Kartik Purnima 2021: ಸಿರಿವಂತರಾಗಬೇಕೇ? ಕಾರ್ತಿಕ ಹುಣ್ಣಿಮೆಯ ದಿನ ಈ ಉಪಾಯ ಅನುಸರಿಸಿ, ಭಾಗ್ಯ ನಿಮ್ಮ ಕೈಹಿಡಿಯಲಿದೆ

Kartik Purnima Remedies:ಕಾರ್ತಿಕ ಮಾಸವನ್ನು (Kartik Purnima 2021) ಅನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ವರ್ಷದ ದೊಡ್ಡ ಹಬ್ಬವಾದ ದೀಪಾವಳಿಯನ್ನು ಈ ತಿಂಗಳಲ್ಲಿ ಆಚರಿಸಲಾಗುತ್ತದೆ. ಅದೇ ತಿಂಗಳಲ್ಲಿ ಶ್ರೀರಾಮನು 14 ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ ಎಂದು ಹೇಳಲಾಗುತದೆ. 

Kartik Purnima Remedies: ಕಾರ್ತಿಕ ಮಾಸವನ್ನು (Kartik Purnima 2021) ಅನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ವರ್ಷದ ದೊಡ್ಡ ಹಬ್ಬವಾದ ದೀಪಾವಳಿಯನ್ನು ಈ ತಿಂಗಳಲ್ಲಿ ಆಚರಿಸಲಾಗುತ್ತದೆ. ಅದೇ ತಿಂಗಳಲ್ಲಿ ಶ್ರೀರಾಮನು 14 ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ ಎಂದು ಹೇಳಲಾಗುತದೆ. ಕಾರ್ತಿಕ ಮಾಸದಂತೆ ಕಾರ್ತಿಕ ಹುಣ್ಣಿಮೆಗೂ ಕೂಡ ವಿಶೇಷ ಮಹತ್ವವಿದೆ. ಈ ವರ್ಷ, ಕಾರ್ತಿಕ ಹುಣ್ಣಿಮೆ 2021 ರ ಹಬ್ಬವನ್ನು ಶುಕ್ರವಾರ, 19 ನವೆಂಬರ್ 2021 ರಂದು (Kartik Purnima 2021 Date) ಆಚರಿಸಲಾಗುತ್ತದೆ. ಈ ದಿನದಂದು ಕೆಲ ವಿಶೇಷ ಉಪಾಯಗಳನ್ನು (Kartik Purnima Upay) ಅನುಸರಿಸಿದರೆ, ವ್ಯಕ್ತಿಯ ಭಾಗ್ಯ ಬದಲಾವಣೆಗೆ ಸಮಯ ಬೇಕಾಗುವುದಿಲ್ಲ ಎನ್ನಲಾಗುತ್ತದೆ (Astro Tips).

 

ಇದನ್ನೂ ಓದಿ-Astrology: ತುಂಬಾ ಭಾವನಾತ್ಮಕವಾಗಿರುತ್ತಾರೆ ಈ 3 ರಾಶಿಯ ಜನ , ಅವರ ಹೃದಯವು ಪರಿಶುದ್ಧ

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-Chanakya Niti: ಅದೃಷ್ಟವಂತರು ಈ 3 ವಿಶೇಷ ವಸ್ತುಗಳನ್ನು ಪಡೆಯುತ್ತಾರೆ, ಜೀವನವು ಸ್ವರ್ಗದಂತಿರುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಕಾರ್ತಿಕ ಹುಣ್ಣಿಮೆ ದಿನ ಖಂಡಿತ ವ್ರತ ಕೈಗೊಳ್ಳಿ (Astro Tips) - ಕಾರ್ತಿಕ ಹುಣ್ಣಿಮೆಯಂದು ಉಪವಾಸ ಮಾಡುವುದರಿಂದ ಅಗ್ನಿಷ್ಟೋಮ ಯಾಗ ಮಾಡಿದಂತೆಯೇ ಫಲ ಸಿಗುತ್ತದೆ. ಮತ್ತೊಂದೆಡೆ, ಕಾರ್ತಿಕ ಹುಣ್ಣಿಮೆಯಿಂದ ಉಪವಾಸವನ್ನು (Kartik Purnima Vrat) ಪ್ರಾರಂಭಿಸಿ, ಪ್ರತಿ ಹುಣ್ಣಿಮೆಯಂದು ಉಪವಾಸವು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತದೆ ಮತ್ತು ಅಪಾರ ಸಂಪತ್ತನ್ನು ನೀಡುತ್ತದೆ.

