ನವದೆಹಲಿ : ರೈಲ್ವೇ ಸಚಿವಾಲಯವು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಮುಖ ಸಲಹೆಯನ್ನು ನೀಡಿದೆ. ಈ ಸಲಹೆ ಸೂಚನೆಯನ್ನು ಅನುಸರಿಸುವಂತೆ ಅದು ಪ್ರಯಾಣಿಕರಲ್ಲಿ ಕೇಳಿದೆ. ಈ ಸಲಹೆ, ಸೂಚನೆಗಳನ್ನು ಅನುಸರಿಸಿದರೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ರೈಲ್ವೇ ಪ್ರಯಾಣಿಕರು ರೈಲ್ವೆ ಇಲಾಖೆ (Railways) ನೀಡುವ ಸಲಹೆಗಳನ್ನು ಅನುಸರಿಸಿದರೆ, ಪ್ರಯಾಣದ ಸಮಯ ಎದುರಾಗುವ ಅನಗತ್ಯ ಒತ್ತಡದಿಂದ ಮುಕ್ತರಾಗಬಹುದು. ಅದೇ ರೀತಿಯಲ್ಲಿ ಲಗೇಜ್ ಸುರಕ್ಷತೆಯು ಕೂಡಾ ಖಚಿತವಾಗಿರಬಹುದು.
ಹಬ್ಬದ ಸೀಸನ್ (Festive season) ಇದೀಗ ನಡೆಯುತ್ತಿದೆ. ರೈಲುಗಳಲ್ಲಿ ವಿಪರೀತ ರಶ್ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆರಾಮದಾಯಕ ಪ್ರಯಾಣಕ್ಕಾಗಿ ಪ್ರಯಾಣದ ಮೊದಲು, ತಮ್ಮೊಂದಿಗೆ ಸೀಮಿತ ಲಗೇಜ್ಗಳನ್ನು ಮಾತ್ರ ಕೊಂಡೊಯ್ಯುವಂತೆ ರೈಲ್ವೆ ಇಲಾಖೆ (Indian Railway) ಪ್ರಯಾಣಿಕರನ್ನು ಕೇಳಿದೆ. ಯಾಕೆಂದರೆ ಸೀಮಿತ ಲಗೇಜ್ ಇದ್ದರೆ, ಅದನ್ನು ಸೀಟಿನ ಕೆಳಗೆ ಇಟ್ಟುಕೊಳ್ಳುವುದು ಸುಲಭವಾಗುತ್ತದೆ.
ಇದನ್ನೂ ಓದಿ : LIC ಯ ಈ ಯೋಜನೆಯಲ್ಲಿ ಕೇವಲ 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಗಳಿಸಿ!
ಟ್ವೀಟ್ ಮೂಲಕ ಮಾಹಿತಿ ನೀಡಿದ ರೈಲ್ವೆ :
ಈ ಬಗ್ಗೆ ರೈಲ್ವೆ ಸಚಿವಾಲಯವು ಟ್ವೀಟ್ (Tweet) ಮಾಡಿದ್ದು, ಪ್ರಯಾಣಿಕರಿಗೆ ಸಲಹೆ ನೀಡಿದೆ. 'ಜವಾಬ್ದಾರಿಯುತ ರೈಲು ಪ್ರಯಾಣಿಕರಾಗಿರಿ. ಆಹ್ಲಾದಕರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ, ಸೀಮಿತ ಸಾಮಾನುಗಳೊಂದಿಗೆ ಮಾತ್ರ ಪ್ರಯಾಣಿಸಿ ಇದರಿಂದ ರೈಲಿನ ಇತರ ಸಹ-ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದೆ.
जिम्मेदार रेल यात्री बनें!
सुखद एवं आरामदायक यात्रा हेतु सीमित सामान लेकर ही यात्रा करें ताकि ट्रेन के अन्य सहयात्रियों को परेशानी न हो, अत्याधिक सामान होने पर उसे लगेज यान में बुक कराकर भेजें l pic.twitter.com/SMcW0vVvKs
— Ministry of Railways (@RailMinIndia) October 24, 2021
ನಿಮ್ಮ ಸರಕುಗಳನ್ನು ಈ ರೀತಿಯಲ್ಲಿ ಬುಕ್ ಮಾಡಿ :
-ನಿಮ್ಮ ಯಾವುದೇ ಭಾರೀ ಸರಕುಗಳನ್ನು ರೈಲಿನಲ್ಲಿ (rail) ಕಳುಹಿಸಲು ಬಯಸುವುದಾದರೆ, ಮೊದಲು ನೀವು ಪಾರ್ಸೆಲ್ ಅನ್ನು ಬುಕ್ ಮಾಡಬೇಕು.
- ಸಂಚಾರಕ್ಕಾಗಿ ತೆರೆದಿರುವ ನಿಲ್ದಾಣಗಳಿಗೆ ಮಾತ್ರ ಪಾರ್ಸೆಲ್ಗಳನ್ನು ಬುಕ್ ಮಾಡಬಹುದು.
-ಪಶ್ಚಿಮ ರೈಲ್ವೆಯ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಪಾರ್ಸೆಲ್ ಸಾರಿಗೆ ಸೌಲಭ್ಯವಿದೆ.
-ಇದಕ್ಕಾಗಿ, ನೀವು ನಿಲ್ದಾಣದ ಪಾರ್ಸೆಲ್ ಕಚೇರಿಯಲ್ಲಿ 9:00 ರಿಂದ ಸಂಜೆ ೫ರವೆರೆಗೆ ನಿಮ್ಮ ಪಾರ್ಸೆಲ್ ಅನ್ನು ಬುಕ್ ಮಾಡಬಹುದು.
-ನೀವು ರೈಲು ಹಿಡಿಯಲು ಬಯಸುವ ನಿಲ್ದಾಣಕ್ಕೆ ಹೋಗಿ ಮತ್ತು ಪಾರ್ಸೆಲ್ ಸೌಲಭ್ಯವಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಮೊದಲೇ ತಿಳಿದುಕೊಳ್ಳಿ .
-ಕರೋನಾ (coronavirus) ಸೋಂಕಿನಿಂದಾಗಿ ಅನೇಕ ಕೌಂಟರ್ಗಳನ್ನು ಸಹ ಮುಚ್ಚಿರಬಹುದು. ಹಾಗಾಗಿ ಈ ಬಗ್ಗೆ ತಿಳಿದುಕೊಳ್ಳಿ.
ಕರೋನಾ (COVID-19) ಅವಧಿಯಲ್ಲಿ ರೈಲುಗಳನ್ನು ಸಂಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಜಾಗರೂಕತೆಯನ್ನು ಕಾಪಾಡುವುದು ಎಲ್ಲಾ ಪ್ರಯಾಣಿಕರ ಜವಾಬ್ದಾರಿಯಾಗುತ್ತದೆ.
ಇದನ್ನೂ ಓದಿ : Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.