Better Sleep: ಉತ್ತಮ ನಿದ್ದೆ ಬೇಕಾದರೆ ರಾತ್ರಿ ಹೊತ್ತು ಈ ಆಹಾರಗಳನ್ನು ತಿನ್ನಲೇಬಾರದು

ಉತ್ತಮ ನಿದ್ರೆಗಾಗಿ,  ಆರೋಗ್ಯಕರ ಆಹಾರ, ಪೋಷಕಾಂಶಗಳು, ರಾತ್ರಿ ಹೊತ್ತು ನೀವು ಏನು ತಿನ್ನುತ್ತೀರಿ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ.

Written by - Ranjitha R K | Last Updated : Oct 15, 2021, 10:13 PM IST
  • ಕೊಬ್ಬು ಸಮೃದ್ಧ, ಪನೀರ್ ಮತ್ತು ಕರಿದ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು.
  • ರಾತ್ರಿಯಲ್ಲಿ ನೀರು ಸಮೃದ್ಧವಾಗಿರುವ ಆಹಾರದಿಂದ ದೂರವಿರುವುದು ಉತ್ತಮ.
  • ಮಸಾಲೆಯುಕ್ತ ಆಹಾರವು ರಾತ್ರಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
Better Sleep: ಉತ್ತಮ ನಿದ್ದೆ ಬೇಕಾದರೆ ರಾತ್ರಿ ಹೊತ್ತು ಈ ಆಹಾರಗಳನ್ನು ತಿನ್ನಲೇಬಾರದು title=
Food to avoid for better sleep (file photo)

ನವದೆಹಲಿ : ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬರುವುದಿಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಸಮಸ್ಯೆಯಾಗಿದೆ. ಸರಿಯಾಗಿ ನಿದ್ದರೆ ಆಗಿಲ್ಲ ಎಂದಾದರೆ ದೈಹಿಕ, ಮಾನಸಿಕ ವಿಶ್ರಾಂತಿ ಇಲ್ಲ ಎಂದರ್ಥ. ಹಾಗಾದರೆ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಲಿದೆ. ಉತ್ತಮ ನಿದ್ರೆಗಾಗಿ,  ಆರೋಗ್ಯಕರ ಆಹಾರ (Food for better sleep), ಪೋಷಕಾಂಶಗಳು, ರಾತ್ರಿ ಹೊತ್ತು ನೀವು ಏನು ತಿನ್ನುತ್ತೀರಿ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ರಾತ್ರಿ ಸೇವಿಸುವ ಆಹಾರವನ್ನು ಬುದ್ದಿವಂತಿಕೆಯಿಂದ ಆರಿಸಿಕೊಳ್ಳಬೇಕು.  

ಉತ್ತಮ ನಿದ್ರೆಗಾಗಿ ಮಲಗುವ ಮುನ್ನ  ಈ ಆಹಾರಗಳನ್ನು ತಿನ್ನಬಾರದು:
1. ಮದ್ಯ: ಬಿಯರ್‌ಗಳು, ಒಂದೆರಡು ಗ್ಲಾಸ್ ವೈನ್ ಚೆನ್ನಾಗಿ ನಿದ್ರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಜನರು ಭಾವಿಸಬಹುದು. ಹಾಗಂತ ರಾತ್ರಿ ಹೊತ್ತು ಮದ್ಯದ ಮೊರೆ ಹೋಗುವುದು ತಪ್ಪು. ಆಲ್ಕೊಹಾಲ್ (Alcohol)ಸೇವನೆಯಿಂದ ನಿದ್ದೆಯೇನೋ ಬರಬಹುದು. ಆದರೆ ಇದು ರೂಢಿಯಾಗಿ ಬಿಟ್ಟರೆ ನಂತರ ನೈಸರ್ಗಿಕವಾಗಿ ನಿದ್ರೆ ಬರುವುದೇ ಇಲ್ಲ. ನಿದ್ದೆಗಾಗಿ ಚಡಪಡಿಸಬೇಕಾಗುತ್ತದೆ. 

ಇದನ್ನೂ ಓದಿ : Sleeping Disorder : ನೀವು ಮಧ್ಯ ರಾತ್ರಿ 3 ಗಂಟೆಗೆ ಏಳುತ್ತೀರಾ? ಆಗ ಕೆಟ್ಟ ಆಲೋಚನೆಗಳು ಏಕೆ ಬರುತ್ತವೆ ಗೊತ್ತಾ? ಅದಕ್ಕೆ ಇಲ್ಲಿದೆ ಉತ್ತರ 

2. ಭಾರೀ ಆಹಾರಗಳು: ನಿಮ್ಮ ಹೊಟ್ಟೆಗೆ ಭಾರವಾದ ಆಹಾರವು (Heavy food) ನಿಜವಾಗಿಯೂ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕೊಬ್ಬು ಸಮೃದ್ಧವಾಗಿರುವ   ಆಹಾರ, ಪನೀರ್ (Paneer) ಮತ್ತು ಕರಿದ ಆಹಾರಗಳು ಅಜೀರ್ಣವನ್ನು ಉಂಟುಮಾಡಬಹುದು. ಹೀಗಾದಾಗ ರಾತ್ರಿ ಪದೇ ಪದೇ ಎಚ್ಚರವಾಗುತ್ತಿರಬಹುದು. ಚೀಸ್ ಬರ್ಗರ್, ಫ್ರೈಸ್, ಫ್ರೈ ಫುಡ್  ಅನ್ನು ರಾತ್ರಿ ಹೊತ್ತು ತಿನ್ನುವುದನ್ನು ತಪ್ಪಿಸಿ.

