Video : CM ವಿರೋಧಿಸಿದ ಶಿಕ್ಷಕರ ಮೇಲೆ ಅಮಾನುಷ ಕ್ರಮ, ಬಾಯಿಗೆ ಬಟ್ಟೆ ತುರುಕಿ ಎಳೆದೊಯ್ದ ಪೊಲೀಸ್

ಸಿಎಂ ಚನ್ನಿ ವಿರುದ್ಧ ಶಿಕ್ಷಕರು ಘೋಷಣೆ ಕೂಗುತ್ತಿದ್ದು, ಪೊಲೀಸರು ಪ್ರತಿಭಟನೆಯನ್ನು ತಡೆಯಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 

Written by - Ranjitha R K | Last Updated : Dec 16, 2021, 01:48 PM IST
  • ಚರಂಜಿತ್ ಸಿಂಗ್ ಚನ್ನಿ ರ‍್ಯಾಲಿಗೆ ವಿರೋಧ
  • ಪೊಲೀಸ್ ದೌರ್ಜನ್ಯ ಎದುರಿಸಿದ ಶಿಕ್ಷಕರು
  • ಪ್ರತಿಭಟನಾಕಾರರನ್ನು ಎಳೆದೊಯ್ದ ಪೊಲೀಸರು
Video : CM ವಿರೋಧಿಸಿದ ಶಿಕ್ಷಕರ ಮೇಲೆ  ಅಮಾನುಷ ಕ್ರಮ, ಬಾಯಿಗೆ ಬಟ್ಟೆ ತುರುಕಿ ಎಳೆದೊಯ್ದ ಪೊಲೀಸ್ title=
ಚರಂಜಿತ್ ಸಿಂಗ್ ಚನ್ನಿ ರ‍್ಯಾಲಿಗೆ ವಿರೋಧ (photo twitter)

ಸಂಗ್ರೂರ್ : ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Chranajit Singh Channi) ಅವರ ರ‍್ಯಾಲಿಯನ್ನು ಪ್ರತಿಭಟಿಸಿದ ಬಿಎಡ್ ಟಿಇಟಿ (BEd TET) ಅರ್ಹ ಶಿಕ್ಷಕರು ಪೊಲೀಸರ ದೌರ್ಜನ್ಯವನ್ನು ಎದುರಿಸಬೇಕಾದ ಘಟನೆ ನಡೆದಿದೆ. ಪಂಜಾಬ್‌ನ ಸಂಗ್ರೂರ್‌ನಲ್ಲಿ  ಪ್ರತಿಭಟನಾನಿರತ ಯುವತಿಯನ್ನು ಪೊಲೀಸರು ಎಳೆದೊಯ್ದು,  ಜೀಪಿನಲ್ಲಿ ಕೂರಿಸಿ ಠಾಣೆಗೆ ಕರೆಡು ಕೊಂದು ಹೋಗಿದ್ದಾರೆ. 

 ಯುವತಿಯ ಬಾಯಿಗೆ ಬಟ್ಟೆ ತುರುಕಿದ ಪೊಲೀಸರು : 
ಈ ಘಟನೆಯ Videoವೊಂದು ವೈರಲ್ ಆಗಿದೆ. ಇದರಲ್ಲಿ ಪೊಲೀಸರು ಯುವತಿಯ ಮುಖವನ್ನು ಒತ್ತುವುದು ಕಂಡು ಬರುತ್ತದೆ. ಸಿಎಂ ಚನ್ನಿ (Chranajit Singh Channi) ವಿರುದ್ಧ ಶಿಕ್ಷಕರು ಘೋಷಣೆ ಕೂಗುತ್ತಿದ್ದು, ಪೊಲೀಸರು ಪ್ರತಿಭಟನೆಯನ್ನು ತಡೆಯಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ (Viral video) ಕಾಣಬಹುದು.  ಸಿಎಂ ಚನ್ನಿ ವಿರುದ್ಧ ಘೋಷಣೆ ಕೂಗುವುದನ್ನು ತಡೆಯುವ ಉದ್ದೇಶದಿಂದ, ಮಹಿಳಾ ಪೊಲೀಸ್ ಪೇದೆಯೊಬ್ಬರು ಯುವತಿಯ ಬಾಯಿಗೆ ಬಟ್ಟೆ ತುರುಕಿರುವ ದೃಶ್ಯ ಕೂಡಾ ವಿಡಿಯೋದಲ್ಲಿ ಕಂಡು ಬಂದಿದೆ. 

