Earth and Mars:ಡಿಟ್ಟೋ ಭೂಮಿಯಂತೆಯೇ ಇದೆಯಂತೆ ಈ ಗ್ರಹದ ಮಣ್ಣು, ಮೊದಲು ನೋಡಲು ಕೂಡ ಭೂಮಿಯಂತೆಯೇ ಇತ್ತು

Earth and Mars: ಒಂದು ಕಾಲದಲ್ಲಿ ಮಂಗಳ (Mars) ಗ್ರಹವು ಭೂಮಿಯಂತೆಯೇ (Earth) ಇತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಎರಡೂ ಗ್ರಹಗಳನ್ನು ಒಂದೇ ರೀತಿಯ ಸಾಮಗ್ರಿಗಳಿಂದ ತಯಾರಾಗಿವೆ ಎಂದು ಅವರು ಹೇಳುತ್ತಾರೆ.

Written by - Nitin Tabib | Last Updated : Oct 20, 2021, 06:55 PM IST
  • ಮಂಗಳನ ಮೇಲೆ ಕಂಡುಬರುವ ಪ್ರಾಚೀನ ಕೆರೆಯಲ್ಲಿ ಜೀವನದ ಕುರುಹುಗಳನ್ನು ಕಾಣಬಹುದು.
  • Jezero Crater 3.7 ಬಿಲಿಯನ್ ವರ್ಷಗಳ ಹಿಂದೆ ಒಂದು ಸರೋವರವಾಗಿತ್ತು.
  • ನಾಸಾದ Perseverance Rover ಅದರ ಚಿತ್ರಗಳನ್ನು ತೆಗೆದುಕೊಂಡಿದೆ.
Earth and Mars:ಡಿಟ್ಟೋ ಭೂಮಿಯಂತೆಯೇ ಇದೆಯಂತೆ ಈ ಗ್ರಹದ ಮಣ್ಣು, ಮೊದಲು ನೋಡಲು ಕೂಡ ಭೂಮಿಯಂತೆಯೇ ಇತ್ತು title=
Earth and Mars (File Photo)

ವಾಷಿಂಗ್ಟನ್: Earth and Mars - ಮಂಗಳನ ಅಂಗಳದಲ್ಲಿ ನಿರಂತರವಾಗಿ ಜೀವನ  ಹುಡುಕುತ್ತಿರುವ ವಿಜ್ಞಾನಿಗಳು, ಶತಕೋಟಿ ವರ್ಷಗಳ ಹಿಂದೆ ಭೂಮಿ (Earth) ಮತ್ತು ಮಂಗಳ (Mars) ಗ್ರಹಗಳು ಒಂದೇ ರೀತಿ ಕಾಣುತ್ತಿದ್ದವು ಎಂದು ಹೇಳುತ್ತಾರೆ. ಒಂದು ಕಾಲದಲ್ಲಿ ಮಂಗಳ ಗ್ರಹವು ಭೂಮಿಯಂತೆಯೇ ಇತ್ತು ಮತ್ತು ಈ ಎರಡೂ ಗ್ರಹಗಳು ಒಂದೇ ರೀತಿಯ 'ವಸ್ತು'ಗಳಿಂದ ತಯಾರಿಸಲ್ಪಟ್ಟಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಒಂದೇ ಮಣ್ಣಿನಿಂದ ತಯಾರಾಗಿವೆ ಎರಡೂ ಗ್ರಹಗಳು
ಆಸ್ಟ್ರೋಬಯಾಲಜಿಸ್ಟ್ ಡಾ.ಬೆಕಿ ಮೆಕಾಲೆ ರಾಂಚ್ ಯುಟ್ಯೂಬ್ ವೀಡಿಯೋದಲ್ಲಿ ಮಂಗಳ ಭೂಮಿಯಂತೆಯೇ ಇದೆ ಎಂದು ಹೇಳಿದ್ದಾರೆ. ಕೆಂಪು ಗ್ರಹದಲ್ಲಿ ಸರೋವರಗಳು ಮತ್ತು ಹೊಳೆಗಳು ಅಸ್ತಿತ್ವದಲ್ಲಿವೆ ಎಂದು ತೋರಿಸುವ ಪುರಾವೆಗಳಿವೆ. ನಾಲ್ಕು ಶತಕೋಟಿ ವರ್ಷಗಳ ಹಿಂದೆ ಸೌರವ್ಯೂಹ ರಚನೆಯಾದಾಗ, ಮಂಗಳ ಮತ್ತು ಭೂಮಿಯನ್ನು ಒಂದೇ ರೀತಿಯ 'ವಸ್ತು'ಗಳಿಂದ ತಯಾರಾಗಿವೆ  ಮತ್ತು ಅವೆರಡೂ ನೋಟದಲ್ಲಿ ಒಂದೇ ರೀತಿ ಕಾಣುತ್ತವೆ ಎಂದು ಅವರು ಹೇಳಿದ್ದಾರೆ. 

ಮಂಗಳನ ಮೇಲೆ ನೀರಿನ ಹುಡುಕಾಟ
ಇಂದು ಮಂಗಳವು 'ಒಣ ಗ್ರಹ' ಆಗಿದ್ದರೆ, ಭೂಮಿಯು ನೀಲಿ ಗ್ರಹವಾಗಿದೆ. ಭೂಮಿಯ ಮೇಲೆ ಶೇ.70 ರಷ್ಟು ನೀರು ಇದೆ. ಆದರೆ, ಇತ್ತೀಚಿನ ಆವಿಷ್ಕಾರದಲ್ಲಿ, ಮಂಗಳನ ಮೇಲೆ ಸರೋವರಗಳು ಮತ್ತು ಹೊಳೆಗಳು ಇರುವ ಸಾಕ್ಷಾಧಾರಗಳು ಕೂಡ ಕಂಡುಬಂದಿವೆ.