2 /5

2. (Money Tips) ಈ 6 ತಪಸ್ವಿಯರನ್ನು ಪೂಜಿಸಿ - ಕಾರ್ತಿಕ ಹುಣ್ಣಿಮೆಯಂದು ಚಂದ್ರೋದಯದ ಸಮಯದಲ್ಲಿ ಶಿವ, ಸಂಭೂತಿ, ಪ್ರೀತಿ, ಸಂತಿ ಅನಸೂಯಾ ಮತ್ತು ಕ್ಷಮಾ ಎಂಬ ಆರು ಯತಿಗಳನ್ನು ಪೂಜಿಸುವುದರಿಂದ ಮನೆಗೆ ಹೆಚ್ಚಿನ ಸಂಪತ್ತು ಮತ್ತು ಆಹಾರ ಬರುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಈ ತಪಸ್ವಿಗಳು ಸ್ವಾಮಿ ಕಾರ್ತಿಕ್ ಅವರ ತಾಯಿ ಎನ್ನಲಾಗುತ್ತದೆ.

3 /5

3. ದೀಪದಾನ ಮಾಡಲು ಮರೆಯದಿರಿ - ಕಾರ್ತಿಕ  ಹುಣ್ಣಿಮೆಯಂದು ಗಂಗಾನದಿಯ ದಡದಲ್ಲಿ ದೀಪವನ್ನು ದಾನ ಮಾಡುವುದು ತುಂಬಾ ಶ್ರೇಯಸ್ಕರ. ಈ ದಿನದಂದು ದೇವತೆಗಳು ಗಂಗಾನದಿಯಲ್ಲಿ ಸ್ನಾನ ಮಾಡಿ ದೀಪವನ್ನು ಬೆಳಗಿಸುವ ಮೂಲಕ ಸ್ವರ್ಗದ ಹಬ್ಬವನ್ನು ಆಚರಿಸುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದಲೇ ಈ ದಿನ ದೀಪ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಯಾವುದೇ ನದಿ ಅಥವಾ ಕೊಳದಲ್ಲಿ ದೀಪವನ್ನು ದಾನ ಮಾಡುವುದರಿಂದ ಎಲ್ಲಾ ರೀತಿಯ ತೊಂದರೆಗಳು ಮತ್ತು ಸಾಲಗಳಿಂದ ಮುಕ್ತಿ ಪಡೆಯಬಹುದು.

4 /5

4. ತುಳಸಿ ಪೂಜೆ - ಕಾರ್ತಿಕ ಹುಣ್ಣಿಮೆಯ ದಿನದಂದು ಮನೆಯಲ್ಲಿ ತುಳಸಿ ಪೂಜೆಯನ್ನು ಮಾಡಿ. ಈ ಮಾಸದಲ್ಲಿ ತುಳಸಿಯನ್ನು ಪೂಜಿಸುವುದರಿಂದ ಹೆಚ್ಚಿನ ಫಲಗಳು ದೊರೆಯುತ್ತವೆ. ಇದಲ್ಲದೇ ಈ ದಿನ ಮನೆಯ ಮುಖ್ಯ ದ್ವಾರದಲ್ಲಿ ಮಾವಿನ ಎಲೆಯಿಂದ ಮಾಡಿದ ಕಂಬವನ್ನು ಕಟ್ಟಿ ದೀಪಾವಳಿಯಂದು ಮನೆಯಲ್ಲಿ ದೀಪಗಳನ್ನು ಹಚ್ಚಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.

5 /5

5. ದಾನ ಮಾಡಿ -  ಕಾರ್ತಿಕ ಹುಣ್ಣಿಮೆಯ ದಿನ ದಾನ ಮಾಡುವುದರಿಂದ 10 ಯಾಗಗಳನ್ನು ಮಾಡಿದಷ್ಟೇ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಆದುದರಿಂದ ಈ ದಿನದಂದು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅನ್ನ, ವಸ್ತ್ರ ಇತ್ಯಾದಿಗಳನ್ನು ದಾನ ಮಾಡಿ. ಇದರೊಂದಿಗೆ, ನಿಮ್ಮ ಮನೆಯಲ್ಲಿ ಯಾವಾಗಲೂ ಸಂಪತ್ತು, ಸಮೃದ್ಧಿ ಮತ್ತು ಆಶೀರ್ವಾದ ಇರುತ್ತದೆ.