3. ನೀರು ಸಮೃದ್ಧ ಆಹಾರ: ರಾತ್ರಿ ಹೊತ್ತು ಮೂತ್ರ ವಿಸರ್ಜನಗೆ ಪದೇ ಪದೇ ಏಳಬೇಕಾದಾಗ  ನಿದ್ದೆ ಭಂಗವಾಗುತ್ತದೆ. ಸಾಕಷ್ಟು ನೀರು (water) ಕುಡಿಯುವುದು ಆರೋಗ್ಯವಾಗಿರಲು ಒಂದು ಪ್ರಮುಖ ಕಾರಣವಾಗಿದೆ. ಆದರೆ ರಾತ್ರಿ ಹೊತ್ತು ನಿದ್ದೆ ಹಾಳಾಗದಂತೆ ತಡೆಯಲು ರಾತ್ರಿ ಆಹಾರದಲ್ಲಿ ನೀರು ಸಮೃದ್ಧವಾಗಿರುವ ಪದಾರ್ಥಗಳಿಂದ  ದೂರವಿರುವುದು ಉತ್ತಮ. ಇದು ಸೆಲರಿ, ಕಲ್ಲಂಗಡಿ (watermelon) ಮತ್ತು ಸೌತೆಕಾಯಿಗಳನ್ನು ಒಳಗೊಂಡಿದೆ.

ಇದನ್ನೂ ಓದಿ :  ಈ 5 ಕಾರಣಗಳಿಂದಾಗಿ ಒಂದೇ ದಿನದಲ್ಲಿ ಹಾಳಾಗುತ್ತೆ 'ಕೊತ್ತಂಬರಿ ಸೊಪ್ಪು'..! 

4. ಕೆಫೀನ್: ಅನೇಕ ಆಹಾರಗಳಲ್ಲಿ ಕೆಫೀನ್ ಇರುತ್ತದೆ. ಚಹಾ (tea) ಮತ್ತು ಸೋಡಾಗಳಲ್ಲಿ  ಸಾಮಾನ್ಯವಾಗಿ ಕೆಫೀನ್ ಇದ್ದೇ ಇರುತ್ತದೆ. ಕೆಲವು ಐಸ್ ಕ್ರೀಮ್ (ice cream) ಮತ್ತು ಸಿಹಿತಿಂಡಿಗಳಲ್ಲಿ ಎಸ್ಪ್ರೆಸೊ, ಕಾಫಿ ಅಥವಾ ಚಾಕೊಲೇಟ್ ಇರುತ್ತದೆ. ಚಾಕೊಲೇಟ್‌ಗಳು (chocolate) ಇತರ ಕೆಫೀನ್ ಭರಿತ ಆಹಾರಗಳಂತೆಯೇ ಕೆಲಸ ಮಾಡುತ್ತದೆ. ಇದು ನಿದ್ದೆಗೆ ಅಡ್ಡಿ ತರಬಹುದು. 

5. ಸೂಪರ್ ಶುಗರ್ ಟ್ರೀಟ್ಸ್ :ಇನ್ಸುಲಿನ್ ನಿದ್ರೆಯ ಮಾದರಿಗಳನ್ನು ಹಾಳು ಮಾಡುತ್ತದೆ. ಅದಕ್ಕಾಗಿಯೇ ನೀವು ಅತಿಯಾದ ಸಕ್ಕರೆಯೊಂದಿಗೆ ತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಬೇಕು.  ಈ ಕಾರಣಕ್ಕಾಗಿ ಸಿಹಿತಿಂಡಿಗಳು ಮತ್ತು ಕ್ಯಾಂಡಿಗಳನ್ನು ರಾತ್ರಿಯ ಹೊತ್ತು ಒಳ್ಳೆಯದಲ್ಲ ಎನ್ನಲಾಗುತ್ತದೆ. 

ಇದನ್ನೂ ಓದಿ :  Fatty Liver Disease : ನಿಮ್ಮ ಲಿವರ್ ಸಮಸ್ಯೆಗೆ ಮೂಲ ಕಾರಣ ಈ ಅಭ್ಯಾಸಗಳು : ಇಂದೇ ನಿಲ್ಲಿಸಿ ಇಲ್ಲದಿದ್ದರೆ ತಪ್ಪಿದಲ್ಲ ಅಪಾಯ

6. ಮಸಾಲೆಯುಕ್ತ ಆಹಾರ: ಮಸಾಲೆಯುಕ್ತ ಆಹಾರವು ರಾತ್ರಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.  ನೈಸರ್ಗಿಕವಾಗಿ, ನಿಮ್ಮ ದೇಹದ ಉಷ್ಣತೆಯು ನಿದ್ರೆಯ ಸಮಯದಲ್ಲಿ ಕಡಿಮೆ ಇರಬೇಕು. ಆದರೂ ಮಸಾಲೆ ಪದಾರ್ಥಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.  ಮಸಾಲೆ ಆಹಾರವನ್ನು (spicy food) ಸೇವಿಸಲೇ ಬೇಕೆಂದಿದ್ದರೆ ಅದನ್ನು ಮಧ್ಯಾಹ್ನ ಹೊತ್ತಿಗೆ ಸೇವಿಸಿ. ರಾತ್ರಿ ಊಟಕ್ಕೆ ಬೇಡ. 

7. ಆಮ್ಲೀಯ ಆಹಾರಗಳು: ಸಿಟ್ರಸ್ ಹಣ್ಣಿನ ರಸ, ಹಸಿ ಈರುಳ್ಳಿ, ವೈಟ್ ವೈನ್ ಮತ್ತು ಟೊಮೆಟೊ ಸಾಸ್ ನಿದ್ದೆಗೆ ಭಂಗ ತರಬಹುದು. ಅದಕ್ಕಾಗಿಯೇ ನೀವು ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಬೇಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News