ಚೀನಾ ಪಾಕಿಸ್ತಾನಕ್ಕೆ ಸೆಡ್ಡು, ನೌಕಾಸೇನೆಗೆ ಐಎನ್ಎಸ್ ವಿಶಾಖಪಟ್ಟಣಂ ಸೇರ್ಪಡೆ

INS ವಿಶಾಖಪಟ್ಟಣಂ ಮೇಲೆ ನಿಯೋಜಿಸಲಾದ ಕ್ಷಿಪಣಿಯು 70 ಕಿಮೀ ದೂರದಲ್ಲಿ ಹಾರುವ ಶತ್ರು ಯುದ್ಧ ವಿಮಾನವನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

Written by - Ranjitha R K | Last Updated : Nov 21, 2021, 12:19 PM IST
  • ಸಮುದ್ರದಲ್ಲಿ ಆಳದಲ್ಲಿ ಅಡಗಿರುವ ಶತ್ರುಗಳ ಸಮಾಧಿ ಮಾಡಬಲ್ಲದು.
  • ಐಎನ್‌ಎಸ್ ವಿಶಾಖಪಟ್ಟಣಂನಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸಲಾಗಿದೆ.
  • INS ವಿಶಾಖಪಟ್ಟಣಂ 163 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ
ಚೀನಾ ಪಾಕಿಸ್ತಾನಕ್ಕೆ ಸೆಡ್ಡು, ನೌಕಾಸೇನೆಗೆ ಐಎನ್ಎಸ್ ವಿಶಾಖಪಟ್ಟಣಂ ಸೇರ್ಪಡೆ title=
INS Vishakapatnam (Photo zee news)

ಮುಂಬೈ : ಇಂದು ಭಾರತದ ಅತ್ಯಂತ ಶಕ್ತಿಶಾಲಿ ಯುದ್ಧನೌಕೆ ಐಎನ್‌ಎಸ್ ವಿಶಾಖಪಟ್ಟಣಂ (INS Visakhapatnam) ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಈ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Sing), ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆಧುನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯುದ್ಧನೌಕೆಯನ್ನು ನಿರ್ಮಿಸಲಾಗಿದೆ.

INS ವಿಶಾಖಪಟ್ಟಣಂ 75 ಪ್ರತಿಶತ ಸ್ವದೇಶಿ ಯುದ್ಧ  ನೌಕೆ : 
INS ವಿಶಾಖಪಟ್ಟಣಂ (INS Visakhapatnam)ಅನ್ನು ಮುಂಬೈನ ಮಜಗಾನ್ ಡಾಕ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಈ ಯುದ್ಧನೌಕೆಯ (Warship) ಪ್ರಮುಖ ವಿಷಯವೆಂದರೆ ಇದರ 75 ಪ್ರತಿಶತ ಭಾಗವು ಸಂಪೂರ್ಣವಾಗಿ ಸ್ವದೇಶಿಯಾಗಿದೆ. ಮುಂಬರುವ ವರ್ಷಗಳಲ್ಲಿ ಈ ವರ್ಗದ ಇನ್ನೂ ಮೂರು ಯುದ್ಧನೌಕೆಗಳನ್ನು 35,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.

ಇದನ್ನೂ ಓದಿ : Aadhaar-Ration Link: ಕುಳಿತಲ್ಲೇ ಮಾಡಿಬಿಡಬಹುದು ಆಧಾರ್ ಮತ್ತು ರೇಶನ್ ಕಾರ್ಡ್ ಲಿಂಕ್, ಸಿಗಲಿದೆ ಬಹಳಷ್ಟು ಪ್ರಯೋಜನ 

ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ವಿಧ್ವಂಸಕ ಯುದ್ಧನೌಕೆ
INS ವಿಶಾಖಪಟ್ಟಣಂ 163 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ. ಇದರ ತೂಕ 7,400 ಟನ್ ಆಗಿದೆ. ಈ ಯುದ್ಧನೌಕೆ ಅತ್ಯಂತ ಆಧುನಿಕವಾಗಿದೆ. ಇದು ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ವಿಧ್ವಂಸಕ ಯುದ್ಧನೌಕೆಯಾಗಿದ್ದು, ಇದರಲ್ಲಿ 50 ಅಧಿಕಾರಿಗಳು ಸೇರಿದಂತೆ ಸುಮಾರು 300 ಸೈನಿಕರನ್ನು  (Soldiers) ನಿಯೋಜಿಸಬಹುದಾಗಿದೆ.

INS ವಿಶಾಖಪಟ್ಟಣಂ ಶತ್ರುಗಳ ಕಾಲ :
ಹಲವು ವರ್ಷಗಳ ಕಾಲ ವಿವಿಧ ಪ್ರಯೋಗಗಳ ನಂತರ, ಶತ್ರು ವಿಧ್ವಂಸಕ ಐಎನ್‌ಎಸ್ ವಿಶಾಖಪಟ್ಟಣಂ ಈಗ ನೌಕಾಪಡೆಗೆ ಸೇರಲು ಸಿದ್ಧವಾಗಿದೆ. ಈ ಯುದ್ಧನೌಕೆಯಲ್ಲಿ ಹಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ. ಐಎನ್‌ಎಸ್ ವಿಶಾಖಪಟ್ಟಣಂನಲ್ಲಿ ಸ್ವದೇಶಿ ಬ್ರಹ್ಮೋಸ್ ಕ್ಷಿಪಣಿಯನ್ನು (brahmos cruise missile) ನಿಯೋಜಿಸಲಾಗಿದೆ. ಅದರ ಮೇಲೆ ನಿಯೋಜಿಸಲಾದ ಕ್ಷಿಪಣಿಯು 70 ಕಿಮೀ ದೂರದಲ್ಲಿ ಹಾರುವ ಶತ್ರು ಯುದ್ಧ ವಿಮಾನವನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. 

ಇದನ್ನೂ ಓದಿ : 7th Pay Commission:Good News - ಹೆಚ್ಚಾಗಲಿದೆಯಾ ಸರ್ಕಾರಿ ನೌಕರರ ಫಿಟ್ಮೆಂಟ್ ಫ್ಯಾಕ್ಟರ್? ಕನಿಷ್ಠ ವೇತನ ರೂ 26,000

ಐಎನ್ ಎಸ್ ವಿಶಾಖಪಟ್ಟಣಂ ಪರಮಾಣು, ಜೈವಿಕ ಮತ್ತು ರಾಸಾಯನಿಕ ದಾಳಿಯ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲುವುದಲ್ಲದೆ, ಸಮುದ್ರದಲ್ಲಿ ಒಂದು ಕಿಲೋಮೀಟರ್ ಆಳದಲ್ಲಿ ಜಲಾಂತರ್ಗಾಮಿ ನೌಕೆಗಳಲ್ಲಿ ಅಡಗಿರುವ ಶತ್ರುಗಳನ್ನು ಸಮಾಧಿ ಮಾಡಬಲ್ಲದು. 

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಐಎನ್‌ಎಸ್ ವಿಶಾಖಪಟ್ಟಣಂ ಆಗಮನವು ನೌಕಾಪಡೆಯನ್ನು (Navy) ವ್ಯೂಹಾತ್ಮಕವಾಗಿ ಬಲಪಡಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News