ಈ 5 ವಸ್ತುಗಳು ದೇಸಿ ತುಪ್ಪದ ಪ್ರಯೋಜನವನ್ನು ದ್ವಿಗುಣಗೊಳಿಸುತ್ತವೆ: ಸೇವಿಸುವ ಸರಿವಿಧಾನ ತಿಳಿಯಿರಿ

ಆಯುರ್ವೇದದ ಪ್ರಕಾರ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಪ್ಪದಲ್ಲಿ ಒಮೆಗಾ-3, ಒಮೆಗಾ-9 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಎ, ಕೆ, ಇ ಸಮೃದ್ಧವಾಗಿದೆ.

Written by - Puttaraj K Alur | Last Updated : Nov 13, 2021, 10:48 AM IST
  • ತುಳಸಿ ಎಲೆಗಳನ್ನು ತುಪ್ಪದಲ್ಲಿ ಬೆರೆಸಿ ಸೇವಿಸಿದರೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ
  • ದಾಲ್ಚಿನ್ನಿಯನ್ನು ಸೇರಿಸಿ ತುಪ್ಪವನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ರಕ್ಷಣೆ ಸಿಗುತ್ತದೆ
  • ಅರಿಶಿನವನ್ನು ಬೆರೆಸಿ ದೇಸಿ ತುಪ್ಪವನ್ನು ಸೇವಿಸುವುದು ಹೃದಯ ಮತ್ತು ಮೂತ್ರಪಿಂಡಕ್ಕೆ ಉತ್ತಮ
ಈ 5 ವಸ್ತುಗಳು ದೇಸಿ ತುಪ್ಪದ ಪ್ರಯೋಜನವನ್ನು ದ್ವಿಗುಣಗೊಳಿಸುತ್ತವೆ: ಸೇವಿಸುವ ಸರಿವಿಧಾನ ತಿಳಿಯಿರಿ title=
ತುಪ್ಪ ಸೇವನೆಯ ಆರೋಗ್ಯಕರ ಪ್ರಯೋಜನಗಳು

ನವದೆಹಲಿ: ತುಪ್ಪದಲ್ಲಿ ಕೆಲವು ವಸ್ತುಗಳನ್ನು ಬೆರೆಸಿದರೆ ಅದರಿಂದ ದುಪ್ಪಟ್ಟು ಲಾಭ(Ghee Benefits) ಸಿಗುತ್ತದೆ. ದೇಸಿ ತುಪ್ಪವನ್ನು ಮತ್ತಷ್ಟು ಪೌಷ್ಟಿಕವಾಗಿಸಲು, ಅದರಲ್ಲಿ ದೈನಂದಿನ ಬಳಕೆಯಲ್ಲಿ ಬಳಸುವ ಕೆಲವು ವಿಶೇಷ ವಸ್ತುಗಳನ್ನು ಸೇರಿಸಬೇಕು. ಆಯುರ್ವೇದದ ಪ್ರಕಾರ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಪ್ಪದಲ್ಲಿ ಒಮೆಗಾ-3, ಒಮೆಗಾ-9 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಎ, ಕೆ, ಇ ಸಮೃದ್ಧವಾಗಿದೆ. ಇದು ಕ್ಯಾಲೋರಿಗಳು, ಸ್ಯಾಚುರೇಟೆಡ್ ಕೊಬ್ಬು, ಕ್ಯಾಲ್ಸಿಯಂ, ವಿಟಮಿನ್ ಗಳು ಮತ್ತು ಪ್ರೋಟೀನ್ ಗಳನ್ನು ಸಹ ಒಳಗೊಂಡಿದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ತುಳಸಿ

ಮನೆಯಲ್ಲಿ ಬೆಣ್ಣೆಯಿಂದ ತುಪ್ಪ(Tulsi With Ghee)ವನ್ನು ತಯಾರಿಸಿದರೆ ಕುದಿಯುವ ಬೆಣ್ಣೆಗೆ ತುಳಸಿ ಎಲೆಗಳನ್ನು ಹಾಕಬೇಕು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ತುಪ್ಪ ಮತ್ತು ತುಳಸಿಯ ಸೇವನೆಯು ಕಣ್ಣಿನ ಆರೋಗ್ಯ, ಜ್ವರ ಚಿಕಿತ್ಸೆ, ಉಸಿರಾಟದ ತೊಂದರೆಗಳು ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿ ಸಹ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: Bad Food For Kidney : ಈ 5 ಆಹಾರಗಳು ನಿಮ್ಮ ಕಿಡ್ನಿ ಹಾಳುಮಾಡುತ್ತವೆ! ಇವುಗಳನ್ನ ಮಿತಿವಾಗಿ ಸೇವಿಸಿ

ದಾಲ್ಚಿನ್ನಿ

ದಾಲ್ಚಿನ್ನಿ ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ತುಪ್ಪದ ಸೇವನೆಯು ರಕ್ತದಲ್ಲಿನ ಸಕ್ಕರೆಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ದಾಲ್ಚಿನ್ನಿ ತುಪ್ಪವನ್ನು ತಯಾರಿಸಲು, ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಮತ್ತು ಅದರಲ್ಲಿ 2 ದಾಲ್ಚಿನ್ನಿ ತುಂಡುಗಳನ್ನು ಹಾಕಬೇಕು. ಸ್ವಲ್ಪ ಉರಿಯಲ್ಲಿ ತುಪ್ಪವನ್ನು 4-5 ನಿಮಿಷಗಳ ಕಾಲ ಬಿಸಿ ಮಾಡಬೇಕು. ಇದರಿಂದ ತುಪ್ಪವು ದಾಲ್ಚಿನ್ನಿ ರುಚಿಯನ್ನು ಹೀರಿಕೊಳ್ಳುತ್ತದೆ.

