ನವದೆಹಲಿ: ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಸರ್ಕಾರ ರಚಿಸಲು ಯಾರನ್ನು ಮೊದಲು ಕರೆಯಬೇಕೆನ್ನುವುದನ್ನು ರಾಜ್ಯಪಾಲರು ನಿರ್ಧರಿಸುತ್ತಾರೆ ಎಂದು ಸಂವಿಧಾನ ತಜ್ಞ ಸುಭಾಷ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಿದ್ದಾರೆ. ಆದರೆ ಈ ವಿಷಯದಲ್ಲಿ ಸರ್ಕಾರ ರಚಿಸಲು ಯಾರನ್ನು ಮೊದಲು ಆಹ್ವಾನಿಸಬೇಕು ಎನ್ನುವುದನ್ನು ರಾಜ್ಯಪಾಲರು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಂವಿಧಾನ ತಜ್ಞ ಸುಭಾಶ್ ಕಶ್ಯಪ ಅವರು "ಸರ್ಕಾರ ರಚಿಸಲು ಮೊದಲು ಅತಿದೊಡ್ಡ ಏಕೈಕ ಪಕ್ಷಕ್ಕೆ ನೀಡಬೇಕೋ ಅಥವಾ ಸಮಿಶ್ರ ಸರ್ಕಾರಕ್ಕೆಎನ್ನುವುದು ರಾಜ್ಯಪಾಲರ ಗಣನೆಗೆ ಬಿಟ್ಟಿದೆ ಎಂದು ಅವರು ಎಎನ್ಐಗೆ ಪ್ರತಿಕ್ರಿಯಿಸಿದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 104 ,ಕಾಂಗ್ರೆಸ್ 78,ಜೆಡಿಎಸ್ 38 ಸ್ಥಾನಗಳನ್ನು ಗೆದ್ದಿದೆ.ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚಿಸಲು ಹಕ್ಕು ಮಂಡಿಸಿವೆ.