Bank Alert : ಜನವರಿ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಭಾರೀ ಬದಲಾವಣೆ..!

ಈ ಬ್ಯಾಂಕಿನ ಖಾತೆದಾರರು ಮಿತಿಯಿಂದ ಹಣವನ್ನು ಹಿಂಪಡೆಯಲು ಮತ್ತು ಠೇವಣಿ ಮಾಡಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ನಿಯಮವು ಜನವರಿ 1 ರಿಂದ ಜಾರಿಗೆ ಬರಲಿದೆ.

Written by - Channabasava A Kashinakunti | Last Updated : Dec 19, 2021, 08:11 PM IST
  • ಜನವರಿ 1 ರಿಂದ ಬ್ಯಾಂಕಿನ ನಿಯಮಗಳಲ್ಲಿ ಬದಲಾವಣೆ
  • ಈಗ 10000 ಕ್ಕಿಂತ ಹೆಚ್ಚು ಹಣ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ
  • ಗ್ರಾಹಕರು ಇದಕ್ಕೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ
Bank Alert : ಜನವರಿ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಭಾರೀ ಬದಲಾವಣೆ..!  title=

ನವದೆಹಲಿ : ಸಧ್ಯ ವರ್ಷದ ಕೊನೆಯ ತಿಂಗಳು ಚಾಲ್ತಿಯಲ್ಲಿದೆ. ಇನ್ನೊಂದು ಸ್ವಲ್ಪ ದಿನದಲ್ಲಿ ಹೊಸ ವರ್ಷ 2022 ಪ್ರಾರಂಭವಾಗುತ್ತದೆ. ಇದರೊಂದಿಗೆ ಕೆಲ ನಿಯಮಗಳೂ ಬದಲಾಗಲಿವೆ. ಈ ಅನುಕ್ರಮದಲ್ಲಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.  ಈ ಬ್ಯಾಂಕಿನ ಖಾತೆದಾರರು ಮಿತಿಯಿಂದ ಹಣವನ್ನು ಹಿಂಪಡೆಯಲು ಮತ್ತು ಠೇವಣಿ ಮಾಡಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ನಿಯಮವು ಜನವರಿ 1 ರಿಂದ ಜಾರಿಗೆ ಬರಲಿದೆ.

ಬ್ಯಾಂಕ್ ಮಾಹಿತಿ ನೀಡಿದೆ

ಐಪಿಪಿಬಿ(India Post Payments Bank)ಯಲ್ಲಿ ಮೂರು ರೀತಿಯ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಬ್ಯಾಂಕಿನಲ್ಲಿ ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಮೂಲ ಉಳಿತಾಯ ಖಾತೆಯಿಂದ ಪ್ರತಿ ತಿಂಗಳು ನಾಲ್ಕು ಬಾರಿ ನಗದು ಹಿಂಪಡೆಯಲು ಉಚಿತವಾಗಿದೆ. ಆದರೆ ಇದರ ನಂತರ, ಗ್ರಾಹಕರು ಪ್ರತಿ ಹಿಂಪಡೆಯುವಿಕೆಯ ಮೇಲೆ ಕನಿಷ್ಠ 25 ರೂ. ಬೇಸಿಂಗ್ ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ಶುಲ್ಕವಿರುವುದಿಲ್ಲ.

ಇದನ್ನೂ ಓದಿ : Aadhaar-voter ID Linking : ನಿಮ್ಮ ಆಧಾರ್ ಜೊತೆ Voter ID ಲಿಂಕ್ ಮಾಡುವುದು ತುಂಬಾ ಸುಲಭ : ಹೇಗೆ ಇಲ್ಲಿ ಪರಿಶೀಲಿಸಿ

ಎಷ್ಟು ಶುಲ್ಕ ವಿಧಿಸಲಾಗುತ್ತದೆ?

ಈ ಬ್ಯಾಂಕ್‌ನಲ್ಲಿ ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಒಂದು ತಿಂಗಳಲ್ಲಿ 10,000 ರೂ.ಗಳನ್ನು ಠೇವಣಿ(Deposit) ಮಾಡಲು ಯಾವುದೇ ಶುಲ್ಕವಿರುವುದಿಲ್ಲ. ಈ ಮಿತಿಗಿಂತ ಹೆಚ್ಚು ಠೇವಣಿ ಇಟ್ಟರೆ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ. ಮೂಲ ಉಳಿತಾಯ ಖಾತೆಯನ್ನು ಹೊರತುಪಡಿಸಿ ಇತರ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಯಿಂದ ಪ್ರತಿ ತಿಂಗಳು 25,000 ರೂ.ಗಳನ್ನು ಹಿಂಪಡೆಯಲು ಯಾವುದೇ ಶುಲ್ಕವಿರುವುದಿಲ್ಲ. ಅದೇ ಸಮಯದಲ್ಲಿ, ಉಚಿತ ಮಿತಿಯ ನಂತರ ನೀವು ಪ್ರತಿ ಬಾರಿ ಹಣವನ್ನು ಹಿಂಪಡೆಯಲು ಕನಿಷ್ಠ 25 ರೂಪಾಯಿಗಳನ್ನು ವಿಧಿಸಬೇಕಾಗುತ್ತದೆ.

IPPB ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಎಲ್ಲಾ ನಿಯಮಗಳು ಜನವರಿ 1, 2022 ರಿಂದ ಅನ್ವಯವಾಗುತ್ತವೆ. ಅಂದರೆ ಜನವರಿ 1ರಿಂದ ಗ್ರಾಹಕರು ಹೆಚ್ಚಿನ ಹಣ(Money) ಪಾವತಿಸಬೇಕಾಗುತ್ತದೆ. GST/CESS ಅನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಈ ಹಿಂದೆ ಆಗಸ್ಟ್ 1, 2021 ರಂದು ಮನೆ ಬಾಗಿಲಿನ ಬ್ಯಾಂಕಿಂಗ್ ಶುಲ್ಕಗಳ ಹೊಸ ದರಗಳನ್ನು ಜಾರಿಗೆ ತಂದಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News