Chanakya Niti: ಅದೃಷ್ಟವಂತರು ಈ 3 ವಿಶೇಷ ವಸ್ತುಗಳನ್ನು ಪಡೆಯುತ್ತಾರೆ, ಜೀವನವು ಸ್ವರ್ಗದಂತಿರುತ್ತದೆ

ಅಸಹಾಯಕರ ಹಣವನ್ನು ದೋಚಿ ಶ್ರೀಮಂತರಾದ ಜನರು ತಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ.

Written by - Puttaraj K Alur | Last Updated : Nov 9, 2021, 09:58 AM IST
  • ವಿದ್ಯಾವಂತ ಹೆಂಡತಿ, ಸುಸಂಸ್ಕೃತ ಮಕ್ಕಳನ್ನು ಹೊಂದಿರುವ ವ್ಯಕ್ತಿಯ ಜೀವನ ಸಂತೋಷದಿಂದ ಕೂಡಿರುತ್ತದೆ
  • ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕ ಮೌಲ್ಯಗಳನ್ನು ತಿಳಿಸಿಕೊಡುವುದು ಪೋಷಕರ ಕರ್ತವ್ಯವಾಗಿರುತ್ತದೆ
  • ಸಾಲದ ಹೊರೆ, ಬಡತನ, ದುಷ್ಟ ರಾಜನ ಸೇವೆಯಿಂದ ವ್ಯಕ್ತಿಯ ಜೀವನ ಬದುಕಿದ್ದಾಗಲೇ ನರಕವಾಗುತ್ತದೆ
Chanakya Niti: ಅದೃಷ್ಟವಂತರು ಈ 3 ವಿಶೇಷ ವಸ್ತುಗಳನ್ನು ಪಡೆಯುತ್ತಾರೆ, ಜೀವನವು ಸ್ವರ್ಗದಂತಿರುತ್ತದೆ title=
ಆಚಾರ್ಯ ಚಾಣಕ್ಯರ ಜೀವನ ಸಂದೇಶ

ಬೆಂಗಳೂರು: ಆಚಾರ್ಯ ಚಾಣಕ್ಯರು(Acharya Chanakya)  ಮನುಷ್ಯನ ಜೀವನಕ್ಕೆ ಸಂಬಂಧಿಸಿದಂತಿರುವ ಎಲ್ಲಾ ಅಂಶಗಳ ಬಗ್ಗೆ ಬಹಳ ಮುಖ್ಯವಾದ ವಿಷಯಗಳನ್ನು ಹೇಳಿದ್ದಾರೆ. ಉತ್ತಮ ಮತ್ತು ಸಂತೋಷದ ಜೀವನಕ್ಕಾಗಿ ಏನು ಮಾಡಬೇಕು ಮತ್ತು ಮಾಡಬಾರದು ಎಂದು ಉಪಯುಕ್ತ ಸಲಹೆ ನೀಡಿದ್ದಾರೆ. ಈ ವಿಷಯಗಳನ್ನು ಅಳವಡಿಸಿಕೊಂಡರೆ ಜೀವನವು ಸ್ವರ್ಗವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ತಪ್ಪು ದಾರಿಯಲ್ಲಿ ನಡೆಯುವ ವ್ಯಕ್ತಿಯು ಉತ್ತಮ ಜೀವನವನ್ನು ತಾನೇ ನರಕ ಮಾಡಿಕೊಳ್ಳುತ್ತಾನೆ. ಸಂತೋಷದ ಜೀವನ(Happy Life)ಕ್ಕೆ ಚಾಣಕ್ಯರು ಹೇಳಿರುವ ಬಹಳ ಮುಖ್ಯವಾದ ಕೆಲವು ವಿಷಯಗಳ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಫೆಂಗ್ ಶೂಯಿಯ ಸುಲಭ ಪರಿಹಾರಗಳು: ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ

