Dhanteras 2021: ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧಂತೇರಸ್ ಅನ್ನು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 2 ರಂದು ಧಂತೇರಸ್ ಅನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಭಗವಾನ್ ಧನ್ವಂತರಿ, ಲಕ್ಷ್ಮಿ ದೇವತೆ ಮತ್ತು ಸಂಪತ್ತಿನ ದೇವರು ಕುಬೇರರನ್ನು ಈ ದಿನ ಪೂಜಿಸಲಾಗುತ್ತದೆ.
ಧಂತೇರಸ್‌ನಲ್ಲಿ ಕೆಲವು ವಸ್ತುಗಳನ್ನು ಖರೀಸುವುದು (What to buy on dhanteras) ಬಹಳ ಶುಭ ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ ಈ ದಿನದಂದು ಕೆಲವು ವಸ್ತುಗಳನ್ನು ಮನೆಗೆ ತರುವುದನ್ನು ಅಶುಭಕರ ಎಂದು ಹೇಳಲಾಗುತ್ತದೆ. ಈ ವಸ್ತುಗಳನ್ನು ಖರೀದಿಸುವುದರಿಂದ ಮನೆಯ ಸಮೃದ್ಧಿ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಧಂತೇರಸ್‌ನಲ್ಲಿ ಯಾವ ವಸ್ತುಗಳನ್ನು ಖರೀದಿಸಬಾರದು. ಯಾವ ವಸ್ತುಗಳನ್ನು ಮನೆಗೆ ತರಬಾರದು ಎಂದು ತಿಳಿದಿರುವುದು ಬಹಳ ಮುಖ್ಯ.
ಇದನ್ನೂ ಓದಿ- Diwali 2021: ದೀಪಾವಳಿಯಂದು ಲಕ್ಷ್ಮಿಯೊಂದಿಗೆ ಈ ದೇವರನ್ನು ಪೂಜಿಸಬೇಡಿ
ಧಂತೇರಸ್‌ನಲ್ಲಿ ಮರೆತೂ ಸಹ ಈ ವಸ್ತುಗಳನ್ನು ಖರೀದಿಸಬೇಡಿ:
ಗಾಜಿನ ವಸ್ತುಗಳು (Glass): ಧಂತೇರಸ್‌ನಲ್ಲಿ ಗಾಜಿನ ಅಥವಾ ಗಾಜಿನಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಬೇಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಾಜು ರಾಹುವಿಗೆ ಸಂಬಂಧಿಸಿದೆ. ರಾಹುವು ಯಾವುದೇ ರೀತಿಯಲ್ಲಿ ಮನೆಗೆ ಪ್ರವೇಶಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ರಾಹುವಿನ ಕಾರಣದಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ಹೇಳಲಾಗುತ್ತದೆ.
ಪ್ಲಾಸ್ಟಿಕ್ ವಸ್ತುಗಳು (Plastic): ಧಂತೇರಸ್ ದಿನದಂದು ಪ್ಲಾಸ್ಟಿಕ್ (Plastic) ನಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ಖರೀದಿಸಬಾರದು. ಇದರಿಂದ ಹಣವು ಹೆಚ್ಚು ಕಾಲ ಕೈನಲ್ಲಿ ಉಳಿಯುವುದಿಲ್ಲ ಎನ್ನಲಾಗುತ್ತದೆ.
ಸೆರಾಮಿಕ್ ವಸ್ತುಗಳನ್ನು ಖರೀದಿಸಬೇಡಿ: ಈ ಹಬ್ಬದಂದು ಪಿಂಗಾಣಿ ವಸ್ತುಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಧಂತೇರಸ್ ದಿನದಂದು ಯಾವುದೇ ರೀತಿಯ ಸೆರಾಮಿಕ್ ವಸ್ತುಗಳನ್ನು ಖರೀದಿಸಬೇಡಿ.
ಇದನ್ನೂ ಓದಿ- Dhanteras 2021: ಧನತ್ರಯೋದಶಿ ದಿನ ಈ ವಸ್ತುಗಳನ್ನು ದಾನ ಮಾಡುವುದರಿಂದ ಹೊಳೆಯುತ್ತೆ ಅದೃಷ್ಟ
ಉಕ್ಕಿನಿಂದ ತಯಾರಿಸಿದ ವಸ್ತುಗಳು: ಧಂತೇರಸ್ ದಿನದಂದು ಅನೇಕ ಜನರು ಸ್ಟೀಲ್ ಪಾತ್ರೆಗಳನ್ನು ಮನೆಗೆ ತರುತ್ತಾರೆ, ಆದರೆ ಅವುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಉಕ್ಕು ಶುದ್ಧ ಲೋಹವಲ್ಲ. ಇದರ ಮೇಲೆ ರಾಹುವಿನ ಪ್ರಭಾವವೂ ಇರುತ್ತದೆ. ಹಾಗಾಗಿ ಧನತ್ರಯೋದಶಿ ದಿನ ಮನೆಗೆ ಯಾವುದೇ ಉಕ್ಕಿನಿಂದ ತಯಾರಿಸಿದ ವಸ್ತುಗಳನ್ನು ತರುವುದನ್ನು ತಪ್ಪಿಸಿ.
ಖಾಲಿ ಪಾತ್ರೆಗಳನ್ನು ಮನೆಗೆ ತರಬೇಡಿ: ಧಂತೇರಸ್ ದಿನದಂದು ನೀವು ಯಾವುದೇ ಪಾತ್ರೆಗಳು ಅಥವಾ ಬಳಕೆಯ ವಸ್ತುಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಖಾಲಿಯಾಗಿ ಮನೆಗೆ ತರಬಾರದು ಎಂಬುದನ್ನು ನೆನಪಿನಲ್ಲಿಡಿ. ಮನೆಯಲ್ಲಿ ಪಾತ್ರೆಗಳನ್ನು ತರುವ ಮೊದಲು, ಅದರಲ್ಲಿ ನೀರು, ಅಕ್ಕಿ ಅಥವಾ ಇನ್ನಾವುದೇ ವಸ್ತುಗಳನ್ನು ತುಂಬಿಸಿ ತನ್ನಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