Twitter:ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳ ಫೋಟೋ, ವಿಡಿಯೋ ಹಂಚಿಕೊಳ್ಳುವಂತಿಲ್ಲ

Twitter New Rules: ಈ ನೀತಿಯ ಅಡಿಯಲ್ಲಿ ಜನರ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನೂ ಸಹ ನಿಷೇಧಿಸಲಾಗಿದೆ. ಬಳಕೆದಾರರು ತಮ್ಮ ಒಪ್ಪಿಗೆಯಿಲ್ಲದೆ ಇತರ ಜನರ ಖಾಸಗಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳದಂತೆ ನಿರ್ಬಂಧಿಸುತ್ತದೆ. 

Edited by - Zee Kannada News Desk | Last Updated : Dec 1, 2021, 04:57 PM IST
  • ಅನುಮತಿಯಿಲ್ಲದೆ ಖಾಸಗಿ ವ್ಯಕ್ತಿಗಳ ಫೋಟೋ, ವಿಡಿಯೋ ಹಂಚಿಕೊಳ್ಳುವಂತಿಲ್ಲ
  • ಟ್ವಿಟರ್ ಮಂಗಳವಾರ ಹೊಸ ನಿಯಮಗಳನ್ನು ರೂಪಿಸಿದೆ
  • CEO ಬದಲಾಯಿಸಿದ ಕೇವಲ ಒಂದು ದಿನದ ನಂತರ ಈ ನೀತಿಯನ್ನು ಜಾರಿಗೆ
Twitter:ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳ ಫೋಟೋ, ವಿಡಿಯೋ ಹಂಚಿಕೊಳ್ಳುವಂತಿಲ್ಲ title=

ನವದೆಹಲಿ: ಟ್ವಿಟರ್ ಮಂಗಳವಾರ ಹೊಸ ನಿಯಮಗಳನ್ನು ರೂಪಿಸಿದೆ. ಬಳಕೆದಾರರು ತಮ್ಮ ಒಪ್ಪಿಗೆಯಿಲ್ಲದೆ ಇತರ ಜನರ ಖಾಸಗಿ ಫೋಟೋ, ವಿಡಿಯೋಗಳನ್ನು (Twitter Bans Sharing Personal Photos, Videos) ಹಂಚಿಕೊಳ್ಳದಂತೆ ನಿರ್ಬಂಧಿಸುತ್ತದೆ. CEO ಬದಲಾಯಿಸಿದ ಕೇವಲ ಒಂದು ದಿನದ ನಂತರ ಈ ನೀತಿಯನ್ನು ಜಾರಿಗೆ ತಂದಿದೆ.

ಹೊಸ ನಿಯಮಗಳ ಅಡಿಯಲ್ಲಿ, ಸಮ್ಮತಿಯಿಲ್ಲದೆ ಖಾಸಗಿ ವ್ಯಕ್ತಿಗಳ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು ಟ್ವಿಟರ್‌ ನಿಷೇಧಿಸಿದೆ. ಖಾಸಗಿ ಜನರಿಗೆ ಟ್ವಿಟರ್‌ನಲ್ಲಿ ಶೇರ್ ಆದ ತಮ್ಮ ಪರ್ಸನಲ್ ಫೋಟೋ ಅಥವಾ ಗ್ರೂಪ್ ಫೋಟೋಗಳನ್ನು ತೆಗೆಯಿರಿ ಎಂದು ವಿನಂತಿಸಲು ಈ ಹೊಸ ನಿಯಮಗಳಡಿಯಲ್ಲಿ ಅನುಮತಿ ನೀಡಲಾಗಿದೆ. ಗೌಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಟ್ವಿಟರ್ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನಯಾನ ಪುನರಾರಂಭ ಮುಂದೂಡಿಕೆ, ಡಿಜಿಸಿಎ ಮಹತ್ವದ ನಿರ್ಧಾರ

