ಬ್ಯಾಕ್ , ಹೇಗೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News