ನವದೆಹಲಿ: Surya Grahan 2021 - ಡಿಸೆಂಬರ್ 4, ಶನಿವಾರ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣ ಈ ವರ್ಷದ ಕೊನೆಯ ಗ್ರಹಣವಾಗಿರಲಿದೆ. ಈ ಸೂರ್ಯಗ್ರಹಣದ ಒಟ್ಟು ಅವಧಿಯು ನಾಲ್ಕು ಗಂಟೆಗಳಿಗಿಂತ ಹೆಚ್ಚು ಇರಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ, ಜ್ಯೋತಿಷ್ಯದ ದೃಷ್ಟಿಯಿಂದ ಇದು ವಿಶೇಷವಾಗಿದೆ. ರಾಹು ಮತ್ತು ಕೇತುಗಳ ಅಶುಭ ಪರಿಣಾಮಗಳಿಂದ ಸೂರ್ಯಗ್ರಹಣ (ಕೇತುಗ್ರಹಣ) ಸಂಭವಿಸಲಿದೆ. ಹಾಗೆಯೇ ಜಾತಕದಲ್ಲಿಯೂ ರಾಹು-ಕೇತುಗಳ ಅಶುಭ ಪ್ರಭಾವದಿಂದ ಗ್ರಹಣಗಳು (Surya Grahana 2021) ಸೃಷ್ಟಿಯಾಗುತ್ತವೆ. ಈ ದೋಷವು ಮಾನವನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ದೋಷ ನಿವಾರಣೆಗೆ (Grahana Dosha Remedy) ಸೂರ್ಯಗ್ರಹಣದ ದಿನ ತುಂಬಾ ವಿಶೇಷವಾಗಿದೆ. ಸೂರ್ಯಗ್ರಹಣದ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಗ್ರಹಣ ದೋಷದಿಂದ ಮುಕ್ತಿ ಪಡೆಯಬಹುದು.
>> ಜಾತಕದಲ್ಲಿ ಸೂರ್ಯಗ್ರಹಣ ದೋಷವನ್ನು (Kundali Dosh Remedy) ತಪ್ಪಿಸಲು ಆಲದ ಗಿಡವನ್ನು ನೆಡಬೇಕು ಮತ್ತು ಅದಕ್ಕೆ ಪ್ರತಿದಿನ ಅದರಲ್ಲಿ ನೀರುಣಿಸಬೇಕು
>> ಸೂರ್ಯಗ್ರಹಣ ದೋಷವನ್ನು ಹೋಗಲಾಡಿಸಲು ಹಣ ನೀಡದೆ ಯಾರಿಂದಲೂ ಏನನ್ನೂ ತೆಗೆದುಕೊಳ್ಳಬಾರದು. ಇದಲ್ಲದೇ ಅಂಗವಿಕಲರಿಗೆ ದಾನ ಮಾಡಬೇಕು.
>> ಗ್ರಹಣದೋಷ (Kundali Grahana Dosha Upay) ಅಥವಾ ಪಿತ್ರದೋಷವಿದ್ದರೆ 6 ತೆಂಗಿನಕಾಯಿಯನ್ನು ತಲೆಯ ಮೇಲೆ ತಿರುಗಿಸಿ ನೀರಿನಲ್ಲಿ ಹರಿಬಿಡಿ.
>> ಜಾತಕದಲ್ಲಿರುವ ಸೂರ್ಯಗ್ರಹಣ ದೋಷವನ್ನು ಹೋಗಲಾಡಿಸಲು, ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
>> ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ ತಾಮ್ರದ ಪಾತ್ರೆಯಿಂದ ಉದಯಿಸುತ್ತಿರುವ ಸೂರ್ಯನಿಗೆ ಅರ್ಘ್ಯ ನೀಡಿ
ಈ ಸಮಸ್ಯೆಗಳು ಸೂರ್ಯಗ್ರಹಣ ದೋಷದಿಂದ ಬರುತ್ತವೆ
ಜಾತಕದ ಸೂರ್ಯಗ್ರಹಣ ದೋಷದಿಂದ ತಂದೆಯೊಂದಿಗೆ ಮನಸ್ತಾಪ ಉಂಟಾಗುವುದು. ಇದರೊಂದಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಸೂರ್ಯಗ್ರಹಣ ದೋಷದಿಂದ ಮೂಳೆಗಳಿಗೆ ಸಂಬಂಧಿಸಿದ ರೋಗಗಳು ತೊಂದರೆ ನೀಡುತ್ತವೆ. ಇದಲ್ಲದೇ ಸರ್ಕಾರಿ ಕೆಲಸಗಳಲ್ಲಿ ಸಮಸ್ಯೆಗಳು ಬರಲಾರಂಭಿಸುತ್ತವೆ. ಇದರೊಂದಿಗೆ ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಪ್ರಕೋಪ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಈ ನ್ಯೂನತೆಯಿಂದ ಗೃಹ ವೈಷಮ್ಯ ಭಂಗವಾಗುತ್ತದೆ.
ಇದನ್ನೂ ಓದಿ-Horoscope 2022 : 2022 ರಲ್ಲಿ, ಅದ್ಭುತವಾಗಿರಲಿದೆ ಈ 2 ರಾಶಿಯವರ ಲವ್ ಲೈಫ್, ಇವರಿಗೆ ಮೋಸ ಕೂಡ ಆಗಬಹುದು
(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ)
ಇದನ್ನೂ ಓದಿ-ರಾಶಿ ಬದಲಿಸಲಿರುವ ರಾಹು, ಈ ನಾಲ್ಕು ರಾಶಿಯವರಿಗೆ ನೀಡಲಿದ್ದಾನೆ ಶುಭ ಫಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.