ವಿಜ್ಞಾನಿಗಳ ಪ್ರಕಾರ, ಮಂಗಳನ ಮೇಲೆ ನೀರು ಇನ್ನೂ ಘನ ಸ್ಥಿತಿಯಲ್ಲಿದೆ. ವಿಜ್ಞಾನಿಗಳು ಗ್ರಹದ ಶೀತ ಮತ್ತು ಹಿಮಾವೃತ ಭಾಗಗಳನ್ನು ತನಿಖೆ ಮಾಡುತ್ತಿದ್ದಾರೆ. ಮಂಗಳದ ಬಗ್ಗೆ ಅಧ್ಯಯನವು ಭೂಮಿಯ ಅಭಿವೃದ್ಧಿಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಬಹುದು ಎಂದು ಡಾ. ರಾಂಚ್ ಹೇಳಿದ್ದಾರೆ. 

ಇದನ್ನೂ ಓದಿ-Massive Asteroids Nearing Earth: ಭೂಮಿಯತ್ತ ಧಾವಿಸುತ್ತಿವೆ 'ಬಾಹ್ಯಾಕಾಶದ ಬೆಟ್ಟಗಳು', ಕ್ಷುದ್ರಗ್ರಹಗಳ ಈ ಸುರಿಮಳೆ ವಿನಾಶಕಾರಿಯೇ?

ಪ್ರಾಚೀನ ಸರೋವರದಲ್ಲಿ ಜೀವನದ ಕುರುಹುಗಳು
ಮಂಗಳನ ಮೇಲೆ ಕಂಡು ಬಂದ ಒಂದು  ಪುರಾತನ ಸರೋವರದಲ್ಲಿ ಜೀವನದ ಕುರುಹುಗಳನ್ನು ಕಾಣಬಹುದು ಎಂದು ನಾಸಾ (NASA) ತನ್ನ ಒಂದು ಅಧ್ಯಯನದಲ್ಲಿ ದೃಢಪಡಿಸಿದೆ.  ನಾಸಾದ  Perseverance Rover ಅವುಗಳ ಚಿತ್ರಗಳನ್ನು ತೆಗೆದಿದೆ. Jezero ಕ್ರೇಟರ್ 3.7 ಬಿಲಿಯನ್ ವರ್ಷಗಳ ಹಿಂದೆ ಸರೋವರವಾಗಿತ್ತು ಎಂದು ವಿಜ್ಞಾನಿಗಳು ನಂಬಿದ್ದಾರೆ, ಆದರೆ ಹವಾಮಾನ ಬದಲಾವಣೆಯಿಂದಾಗಿ ಈ ಸರೋವರವು ಬತ್ತಿಹೋಗಿದೆ. ಕ್ರೆಟರ್ ನ ಮಣ್ಣಿನಲ್ಲಿ ಇದುವರೆಗೂ ಕೂಡ ಪ್ರಾಚೀನ ಜೀವನದ ಕುರುಹುಗಳಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. 

ಇದನ್ನೂ ಓದಿ-Life Beyond Earth: ಭೂಮಿಯ ಹೊರತಾಗಿಯೂ ಕೂಡ ಜೀವನದ ಸಾಧ್ಯತೆಯ ಕುರಿತು ವಿಜ್ಞಾನಿಗಳಿಗೆ ದೊರೆತ ಖಚಿತ ಸಾಕ್ಷಾಧಾರ

ಭೂಮಿಯು ಪ್ಲೇಟ್ ಟೆಕ್ಟೋನಿಕ್ಸ್‌ನೊಂದಿಗೆ ವಿಕಸನಗೊಳ್ಳುತ್ತಲೇ ಇತ್ತು ಮತ್ತು ಜೀವವು ಭೂಮಿಯ ಮೇಲೆ ಹುಟ್ಟಿ, ಅಭಿವೃದ್ಧಿಗೊಂಡಿತು. ಆದರೆ,  ಇದೇ ವೇಳೆ  ಮಂಗಳನ ಭೌಗೋಳಿಕ ಚಟುವಟಿಕೆಗಳು ನಿಂತುಹೋದವು ಮತ್ತು ಕ್ರಮೇಣ ನೀರು ಖಾಲಿಯಾಯಿತು ಮತ್ತು ಗ್ರಹವು ಸಂಪೂರ್ಣವಾಗಿ ಒಣಗಿಹೋಯಿತು ಎಂದು ಎರಡೂ ಗ್ರಹಗಳ ಜೀವನಕ್ಕೆ ಸಂಬಂಧಿಸಿದಂತೆ ಡಾ. ರಾಂಚ್ ಹೇಳಿದ್ದಾರೆ.

ಇದನ್ನೂ ಓದಿ-NASA's Psyche Mission: ಬಹಿರಂಗಗೊಳ್ಳಲಿದೆಯೇ 'ಬಾಹ್ಯಾಕಾಶದ ಗಣಿ'ಯ ರಹಸ್ಯ? ಭೂಮಿಯಿಂದಲೇ ಟ್ರಿಲಿಯನ್ ಮೊತ್ತದ ಸಂಪತ್ತಿನ ಕಣ್ಗಾವಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News