ಇದನ್ನೂ ಓದಿ : Minimum Age For Marriage:ಮಹಿಳೆಯರ ಮದುವೆ ವಯಸ್ಸು18 ರಿಂದ 21 ಕ್ಕೆ ಏರಿಸಲು ಸಂಪುಟ ಅನುಮೋದನೆ

 ಯೋಜನೆಗಳ ಶಂಕುಸ್ಥಾಪನೆಗೆ ಆಗಿಸಿದ್ದ ಸಿಎಂ ಚನ್ನಿ : 
ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಡಿಕಲ್ ಕಾಲೇಜು (Medical college) ಅಲ್ಲದೆ, 700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿಮೆಂಟ್ ಕಾರ್ಖಾನೆಯ ಶಂಕುಸ್ಥಾಪನೆಗೆ ಬಂದಿದ್ದ ಸಿಎಂ ಚರಂಜಿತ್ ಸಿಂಗ್ ಚನ್ನಿ ಶಿಕ್ಷಕರ ವಿರೋಧ ಎದುರಿಸಬೇಕಾಯಿತು.

 ಪ್ರತಿಭಟನಾಕಾರರನ್ನು ಎಳೆದೊಯ್ದ ಪೊಲೀಸರು : 
ಪ್ರತಿಭಟನೆಯ ಸಮಯದಲ್ಲಿ,  ಅನೇಕ ಮಹಿಳೆಯರು ಮತ್ತು ಯುವತಿಯರು ಸೇರಿದಂತೆ ಪ್ರತಿಭಟನಾಕಾರರನ್ನು ಪೊಲೀಸರು ಎಳೆದಾಡುತ್ತಿರುವುದು ಕಂಡುಬರುತ್ತದೆ. ಪೊಲೀಸರು (Police) ಪ್ರತಿಭಟನಾಕಾರರನ್ನು ಎಳೆದು ಬಸ್ಸಿನಲ್ಲಿ ಕೂರಿಸಿ  ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

 

ಕಾಂಗ್ರೆಸ್ ಚುನಾವಣಾ ಸಮಿತಿಯನ್ನು ರಚಿಸುತ್ತದೆ
ಪಂಜಾಬ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot singh sidhu)  ನೇತೃತ್ವದಲ್ಲಿ ಚುನಾವಣಾ ಸಮಿತಿಯನ್ನು ರಚಿಸಿದೆ. ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಚರಂಜಿತ್ ಸಿಂಗ್ ಚನ್ನಿ, ಸಮನ್ವಯ ಸಮಿತಿ ಅಧ್ಯಕ್ಷೆ ಅಂಬಿಕಾ ಸೋನಿ (Ambika Soni) , ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸುನಿಲ್ ಜಾಖರ್ ಮತ್ತು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಗ್ ಬಾಜ್ವಾ ಈ ಸಮಿತಿಯಲ್ಲಿದ್ದಾರೆ. ಪಂಜಾಬ್ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ನೇತೃತ್ವದಲ್ಲಿ ಪಂಜಾಬ್ ಕಾಂಗ್ರೆಸ್‌ನ ರಾಜ್ಯ ಚುನಾವಣಾ ಸಮಿತಿಯನ್ನು ರಚಿಸುವ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಿದ್ದಾರೆ ಎಂದು ಪಕ್ಷವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ :  Covid 19 Third Wave: ಕರೋನಾ ಮೂರನೇ ತರಂಗವನ್ನು ತಡೆಯುವುದು ಅಸಾಧ್ಯ- ಚಿಂತೆ ಹೆಚ್ಚಿಸಿದ ತಜ್ಞರ ಹೇಳಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News