IPL 2021: ಲೀಗ್ ಹಂತದಲ್ಲಿ ಇದುವರೆಗೆ ಅಧಿಕ ರನ್ ಗಳಿಸಿರುವ ಐದು ಆಟಗಾರರಿವರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಲೀಗ್ ಹಂತವು ಶುಕ್ರವಾರ ಕೊನೆಗೊಂಡಿದೆ.ನಾಲ್ಕು ತಂಡಗಳು, ದೆಹಲಿ ಕ್ಯಾಪಿಟಲ್ಸ್ (ಡಿಸಿ), ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪ್ಲೇಆಫ್‌ನಲ್ಲಿ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ ಮತ್ತು ಈಗ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಹೋರಾಡುತ್ತವೆ.

Written by - Zee Kannada News Desk | Last Updated : Oct 10, 2021, 10:15 PM IST
  • ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಲೀಗ್ ಹಂತವು ಶುಕ್ರವಾರ ಕೊನೆಗೊಂಡಿದೆ.
  • ನಾಲ್ಕು ತಂಡಗಳು, ದೆಹಲಿ ಕ್ಯಾಪಿಟಲ್ಸ್ (ಡಿಸಿ), ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪ್ಲೇಆಫ್‌ನಲ್ಲಿ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ ಮತ್ತು ಈಗ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಹೋರಾಡುತ್ತವೆ.
 IPL 2021: ಲೀಗ್ ಹಂತದಲ್ಲಿ ಇದುವರೆಗೆ ಅಧಿಕ ರನ್ ಗಳಿಸಿರುವ ಐದು ಆಟಗಾರರಿವರು  title=
file photo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಲೀಗ್ ಹಂತವು ಶುಕ್ರವಾರ ಕೊನೆಗೊಂಡಿದೆ.ನಾಲ್ಕು ತಂಡಗಳು, ದೆಹಲಿ ಕ್ಯಾಪಿಟಲ್ಸ್ (ಡಿಸಿ), ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪ್ಲೇಆಫ್‌ನಲ್ಲಿ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ ಮತ್ತು ಈಗ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಹೋರಾಡುತ್ತವೆ.

ಇದನ್ನೂ ಓದಿ: ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಬಗ್ಗೆ ಅಜೇಯ್ ಜಡೇಜಾ ನೀಡಿದ ಶಾಕಿಂಗ್ ಹೇಳಿಕೆ ಏನು ಗೊತ್ತಾ? 

ಐಪಿಎಲ್ 2021 ರ ಲೀಗ್ ಹಂತದಲ್ಲಿ ಇದುವರೆಗೆ ಅಧಿಕ ರನ್ ಗಳಿಸಿರುವ ಐದು ಆಟಗಾರರಿವರು: 

1. ಕೆಎಲ್ ರಾಹುಲ್: ಯುಎಇಯಲ್ಲಿ ನಿಧಾನಗತಿಯ ಪಿಚ್‌ಗಳಲ್ಲಿ ರಾಹುಲ್ (KL Rahul) ಬ್ಯಾಟಿಂಗ್‌ನ ಮಾಸ್ಟರ್‌ಕ್ಲಾಸ್ ಅನ್ನು ಪ್ರದರ್ಶಿಸಿದರು. ಅವರು ತಮ್ಮ ಕೌಶಲ್ಯದಿಂದಾಗಿ ಬ್ಯಾಟಿಂಗ್ ನ್ನು ಅತ್ಯಂತ ಸುಲಭವಾಗಿ ಕಾಣುವಂತೆ ಮಾಡಿದರು.ಈಗ ಕೆ.ಎಲ್ ರಾಹುಲ್ 13 ಪಂದ್ಯಗಳಲ್ಲಿ 626 ರನ್ ಗಳಿಸುವ ಮೂಲಕ ಪ್ರಸ್ತುತ ಋತುವನ್ನು ಮುಗಿಸಿದ್ದಾರೆ ಮತ್ತು ಪ್ರಸ್ತುತ ಅವರು ಅಧಿಕ ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ತಾನದಲ್ಲಿದ್ದಾರೆ.

