Kangana Ranaut: ಕಂಗನಾ ಬೆಂಬಲಕ್ಕೆ ಬಂದ ಈ ಹಿರಿಯ ನಟ ಏನ್ ಹೇಳಿದ್ದಾರೆ ಗೊತ್ತಾ?

ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗೋಖಲೆ ಅವರು ಕಂಗನಾ ಹೇಳಿದ್ದು ನಿಜ ಎಂದು ಹೇಳಿದ್ದಾರೆ.  

Written by - Puttaraj K Alur | Last Updated : Nov 15, 2021, 08:28 AM IST
  • ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆಗೆ ಹಿರಿಯ ನಟ ವಿಕ್ರಮ್ ಗೋಖಲೆ ಬೆಂಬಲ
  • ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಹೋರಾಟಗಾರರನ್ನು ಉಳಿಸಲಾಗಲಿಲ್ಲ
  • ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವಾಗ ಅನೇಕ ದೊಡ್ಡ ನಾಯಕರು ಮೂಕಪ್ರೇಕ್ಷಕರಾಗಿದ್ದರು
Kangana Ranaut: ಕಂಗನಾ ಬೆಂಬಲಕ್ಕೆ ಬಂದ ಈ ಹಿರಿಯ ನಟ ಏನ್ ಹೇಳಿದ್ದಾರೆ ಗೊತ್ತಾ? title=
ಕಂಗನಾ ಹೇಳಿಕೆಗೆ ಹಿರಿಯ ನಟನ ಬೆಂಬಲ

ನವದೆಹಲಿ: ‘ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ, 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಬಾಲಿವುಡ್ ನಟಿ ಕಂಗನಾ ರಾಣಾವತ್‌ (Kangana Ranaut) ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪಕ್ಷ ಭೇದವಿಲ್ಲದೆ ಹಲವಾರು ರಾಜಕೀಯ ನಾಯಕರು ಕಂಗನಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಹಿರಿಯ ನಟರೊಬ್ಬರು ಕಂಗನಾಗೆ ಬೆಂಬಲ ನೀಡಿದ್ದಾರೆ.

ಕಂಗನಾ ಹೇಳಿಕೆ ಸರಿ ಎಂದ ಮರಾಠಿ ನಟ

ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಅವರ ವಿವಾದಾತ್ಮಕ ಹೇಳಿಕೆಯನ್ನು ಮರಾಠಿ ಹಿರಿಯ ನಟ ವಿಕ್ರಮ್ ಗೋಖಲೆ(Vikram Gokhale) ಭಾನುವಾರ ಬೆಂಬಲಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗೋಖಲೆ ಅವರು ಕಂಗನಾ ಹೇಳಿದ್ದು ನಿಜ ಎಂದು ಹೇಳಿದ್ದಾರೆ. ‘ನಾನು ಕಂಗನಾ ಹೇಳಿಕೆಯನ್ನು ಒಪ್ಪುತ್ತೇನೆ. ನಮಗೆ ಬ್ರಿಟಿಷರ ಆಳ್ವಿಕೆಯಲ್ಲಿ ಸ್ವಾತಂತ್ರ್ಯ ನೀಡಲಾಯಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು(Freedom Fighters)  ಗಲ್ಲಿಗೇರಿಸಲಾಯಿತು ಮತ್ತು ಆ ಸಮಯದಲ್ಲಿ ದೊಡ್ಡ ನಾಯಕರು ಅವರನ್ನು ಉಳಿಸಲು ಪ್ರಯತ್ನಿಸಲಿಲ್ಲ. ಅವರು ಮೂಕ ಪ್ರೇಕ್ಷಕರಾಗಿ ಉಳಿದರು. ಈ ಮೂಕ ಪ್ರೇಕ್ಷಕರಲ್ಲಿ ಅನೇಕ ಹಿರಿಯ ನಾಯಕರು ಇದ್ದರು. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ವೆಂದು ಹೇಳಿದ್ದಾರೆ.

Kangana Ranaut

ಇದನ್ನೂ ಓದಿ: Shilpa Shetty And Raj Kundra : ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ : ಇವರ ವಿರುದ್ಧ ದಾಖಲಾಗಿದೆ 'ಫ್ರಾಡ್ ಕೇಸ್'!