ಸ್ವರ್ಗದಂತಹ ಜೀವನವನ್ನು ಆನಂದಿಸುವ ವ್ಯಕ್ತಿ

ಜಗತ್ತಿನಲ್ಲಿ ಇಂತಹ ವ್ಯಕ್ತಿಯ ಜೀವನವು ಭೂಮಿಯ ಮೇಲಿನ ಸ್ವರ್ಗದಂತೆ(Life like Heaven) ಆಗುತ್ತದೆ. ಅವರ ಮಕ್ಕಳು ವಿಧೇಯರು ಮತ್ತು ಸುಸಂಸ್ಕೃತರಾಗಿರುತ್ತಾರೆ. ಇದಲ್ಲದೆ ಆ ವ್ಯಕ್ತಿಯ ಹೆಂಡತಿಯು ಕುಟುಂಬವನ್ನು ಒಟ್ಟಿಗೆ  ನೋಡಿಕೊಂಡು ಹೋಗುವವಳಾಗಿರಬೇಕು. ಗಂಡ ದುಡಿದ ಹಣದಿಂದ ಆಕೆ ಸಂತೃಪ್ತಳಾಗಬೇಕು. ಅಂತಹ ವ್ಯಕ್ತಿಯು ಅತ್ಯಂತ ಸಂತೋಷದಾಯಕ ಮತ್ತು ತೃಪ್ತಿಕರ ಜೀವನವನ್ನು ನಡೆಸುತ್ತಾನೆ. ಚಾಣಕ್ಯ ನೀತಿ(Chanakya Niti)ಯ ಪ್ರಕಾರ, ಒಬ್ಬ ವ್ಯಕ್ತಿಯು ಈ 3 ವಿಷಯಗಳನ್ನು ಅದೃಷ್ಟದಿಂದ ಮಾತ್ರ ಪಡೆಯುತ್ತಾನೆ. ಆದ್ದರಿಂದ ಸುಸಂಸ್ಕೃತ, ವಿದ್ಯಾವಂತ ಹುಡುಗಿಯನ್ನು ಮದುವೆಯಾಗುವುದು. ನಿಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡುವುದು. ಒಂದು ವೇಳೆ ಅವರು ತಪ್ಪು ಮಾಡಿದರೆ ಅದನ್ನು ನಿರ್ಲಕ್ಷಿಸಬಾರದು. ಬದಲಿಗೆ ಅಗತ್ಯವಿದ್ದಾಗ ತಪ್ಪಿನ ಬಗ್ಗೆ ಸರಿಯಾಗಿ ವಿವರಿಸಿ ಬುದ್ದಿವಾದ ಹೇಳಬೇಕು. ಇಲ್ಲದಿದ್ದರೆ ನಿಮ್ಮ ಮಗು ಹಾಳಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಇದನ್ನೂ ಓದಿ: Lord Hanuman: ಮಂಗಳವಾರದಂದು ಹನುಮಂತನಿಗೆ ವಿಶೇಷ ಪೂಜೆಗೆ ಇದುವೇ ಕಾರಣ

ಇಂತಹವರ ಬದುಕು ದುಃಖದಿಂದ ಕೂಡಿರುತ್ತದೆ

ಹೆಂಡತಿಯ ಅಗಲಿಕೆಯನ್ನು ಎದುರಿಸಬೇಕಾದ ಅಥವಾ ತಮ್ಮ ಸಹೋದರರು ಮತ್ತು ಪುತ್ರರಿಂದ ಅವಮಾನವನ್ನು ಅನುಭವಿಸಬೇಕಾದಂತಹ ಜನರ ಜೀವನವು ತುಂಬಾ ದುಃಖಕರವಾಗಿರುತ್ತದೆ. ಇದರ ಹೊರತಾಗಿ ಸಾಲದ ಹೊರೆ, ಬಡತನ(Poor people), ದುಷ್ಟ ರಾಜನ ಸೇವೆ ಇಂತಹ ದುಃಖಗಳಿಂದಾಗಿ ಮನುಷ್ಯನ ಜೀವನವು ಬದುಕುತ್ತಿರುವಾಗಲೇ ನರಕವಾಗುತ್ತದೆ. ಇದೇ ಸಮಯದಲ್ಲಿ ಅಸಹಾಯಕರ ಹಣವನ್ನು ದೋಚಿ ಶ್ರೀಮಂತರಾದ ಜನರು ತಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. Zee News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News