ಅರಿಶಿನ

ಅರಿಶಿನ(Turmeric) ಸೇವನೆಯು ಹೃದಯ ಮತ್ತು ಮೂತ್ರಪಿಂಡಗಳ ಉತ್ತಮ ಕಾರ್ಯನಿರ್ವಹಣೆಗೆ ಪ್ರಯೋಜನಕಾರಿಯಾಗಿದೆ. ಇದು ಉರಿಯೂತವನ್ನು ನೈಸರ್ಗಿಕವಾಗಿ ಚಿಕಿತ್ಸೆ ನೀಡುವ ಮೂಲಕ ದೇಹದಲ್ಲಿನ ಎಲ್ಲಾ ರೀತಿಯ ನೋವನ್ನು ಕಡಿಮೆ ಮಾಡುತ್ತದೆ. ಅರಿಶಿನ ತುಪ್ಪವನ್ನು ತಯಾರಿಸಲು, ಒಂದು ಜಾರ್ ನಲ್ಲಿ 1 ಕಪ್ ತುಪ್ಪವನ್ನು ಹಾಕಬೇಕು. ಇದಕ್ಕೆ 1 ಟೀಸ್ಪೂನ್ ಅರಿಶಿನ ಮತ್ತು 1/2 ಟೀಸ್ಪೂನ್ ಕರಿಮೆಣಸು ಪುಡಿಯನ್ನು ಸೇರಿಸಬೇಕು. ಈ ಮಿಶ್ರಣವನ್ನು ಗಾಳಿಯಾಡದ ಜಾರ್‌ನಲ್ಲಿ ಸಂಗ್ರಹಿಸಿ ಮತ್ತು ಪ್ರತಿದಿನ ಬಳಸಿ.

ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ಫಿಟ್ ಆಗಿರಲು ಇಲ್ಲಿದೆ ಸುಲಭ ಟಿಪ್ಸ್

ಕರ್ಪೂರ

ಕರ್ಪೂರದ(Camphor) ಸೇವನೆಯು ವಾತ, ಪಿತ್ತ ಮತ್ತು ಕಫ ದೋಷಗಳನ್ನು ಸಮತೋಲನದಲ್ಲಿಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸಹ ಸರಿಯಾಗಿ ಇಡುತ್ತದೆ. ಕರ್ಪೂರವು ಕರುಳಿನ ಹುಳುಗಳು, ಜ್ವರ ಮತ್ತು ಹೃದಯ ಬಡಿತವನ್ನು ಸಹ ನಿಯಂತ್ರಿಸುತ್ತದೆ. ಕರ್ಪೂರದ ತುಪ್ಪವನ್ನು ತಯಾರಿಸಲು, 1-2 ತುಂಡು ಕರ್ಪೂರವನ್ನು ತುಪ್ಪದಲ್ಲಿ ಹಾಕಿ 5 ನಿಮಿಷಗಳ ಕಾಲ ಬಿಸಿ ಮಾಡಿ. ತುಪ್ಪವನ್ನು ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ಗಾಳಿಯಾಡದ ಜಾರ್ ನಲ್ಲಿ ಫಿಲ್ಟರ್ ಮಾಡಿ. ಕರ್ಪೂರವನ್ನು ಹೊಂದಿರುವ ತುಪ್ಪದಲ್ಲಿ ಕರ್ಪೂರದ ವಾಸನೆಯು ಬಲವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಸೇವನೆಯು ದೇಹದಲ್ಲಿ ಉರಿಯೂತ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಸ್ವಲ್ಪ ತುಪ್ಪವನ್ನು ಬಾಣಲೆಯಲ್ಲಿ ಹಾಕಿ. ಈಗ ಕಡಿಮೆ ಉರಿಯಲ್ಲಿ 4 ರಿಂದ 5 ನಿಮಿಷ ಬೇಯಿಸಿ. ಅದನ್ನು ಸ್ವಲ್ಪ ಸಮಯ ಮುಚ್ಚಿ ಮತ್ತು ಬಾಣಲೆಯಲ್ಲಿ ಹಾಗೆಯೇ ಬಿಡಿ. ಇದರಿಂದ ಬೆಳ್ಳುಳ್ಳಿಯ ಎಲ್ಲಾ ರುಚಿಯನ್ನು ತುಪ್ಪ ಹೀರಿಕೊಳ್ಳುತ್ತದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇಲ್ಲಿನ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿರಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News