ಉಳಿದಿರುವ ಚಪಾತಿ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಬಳಸುವ ಅಭ್ಯಾಸ ನಿಮಗೂ ಇದೆಯಾ? ಹಾಗಿದ್ದರೆ ಈ ವಿಷಯ ತಿಳಿದುಕೊಳ್ಳಲೇ ಬೇಕು

ಕೆಲವರಿಗೆ ಒಮ್ಮೆ ಹಿಟ್ಟು ಕಲಸುವಾಗಲೇ ಎರಡು ಮೂರೂ ದಿನಗಳಿಗಾಗುವಷ್ಟು ಹಿಟ್ಟು ಕಲಸಿ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದರಿಂದ ಸಮಯ ಉಳಿಸಬಹುದು. ಕೆಲಸ ಬೇಗ ಮುಗಿಯುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಹೀಗೆ ಮಾಡಲಾಗುತ್ತದೆ.

Written by - Ranjitha R K | Last Updated : Nov 24, 2021, 01:43 PM IST
  • ಉಳಿದ ಚಪಾತಿ ಹಿಟ್ಟು ಫ್ರಿಜ್ ನಲ್ಲಿಟ್ಟು ತಿನ್ನುತ್ತೀರಾ ?
  • ಇದುಆರೋಗ್ಯಕ್ಕೆ ಎಷ್ಟು ಹಾನಿಕಾರಕ ತಿಳಿದಿದೆಯೇ ?
  • ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು
ಉಳಿದಿರುವ ಚಪಾತಿ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಬಳಸುವ ಅಭ್ಯಾಸ ನಿಮಗೂ ಇದೆಯಾ? ಹಾಗಿದ್ದರೆ ಈ ವಿಷಯ ತಿಳಿದುಕೊಳ್ಳಲೇ ಬೇಕು title=
ಉಳಿದ ಚಪಾತಿ ಹಿಟ್ಟು ಫ್ರಿಜ್ ನಲ್ಲಿಟ್ಟು ತಿನ್ನುತ್ತೀರಾ ? (file photo)

ನವದೆಹಲಿ : ಸಾಮಾನ್ಯವಾಗಿ, ಚಪಾತಿ ಮಾಡಿದ ನಂತರ ಉಳಿಯುವ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಮತ್ತೆ ಬಳಸುತ್ತೇವೆ.  ಇನ್ನು ಕೆಲವರಿಗೆ ಒಮ್ಮೆ ಹಿಟ್ಟು ಕಲಸುವಾಗಲೇ ಎರಡು ಮೂರೂ ದಿನಗಳಿಗಾಗುವಷ್ಟು ಹಿಟ್ಟು ಕಲಸಿ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ (left over dough). ಇದರಿಂದ ಸಮಯ ಉಳಿಸಬಹುದು. ಕೆಲಸ ಬೇಗ ಮುಗಿಯುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಹೀಗೆ ಮಾಡಲಾಗುತ್ತದೆ. ಹೀಗೆ ಮಾಡಿದರೆ ಹಿಟ್ಟು ಕಲಸುವ ಸಮಯ ಉಳಿಯಬಹುದು. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ (Side effect of leftover dough) ಎನ್ನುವುದನ್ನು ಕೂಡಾ ನೆನಪಿನಲ್ಲಿಟ್ಟು ಕೊಳ್ಳಬೇಕು. ಈ ರೀತಿ ಮಾಡುವುದು ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ.  ಈ ಸುದ್ದಿ  ಆಶ್ಚರ್ಯ ಉಂಟು ಮಾಡಬಹುದು. ಆದರೆ  ಈ ಮಾತು ಅಕ್ಷರ ಸಹ ಸತ್ಯ. ಈ ರೀತಿ ಫ್ರಿಜ್ ನಲ್ಲಿಟ್ಟು ಮತ್ತೆ ಬಳಸುವ ಹಿಟ್ಟಿನಿಂದ ಆಗುವ ಅನಾನುಕೂಲಗಳು ಯಾವುವು ನೋಡೋಣ .  

ಉಳಿದ ಹಿಟ್ಟಿನಲ್ಲಿ ಚಪಾತಿಯನ್ನು ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಯಾಕೆಂದರೆ ಹಿಟ್ಟನ್ನು ಕಲಸಿ ಫ್ರಿಡ್ಜ್ ನಲ್ಲಿಟ್ಟರೆ ಫ್ರಿಡ್ಜ್ ನ ಹಾನಿಕಾರಕ ಗ್ಯಾಸ್ ಹಿಟ್ಟಿನೊಳಗೆ ಸೇರುತ್ತದೆ. ಈ ಕಾರಣದಿಂದಾಗಿ, ಈ  ಹಿಟ್ಟಿನಿಂದ ಮಾಡಿದ ಚಪಾತಿ ತಿನ್ನುವುದರಿಂದ ಅನಾರೋಗ್ಯಕ್ಕೆ (Health problem) ಒಳಗಾಗಬೇಕಾಗಬಹುದು. ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.  

ಇದನ್ನೂ ಓದಿ : Papad Benefits : ಹಪ್ಪಳ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಕಾರಿ! ಊಟದಲ್ಲಿ ಹೀಗೆ ಸೇವಿಸಿ

ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು :
ಒಮ್ಮೆ ಹಿಟ್ಟನ್ನು ಕಲಸಿ ಇಟ್ಟರೆ, ಅದರ ಹುದುಗುವಿಕೆಯ (fermentation) ಪ್ರಕ್ರಿಯೆ ಪ್ರಾರಂಭವಾಗುತ್ತದೆ.  ಈ ಪ್ರಕ್ರಿಯೆಯಲ್ಲಿ  ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಹಾಗಾಗಿ, ಹಿಟ್ಟನ್ನು ಫ್ರಿಡ್ಜ್ ನಲ್ಲಿಟ್ಟ ನಂತರ ಅದರಿಂದ ಚಪಾತಿ ಮಾಡಿ ತಿಂದರೆ ಹೊಟ್ಟೆ ಕೆಡಬಹುದು. 

ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ :
ಹಳಸಿದ ಹಿಟ್ಟಿನ ಚಪಾತಿ ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆ (Constipation) ಮತ್ತು ಗ್ಯಾಸ್‌ನಂತಹ ತೊಂದರೆಗಳು ಉಂಟಾಗಬಹುದು. ಪ್ರತಿದಿನ ಹಳಸಿದ ಹಿಟ್ಟನ್ನು ಬಳಸಿದರೆ, ಜೀರ್ಣಕ್ರಿಯೆ ಹದಗೆಡುತ್ತದೆ. ಇಮ್ಮ್ಯುನ್ ಸಿಸ್ಟಮ್ (Immune system) ಕೂಡಾ   ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ರೋಗನಿರೋಧಕ ಶಕ್ತಿ (Immunity) ದುರ್ಬಲವಾದರೆ ಪದೇ  ಪದೇ  ಆರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ.

ಇದನ್ನೂ ಓದಿ : Sleeping Position : ನೀವು ಮಲಗುವ ಭಂಗಿ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಸುತ್ತದೆ! ಹೇಗೆ ಇಲ್ಲಿದೆ ನೋಡಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News