Dhanteras 2021 Shopping Muhurat: ಧಂತೇರಸ್ ಅಂದರೆ ಧನತ್ರಯೋದಶಿಗೆ ಇನ್ನು ಕೇವಲ 4 ದಿನಗಳು ಮಾತ್ರ ಉಳಿದಿವೆ. ಈ ದಿನ ಮನೆಗೆ ಕೆಲವು ವಸ್ತುಗಳನ್ನು ತರುವುದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ನೀವು ಧಂತೇರಸ್ನಲ್ಲಿ ಖರೀದಿಗಳನ್ನು ಮಾಡಲು ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಖರೀದಿಗಳನ್ನು ಮಾಡಲು ಶುಭ ಸಮಯವನ್ನು ತಿಳಿಯಿರಿ. ಧಂತೇರಸ್ ದಿನದಂದು ಶುಭ ಮುಹೂರ್ತದಲ್ಲಿ ಖರೀದಿಸಿದ ವಸ್ತುಗಳು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತವೆ ಎಂಬ ನಂಬಿಕೆ ಇದೆ.
ಈ ವರ್ಷ ನವೆಂಬರ್ 2, 2021ರಂದು ಧಂತೇರಸ್ (Dhanteras 2021) ಅನ್ನು ಆಚರಿಸಲಾಗುತ್ತದೆ. ಧಂತೇರಸ್ ದಿನದಂದು ಲಕ್ಷ್ಮಿ ದೇವಿ, ಭಗವಾನ್ ಧನ್ವಂತರಿ ಮತ್ತು ಕುಬೇರ ದೇವರನ್ನು ಪೂಜಿಸಲಾಗುತ್ತದೆ. ಹಾಗೆಯೇ ಈ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರಲಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Dhanteras 2021: ಧಂತೇರಸ್ನಲ್ಲಿ ಮಿಸ್ ಆಗಿ ಕೂಡ ಈ ವಸ್ತುಗಳನ್ನು ಮನೆಗೆ ತರಬೇಡಿ
ಧಂತೇರಸ್ನಲ್ಲಿ ಈ ವಸ್ತುಗಳನ್ನು ಖರೀದಿಸುವುದು ತುಂಬಾ ಮಂಗಳಕರ :
ಧಂತೇರಸ್ ದಿನದಂದು ಚಿನ್ನ-ಬೆಳ್ಳಿ, ವಾಹನಗಳು, ಎಲೆಕ್ಟ್ರಾನಿಕ್ ವಸ್ತುಗಳು ಇತ್ಯಾದಿಗಳನ್ನು ಖರೀದಿಸಲಾಗುತ್ತದೆ. ಇದಲ್ಲದೇ ಧಂತೇರಸ್ ದಿನದಂದು ಪೊರಕೆಯನ್ನು ಖರೀದಿಸಿ ಪೂಜಿಸುವುದರಿಂದ ಬಡತನ ದೂರವಾಗುತ್ತದೆ ಮತ್ತು ಮನೆಯಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವೂ ಇದೆ.
ಇಡೀ ದಿನ ಒಳ್ಳೆಯ ಯೋಗ ಇರುತ್ತದೆ:
ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯ (Dhanatrayodashi) ದಿನದಂದು ಧಂತೇರಸ್ ಆಚರಿಸಲಾಗುತ್ತದೆ. ಈ ವರ್ಷ, ಧಂತೇರಸ್ ದಿನದಂದು, ಸೂರ್ಯೋದಯದಿಂದ ಬೆಳಿಗ್ಗೆ 08:35 ರವರೆಗೆ, ಖರೀದಿಗಳಿಗೆ ಇದು ಮಂಗಳಕರ ಸಮಯವಾಗಿರುತ್ತದೆ. ಧಂತೇರಸ್ನಲ್ಲಿ ಪುಷ್ಕರ ಮತ್ತು ಸಿದ್ಧ ಯೋಗ ಇರುತ್ತದೆ, ಇದು ತುಂಬಾ ಮಂಗಳಕರವಾಗಿದೆ. ಈ ಯೋಗದಲ್ಲಿ ಶಾಪಿಂಗ್ ಮಾಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದಲ್ಲದೇ ಶಾಪಿಂಗ್ ಮಾಡಲು 5 ಅತ್ಯಂತ ಮಂಗಳಕರ ಮುಹೂರ್ತಗಳಿವೆ.
ಇದನ್ನೂ ಓದಿ- Venus Transit October 2021: ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು
ಧಂತೇರಸ್ನಲ್ಲಿ ಶಾಪಿಂಗ್ ಮಾಡಲು ಶುಭ ಮುಹೂರ್ತಗಳು:
* ಚರ ಲಗ್ನ - ಬೆಳಗ್ಗೆ 8.46 ರಿಂದ 10.10 ರವರೆಗೆ
* ಅಭಿಜಿತ್ ಮುಹೂರ್ತ - ಮಧ್ಯಾಹ್ನ 11.11 ರಿಂದ 11.56 ರವರೆಗೆ
* ಅಮೃತ ಮುಹೂರ್ತ - ಮಧ್ಯಾಹ್ನ 11.33 ರಿಂದ 12.56 ರವರೆಗೆ ಶುಭ
* ಯೋಗ - ಮಧ್ಯಾಹ್ನ 2.20 ರಿಂದ 3.43 ರವರೆಗೆ
* ವೃಷಭ ಲಗ್ನ - ಸಂಜೆ 6.18 ರವರೆಗೆ.
ಮತ್ತೊಂದೆಡೆ, ಸಂಜೆ 06:00 ರಿಂದ 07:57 ರವರೆಗೆ ಧಂತೇರಸ್ ಪೂಜಿಸಲು ಮಂಗಳಕರ ಸಮಯವಿರುತ್ತದೆ. ಈ ದಿನ ಮನೆಯ ದಕ್ಷಿಣ ದಿಕ್ಕಿನಲ್ಲಿ ಎಣ್ಣೆಯ ದೀಪವನ್ನು ಇಡುವುದರಿಂದ ಅಕಾಲಿಕ ಮರಣದ ಭಯವನ್ನು ತಡೆಯುತ್ತದೆ ಎಂದು ನಂಬಲಾಗಿದೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