ಇದನ್ನೂ ಓದಿ: ಲಡಾಖ್ ಗಡಿ ವಿವಾದ: ಶಾಂತಿ ಸಂಧಾನಕ್ಕೆ ಮುಂದಾದ ಭಾರತ-ಚೀನಾ

2. ಫಾಫ್ ಡು ಪ್ಲೆಸಿಸ್: ಡು ಪ್ಲೆಸಿಸ್ ಇದುವರೆಗೆ 14 ಪಂದ್ಯಗಳಲ್ಲಿ 45.50 ಸರಾಸರಿಯಲ್ಲಿ ಐದು ಅರ್ಧಶತಕಗಳೊಂದಿಗೆ 546 ರನ್ ಗಳಿಸಿದ್ದಾರೆ. ಆಟದ ಆರಂಭಿಕ ಹಂತಗಳಲ್ಲಿ ಅವರ ಸ್ಥಿರತೆ ಮತ್ತು ಕಾರ್ಯಗತಗೊಳಿಸುವಿಕೆಯು ಎರಡನೆ ಸ್ಥಾನದಲ್ಲಿರುವಂತೆ ಮಾಡಿದೆ.

ಕೆ.ಎಲ್.ರಾಹುಲ್ ಗೆ ಕೊಹ್ಲಿ, ರೋಹಿತ್ ಶರ್ಮಾಗಿಂತಲೂ ಅಧಿಕ ಸಾಮರ್ಥ್ಯವಿದೆ-ಗೌತಮ್ ಗಂಭೀರ್

3. ಶಿಖರ್ ಧವನ್: ಧವನ್ ಅವರ ಸ್ಥಿರತೆ ಈ ಋತುವಿನಲ್ಲಿ ಇದುವರೆಗೆ ರನ್ ಗಳಿಸಿದವರ ಅಗ್ರ ಐದು ಪಟ್ಟಿಯಲ್ಲಿರಲು ಒಂದು ಪ್ರಮುಖ ಕಾರಣವಾಗಿದೆ. ಅನುಭವಿ ಓಪನರ್  ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದಾರೆ.ಇದುವರೆಗೆ 14 ಪಂದ್ಯಗಳಲ್ಲಿ 128 ಸ್ಟ್ರೈಕ್ ರೇಟ್‌ನಲ್ಲಿ 544 ರನ್ ಗಳಿಸಿದ್ದಾರೆ.

4. ರುತುರಾಜ್ ಗಾಯಕವಾಡ್: ಡು ಪ್ಲೆಸಿಸ್ ಜೊತೆಗೆ ಗಾಯಕವಾಡ್, ಸಿಎಸ್‌ಕೆ ತಂಡಕ್ಕೆ ಇಡೀ ಋತುವಿನ ಉದ್ದಕ್ಕೂ ಆಧಾರಸ್ತಂಭವಾಗಿದ್ದಾರೆ. ಗಾಯಕ್ವಾಡ್ ಅವರ ಪ್ರಬುದ್ಧತೆ ಎಲ್ಲರನ್ನೂ ಅಚ್ಚರಿಗೊಳಿಸಿದೆ ಮತ್ತು ಅವರು ಇದುವರೆಗೆ 14 ಪಂದ್ಯಗಳಲ್ಲಿ 533 ರನ್ ದಾಖಲಿಸಿದ್ದಾರೆ.

5. ಗ್ಲೆನ್ ಮ್ಯಾಕ್ಸ್ ವೆಲ್: ಐಪಿಎಲ್ ಸಾಗುತ್ತಿದ್ದಂತೆ ಮ್ಯಾಕ್ಸ್ ವೆಲ್ ನಿಧಾನವಾಗಿ ಫಾರ್ಮ್ ಗೆ ಮರಳಿದ ಮ್ಯಾಕ್ಸ್ ವೆಲ್ ಅವರು 147.33 ಸ್ಟ್ರೈಕ್ ರೇಟ್‌ನಲ್ಲಿ 14 ಪಂದ್ಯಗಳಲ್ಲಿ 498 ರನ್ ಗಳಿಸಿ ಗಮನ ಸೆಳೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News