ಬೆಂಗಳೂರು: ಮೇಕೆದಾಟು (Mekedatu) ಯೋಜನೆಯ ಬಗ್ಗೆ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಅಧಿಕಾರದಲ್ಲಿದ್ದಾಗ ಯೋಜನೆಯ ಜಾರಿಗಾಗಿ ಏನೂ ಮಾಡದ ಕಾಂಗ್ರೆಸ್ ಈಗ ಪಾದಯಾತ್ರೆಯ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ.
ಪಾದಯಾತ್ರೆ ಮಾಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿ ಕನ್ನಡಿಗರಿಗೂ, ತಮಿಳುನಾಡಿನ ಜನರ ಮನಸ್ಸಿನಲ್ಲಿ ವೈಷಮ್ಯಕ್ಕೆ ಕಾರಣವಾಗುವ ಕಾರ್ಯಕ್ಕೆ ಮುಂದಾಗಿರುವು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದ್ದಾರೆ.
ತನ್ನ ವೋಟ್ ಬ್ಯಾಂಕ್ ರಕ್ಷಿಸಿಕೊಳ್ಳಲು ಕಾಂಗ್ರೆಸ್ ನಾಯಕರು ತಾಲಿಬಾನಿಗಳಿಗೂ ಸ್ಪರ್ಧೆ ನೀಡುವ ರೀತಿ ವರ್ತಿಸುತ್ತಿದ್ದಾರೆ. ತಾಲಿಬಾನಿಗಳು ಮತಾಂಧತೆಯಲ್ಲಿದ್ದರೆ, ಕಾಂಗ್ರೆಸ್ ಮತದ ಅಂಧತೆಯಲ್ಲಿದೆ : ಶ್ರೀ @CTRavi_BJP pic.twitter.com/BRnqiD8SHQ
— BJP Karnataka (@BJP4Karnataka) January 3, 2022
ತನ್ನ ವೋಟ್ ಬ್ಯಾಂಕ್ (Vote Bank) ರಕ್ಷಿಸಿಕೊಳ್ಳಲು ಕಾಂಗ್ರೆಸ್ ನಾಯಕರು ತಾಲಿಬಾನಿಗಳಿಗೂ (Taliban) ಸ್ಪರ್ಧೆ ನೀಡುವ ರೀತಿ ವರ್ತಿಸುತ್ತಿದ್ದಾರೆ. ತಾಲಿಬಾನಿಗಳು ಮತಾಂಧತೆಯಲ್ಲಿದ್ದರೆ, ಕಾಂಗ್ರೆಸ್ (Congress) ಮತದ ಅಂಧತೆಯಲ್ಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಏನು ಪರಿವರ್ತನೆ ತರುತ್ತದೆಯೋ ಅದನ್ನೆಲ್ಲಾ ವಿರೋಧಿಸಬೇಕು ಎನ್ನುವ ಕೆಟ್ಟಚಾಳಿ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಅಪಾಯಕಾರಿ ಎಂದಿದ್ದಾರೆ.
'ರೌಡಿಸಂ ರಿಪಬ್ಲಿಕ್' ನಡೆಸುವ ಮನಸ್ಥಿತಿ:
ಮುಖ್ಯಮಂತ್ರಿಗಳು ಮತ್ತು ಸಚಿವರು ಭಾಗವಸಿದ್ದ ಕಾರ್ಯಕ್ರಮ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಸಂಬಂದಿಸಿದ್ದು. ಅಭಿವೃದ್ಧಿ ನಮ್ಮ ಸರಕಾರದ ಪ್ರಥಮ ಆದ್ಯತೆ, ಅದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶರಿಗೆ (DK Sureah) ಅಪಥ್ಯವಾದದ್ದು ಸಹಜ. ಅವರ "ರೌಡಿಸಂ ರಿಪಬ್ಲಿಕ್" ನಡೆಸುವ ಮನಸ್ಥಿತಿ ಇಂದು ವೇದಿಕೆಯಲ್ಲಿ ಪ್ರಕಟವಾದದ್ದು ಖಂಡನೀಯ ಎಂದು ರಾಮನಗರದಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಪ್ರಕರಣಗಳು ಹೆಚ್ಚಾದರೆ ಲಾಕ್ ಡೌನ್ ಮಾಡಬಹುದು: ಕೃಷಿ ಸಚಿವ ಬಿ.ಸಿ.ಪಾಟೀಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.