ನವದೆಹಲಿ: ಭಾರತವು ಮಂಗಳವಾರ 5,326 ಹೊಸ ಕೊರೊನಾ (Corona) ಪ್ರಕರಣಗಳನ್ನು ದಾಖಲಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳ ಕುಸಿತ ಕಂಡುಬಂದಿದೆ. ಸೋಮವಾರ, ದೇಶದಲ್ಲಿ 6,563 ಹೊಸ ಪ್ರಕರಣಗಳು ದಾಖಲಾಗಿದ್ದವು. ಆದರೆ ಮಂಗಳವಾರ ಈ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದು ಒಮಿಕ್ರಾನ್ (Omicron) ಭೀತಿಯ ನಡುವೆ ಕೊಂಚ ನೆಮ್ಮದಿ ತಂದಿದೆ.
ಹೆಚ್ಚು ಸಾಂಕ್ರಾಮಿಕವಾಗಿರುವ ಒಮಿಕ್ರಾನ್ ರೂಪಾಂತರದಿಂದ ದೇಶಾದ್ಯಂತ ದಾಖಲಾಗುತ್ತಿರುವ ಸೋಂಕುಗಳ ಹೆಚ್ಚಳದ ಮಧ್ಯೆ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ (drop in fresh Covid cases) ಕಂಡುಬಂದಿದೆ. ಕೊನೆಯದಾಗಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ದೇಶವು 170 ಒಮಿಕ್ರಾನ್ ಸೊಂಕಿತರನ್ನು ಹೊಂದಿದೆ, ಅವರಲ್ಲಿ ಹೆಚ್ಚಿನವರು ಲಕ್ಷಣರಹಿತರಾಗಿದ್ದಾರೆ ಅಥವಾ ಇದುವರೆಗೆ ಸೌಮ್ಯವಾದ ರೋಗಲಕ್ಷಣಗಳನ್ನು ತೋರಿಸಿದ್ದಾರೆ.'
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes @PIB_India @mygovindia @COVIDNewsByMIB #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/RCrGF2byLO
— ICMR (@ICMRDELHI) December 21, 2021
ಆರೋಗ್ಯ ಸಚಿವಾಲಯದ ಬುಲೆಟಿನ್‌ನಲ್ಲಿನ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಪ್ರಸ್ತುತ 79,097 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. ದೇಶದಲ್ಲಿ ಈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 3,47,52,164 ಆಗಿದೆ.
ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 8,043 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,41,95,060 ಕ್ಕೆ ತಲುಪಿದೆ. 453 ಜನ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಸಾವುನೋವುಗಳ ಸಂಖ್ಯೆ 4,78,007 ಕ್ಕೆ ತಲುಪಿದೆ. ಇದುವರೆಗೆ 1,38,34,78,181 ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Money Horoscope 2022: ಹಣದ ವಿಷಯದಲ್ಲಿ 2022ರ ವರ್ಷ ನಿಮಗೆ ಹೇಗಿರಲಿದೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.