ಚೆಲುವಿನ ಚಿತ್ತಾರ ಖ್ಯಾತಿಯ ಕನ್ನಡ ನಟಿ ಅಮೂಲ್ಯ ( Amulya) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪತಿ ಜಗದೀಶ್ (Amulya husband Jagadish) ಜತೆ ಒಂದು ವಿಶೇಷ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.
ಈ ಕುರಿತು ಸುದ್ದಿಯನ್ನು ಅಭಿಮಾನಿಗಳಿಗೆ ಇನ್ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ. "ಈಗ ನಾವಿಬ್ಬರು ಮಾತ್ರವಲ್ಲ. Due this summer 2022. ಕುಟುಂಬ ಬೆಳೆಯುತ್ತಿದೆ, ಎಜೆ ಹ್ಯಾಪಿನೆಸ್" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ವಿಭಿನ್ನ ಫೋಟೋಶೂಟ್ ಮೂಲಕ ಕುಟುಂಬಕ್ಕೆ ಹೊಸ ಅತಿಥಿ ಬರುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.
ವೈಟ್ ಟೀ-ಶರ್ಟ್ ಮತ್ತು ವೈಟ್ ಹ್ಯಾಟ್ ಧರಿಸಿರುವ ಅಮೂಲ್ಯ ತಮ್ಮ ಬೇಬಿ ಬಂಪ್ (Baby Bump) ತೋರಿಸಿಕೊಂಡು, ಚಿಪ್ಸ್ ತಿನ್ನುತ್ತಿದ್ದಾರೆ. ಪಕ್ಕದಲ್ಲಿ ಪತಿ ಜಗದೀಶ್ ಕೈಯಲ್ಲಿ ಕೋಕ್ ಮತ್ತು ಕೆಎಫ್‌ಸಿ ಚಿಕನ್ (Chicken) ಹಿಡಿದುಕೊಂಡು ನಗುತ್ತಿದ್ದಾರೆ. ಈ ಫೋಟೋ ಹಾಗೂ ಸಿಹಿ ಸುದ್ದಿಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಸಿನಿಮಾ ತಾರೆಯರು ಕಾಮೆಂಟ್ಸ್ ಮೂಲಕ ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಬಾಲ ನಟಿ ಬಳಿಕ ನಾಯಕ ನಟಿಯಾಗಿ ಸಾಕಷ್ಟು ಹೆಸರು ಮಾಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ಅಮೂಲ್ಯ 2017ರಲ್ಲಿ ಜಗದೀಶ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡ ನಟಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದರು. ಅಮೂಲ್ಯ-ಜಗದೀಶ್ ಮದುವೆಯಾಗಿ ನಾಲ್ಕು ವರ್ಷದ ಸಂಭ್ರಮದಲ್ಲಿ ಈ ಹೊಸ ಸುದ್ದಿ ನೀಡಿದ್ದಾರೆ.