ವ್ಯಕ್ತಿಯ ಫೋನ್ ಸಂಖ್ಯೆ ಅಥವಾ ವಿಳಾಸದಂತಹ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನು Twitter ಈಗಾಗಲೇ ನಿಷೇಧಿಸಿದೆ. ಈ ನೀತಿಯ ಅಡಿಯಲ್ಲಿ ಜನರ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನೂ ಸಹ ನಿಷೇಧಿಸಲಾಗಿದೆ. ಬಳಕೆದಾರರು ಭವಿಷ್ಯದಲ್ಲಿ ಅನುಮತಿ ಇಲ್ಲದೆ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ಕೆಲವು Twitter ಬಳಕೆದಾರರು ಬಿಗಿಯಾದ ನೀತಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಕಂಪನಿಯನ್ನು ಒತ್ತಾಯಿಸಿದ್ದಾರೆ. 

ಈ ನೀತಿಯ ಉಲ್ಲಂಘನೆ ಏನು?

ವ್ಯಕ್ತಿಯ ಖಾಸಗಿ ಮಾಹಿತಿ ನೀತಿಯ ಅಡಿಯಲ್ಲಿ, ಈ ಕೆಳಗಿನ ಪ್ರಕಾರದ ಖಾಸಗಿ ಮಾಹಿತಿ ಅಥವಾ ಮಾಧ್ಯಮವನ್ನು ಅದು ಸೇರಿರುವ ವ್ಯಕ್ತಿಯ ಅನುಮತಿಯಿಲ್ಲದೆ ನೀವು ಹಂಚಿಕೊಳ್ಳಲು ಸಾಧ್ಯವಿಲ್ಲ:

*ಮನೆ ವಿಳಾಸ ಅಥವಾ ಭೌತಿಕ ಸ್ಥಳ ಮಾಹಿತಿ, ರಸ್ತೆ ವಿಳಾಸಗಳು, GPS ನಿರ್ದೇಶಾಂಕಗಳು ಅಥವಾ ಖಾಸಗಿ ಎಂದು ಪರಿಗಣಿಸಲಾದ ಸ್ಥಳಗಳಿಗೆ ಸಂಬಂಧಿಸಿದ ಇತರ ಗುರುತಿಸುವ ಮಾಹಿತಿ

*ಸರ್ಕಾರ ನೀಡಿದ ಐಡಿಗಳು ಮತ್ತು ಸಾಮಾಜಿಕ ಭದ್ರತೆ ಅಥವಾ ಇತರ ರಾಷ್ಟ್ರೀಯ ಗುರುತಿನ ಸಂಖ್ಯೆಗಳು ಸೇರಿದಂತೆ ಗುರುತಿನ ದಾಖಲೆಗಳು. 

*ಸಾರ್ವಜನಿಕವಲ್ಲದ ವೈಯಕ್ತಿಕ ಫೋನ್ ಸಂಖ್ಯೆಗಳು ಅಥವಾ ಇಮೇಲ್ ವಿಳಾಸಗಳು ಸೇರಿದಂತೆ ಸಂಪರ್ಕ ಮಾಹಿತಿ

*ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಒಳಗೊಂಡಂತೆ ಹಣಕಾಸು ಖಾತೆ ಮಾಹಿತಿ

*ಬಯೋಮೆಟ್ರಿಕ್ ಡೇಟಾ ಅಥವಾ ವೈದ್ಯಕೀಯ ದಾಖಲೆಗಳು ಸೇರಿದಂತೆ ಇತರೆ ಖಾಸಗಿ ಮಾಹಿತಿ

*ವ್ಯಕ್ತಿ(ಗಳ) ಅನುಮತಿಯಿಲ್ಲದೆ ಖಾಸಗಿ ವ್ಯಕ್ತಿಗಳ ಮಾಧ್ಯಮವನ್ನು ಚಿತ್ರಿಸಲಾಗಿದೆ

Trending News