IPL 2021: ಐಪಿಎಲ್ ಗೆ ನಿವೃತ್ತಿ ಘೋಷಿಸಲಿದ್ದಾರೆಯೇ ಧೋನಿ?

ಚೆನ್ನೈ ಸೂಪರ್ ಕಿಂಗ್ಸ್ ಆಡಳಿತವು ಎಂಎಸ್ ಧೋನಿಯ ನಿವೃತ್ತಿ ವಿಚಾರವಾಗಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರವನ್ನು ನೀಡಿದೆ.ಧೋನಿ ಫ್ರಾಂಚೈಸ್‌ನೊಂದಿಗೆ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಇನ್ನೊಂದು ಸೀಸನ್‌ನಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿ ಆಡಳಿತವಿದೆ ಎನ್ನಲಾಗಿದೆ.

Written by - Zee Kannada News Desk | Last Updated : Oct 9, 2021, 10:40 PM IST
  • ಚೆನ್ನೈ ಸೂಪರ್ ಕಿಂಗ್ಸ್ ಆಡಳಿತವು ಎಂಎಸ್ ಧೋನಿಯ ನಿವೃತ್ತಿ ವಿಚಾರವಾಗಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರವನ್ನು ನೀಡಿದೆ.
  • ಧೋನಿ ಫ್ರಾಂಚೈಸ್‌ನೊಂದಿಗೆ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಇನ್ನೊಂದು ಸೀಸನ್‌ನಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿ ಆಡಳಿತವಿದೆ ಎನ್ನಲಾಗಿದೆ.
IPL 2021: ಐಪಿಎಲ್ ಗೆ ನಿವೃತ್ತಿ ಘೋಷಿಸಲಿದ್ದಾರೆಯೇ ಧೋನಿ?  title=
file photo

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಆಡಳಿತವು ಎಂಎಸ್ ಧೋನಿಯ ನಿವೃತ್ತಿ ವಿಚಾರವಾಗಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರವನ್ನು ನೀಡಿದೆ.ಧೋನಿ ಫ್ರಾಂಚೈಸ್‌ನೊಂದಿಗೆ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಇನ್ನೊಂದು ಸೀಸನ್‌ನಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿ ಆಡಳಿತವಿದೆ ಎನ್ನಲಾಗಿದೆ.

ಇದನ್ನೂ ಓದಿ: IPL 2021, DC vs CSK: ಇಂದು ಅಗ್ರಸ್ಥಾನಕ್ಕಾಗಿ ಮದಗಜಗಳ ಕಾದಾಟ..!

ಧೋನಿಯ (MS Dhoni) ವಿದಾಯ ಪಂದ್ಯವು ಚೆಪಾಕ್‌ನಲ್ಲಿ ಸಿಎಸ್‌ಕೆ ಅಭಿಮಾನಿಗಳ ಮುಂದೆ ನಡೆಯಲಿದೆ ಎಂದು ಮ್ಯಾನೇಜ್‌ಮೆಂಟ್ ಹೇಳಿದೆ.'ಅವರು ತಮ್ಮ ಕೊನೆಯ ಆಟವನ್ನು ಚೆಪಾಕ್‌ನಲ್ಲಿ ಆಡಲು ಬಯಸುತ್ತಾರೆ.ಆ ಸಾಧ್ಯತೆ ಹೆಚ್ಚು ಇದೆ 'ಚೆನ್ನೈ ಸೂಪರ್ ಕಿಂಗ್ಸ್ ನ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಧೋನಿಯ ಈ ನಿರ್ಧಾರದಿಂದಲೇ ಬಚಾವಾಗಿದ್ದರು ವಿರಾಟ್ ಕೊಹ್ಲಿ, ಇಲ್ಲವಾದರೆ ಮುಗಿದೇ ಹೋಗುತ್ತಿತ್ತು ಕೊಹ್ಲಿ career

ಯುಎಇಯಲ್ಲಿ ನಡೆಯುತ್ತಿರುವ ಆವೃತ್ತಿಯಲ್ಲಿ ಸ್ವತಃ ಧೋನಿ ಸುಳಿವು ನೀಡುವುದರೊಂದಿಗೆ ಈಗ ಅವರ ನಿವೃತ್ತಿಯ ಮಾತುಕತೆಗಳು ಹೆಚ್ಚಾಗುತ್ತಿದ್ದಂತೆ ಈ ಬೆಳವಣಿಗೆ ಬಂದಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಸಿಎಸ್‌ಕೆ ಪಂದ್ಯದ ಮೊದಲು, ಧೋನಿಗೆ ಅವರ ಮುಂದಿನ ಭವಿಷ್ಯದ ಬಗ್ಗೆ ಕೇಳಿದಾಗ,"ಮುಂದಿನ ಋತುವಿನಲ್ಲಿ ನೀವು ನನ್ನನ್ನು ಹಳದಿ ಬಣ್ಣದಲ್ಲಿ ನೋಡುತ್ತೀರಿ, ಆದರೆ ನಾನು ಸಿಎಸ್‌ಕೆಗಾಗಿ ಆಡುತ್ತೇನೆಯೇ ಎಂಬುದು ನಿಮಗೆ ಗೊತ್ತಿಲ್ಲ.ಬಹಳಷ್ಟು ಅನಿಶ್ಚಿತತೆಗಳು ಬರುತ್ತಿವೆ; ಎರಡು ಹೊಸ ತಂಡಗಳು ಬರುತ್ತಿವೆ..ಉಳಿಸಿಕೊಳ್ಳುವ ನಿಯಮಗಳು ಏನೆಂದು ನಮಗೆ ಗೊತ್ತಿಲ್ಲ' ಎಂದು ಅವರು ಹೇಳಿದರು.

ಕಳೆದ ವರ್ಷ ಆಗಸ್ಟ್ 15 ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿಧಾಯ ಹೇಳಿದ್ದರು.

ಇದನ್ನೂ ಓದಿ : CRICURU App : ಕ್ರಿಕೆಟ್ ತರಬೇತಿಗೆ 'ಆ್ಯಪ್' ಆರಂಭಿಸಿದ ವೀರೇಂದ್ರ ಸೆಹ್ವಾಗ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News