ಅಮರಾವತಿ ಗಲಭೆ ಬಗ್ಗೆಯೂ ಮಾತನಾಡಿದ ನಟ

ಗೋಖಲೆ ಮರಾಠಿ ರಂಗಭೂಮಿ, ಬಾಲಿವುಡ್(Bollywood) ಮತ್ತು ಕಿರುತೆರೆ ನಟನೆಗೆ ಹೆಸರುವಾಸಿಯಾಗಿದ್ದಾರೆ. ಬಿಜೆಪಿ ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷವು ವಿವಾದದಲ್ಲಿ ತನ್ನ ಲಾಭವನ್ನು ನೋಡುತ್ತದೆ ಎಂದು ಅವರು ಹೇಳಿದ್ದಾರೆ. ತ್ರಿಪುರಾದಲ್ಲಿ ನಡೆದಿದೆ ಎನ್ನಲಾದ ಕೋಮುಗಲಭೆ ಮತ್ತು ಅದರ ವಿರುದ್ಧ ಅಮರಾವತಿ ಮತ್ತು ಇತರ ನಗರಗಳಲ್ಲಿ ನಡೆದ ಗಲಭೆ ಕುರಿತ ಪ್ರಶ್ನೆಗೆ ಉತ್ತರಿಸಿದ ಗೋಖಲೆ, ‘ಕೋಮುಗಲಭೆಗಳು ವೋಟ್ ಬ್ಯಾಂಕ್ ರಾಜಕೀಯದ ಪರಿಣಾಮವಾಗಿದೆ’ ಎಂದು ಹೇಳಿದ್ದಾರೆ. ‘ಪ್ರತಿಯೊಂದು ರಾಜಕೀಯ ಪಕ್ಷವೂ ಅದನ್ನು (ವೋಟ್ ಬ್ಯಾಂಕ್ ರಾಜಕೀಯ) ಮಾಡುತ್ತದೆ’ ಎಂದಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಸನ್ನಿವೇಶದಲ್ಲಿ ದೇಶದ ಒಳಿತಿಗಾಗಿ ಮಾಜಿ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿ ಮತ್ತೆ ಒಂದಾಗಬೇಕೆಂದು ಗೋಖಲೆ ಹೇಳಿದ್ದಾರೆ.

Kangana Ranaut

ಏರ್ ಇಂಡಿಯಾ ಸ್ಥಿತಿಗೆ ರಾಜಕಾರಣಿಗಳೇ ಕಾರಣ

MSRTC (ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಮತ್ತು ಏರ್ ಇಂಡಿಯಾ(Air India)ದ ಪ್ರಸ್ತುತ ಪರಿಸ್ಥಿತಿಗೆ ರಾಜಕಾರಣಿಗಳೇ ಕಾರಣ ಎಂದು ಗೋಖಲೆ ಕಿಡಿಕಾರಿದ್ದಾರೆ. ‘ನಾನು ಎಸ್ಟಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದೆ. ಇದು ಮಹಾರಾಷ್ಟ್ರದಲ್ಲಿ 18,000 ಕ್ಕೂ ಹೆಚ್ಚು ಬಸ್‌ಗಳನ್ನು ನಿರ್ವಹಿಸುವ ಬೃಹತ್ ಘಟಕವಾಗಿದೆ. ಮಹಾರಾಷ್ಟ್ರ ಸರ್ಕಾರದ ನಗದು ಕೊರತೆಯ ಉದ್ಯಮವನ್ನು ವಿಲೀನಗೊಳಿಸುವಂತೆ ಒತ್ತಾಯಿಸಿ ಸಾವಿರಾರು MSRTC ನೌಕರರು ಮುಷ್ಕರ ನಡೆಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊರೋನಾದಿಂದ ಚೇತರಿಸಿಕೊಂಡ ನಟಿ ಉರ್ಮಿಳಾ ಮಾತೋಂಡ್ಕರ್

ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಬೇಕೆಂದು ಒತ್ತಾಯಿಸಿ ಪತ್ರ

ದೆಹಲಿ ಮಹಿಳಾ ಆಯೋಗದ (Delhi Commission of Women )ಅಧ್ಯಕ್ಷೆ ಸ್ವಾತಿ ಮಲಿವಾಲ್ (Swati Maliwal) ಅವರು ಭಾರತದ ಸ್ವಾತಂತ್ರ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟಿ ಕಂಗನಾ ರಣಾವತ್ ಅವರಿಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News