ಸಿಕ್ಕ ಸಿಕ್ಕ ಚಾರ್ಜರ್ ನಲ್ಲಿ ನಿಮ್ಮ Smartphone ಚಾರ್ಜ್ ಮಾಡುತ್ತೀರಾ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ

ಪ್ರಮುಖ ಫೋನ್‌ಗಳೊಂದಿಗೆ ಚಾರ್ಜರ್‌ಗಳನ್ನು ಒದಗಿಸದ ಹಲವು ಕಂಪನಿಗಳಿವೆ. ಇಂಥಹ ಪರಿಸ್ಥಿತಿಯಲ್ಲಿ ಮನೆಯಲ್ಲಿರಯುವ ಯಾವುದೋ, ಚಾರ್ಜರ್‌ ಮೂಲಕ ಫೋನ್ ಚಾರ್ಜ್ ಮಾಡಬಹುದೇ? 

Written by - Ranjitha R K | Last Updated : Jan 25, 2022, 04:31 PM IST
  • ಬಾಕ್ಸ್‌ನಲ್ಲಿ ಬರುವ ಚಾರ್ಜರ್‌ನೊಂದಿಗೆ ಫೋನ್ ಚಾರ್ಜ್ ಮಾಡಿ
  • ಫೋನ್ ಬಾಕ್ಸ್ ಜೊತೆಗೆ ಚಾರ್ಜರ್ ಬರದಿದ್ದರೆ ಏನು ಮಾಡಬೇಕು
  • ಮಾರುಕಟ್ಟೆಯಲ್ಲಿ ಸಿಗಲಿವೆ ಎರಡು ಬ್ಯಾಟರಿಗಳ ಸ್ಮಾರ್ಟ್‌ಫೋನ್‌ಗಳು
 ಸಿಕ್ಕ ಸಿಕ್ಕ ಚಾರ್ಜರ್ ನಲ್ಲಿ ನಿಮ್ಮ Smartphone ಚಾರ್ಜ್ ಮಾಡುತ್ತೀರಾ?  ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ  title=
ಫೋನ್ ಬಾಕ್ಸ್ ಜೊತೆಗೆ ಚಾರ್ಜರ್ ಬರದಿದ್ದರೆ ಏನು ಮಾಡಬೇಕು (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿಯೂ ಸ್ಮಾರ್ಟ್‌ಫೋನ್‌ (Smartphone) ಇರುವುದನ್ನು ಕಾಣಬಹುದು. ಅನೇಕ ಮಂದಿ ದಿನದ ಬಹುಪಾಲು ಸಮಯವನ್ನು ಸ್ಮಾರ್ಟ್‌ಫೋನ್‌ ನಲ್ಲಿಯೇ  ಕಳೆಯುತ್ತಾರೆ. ಹೀಗೆ ಫೋನ್ ಬಳಸಿದರೆ ಬ್ಯಾಟರಿ (Phone Battery) ಎಷ್ಟು ಕಾಲದವರೆಗೆ ಉಳಿಯುತ್ತದೆ ಎನ್ನುವುದು ಪ್ರಶ್ನೆ . ಚಾರ್ಜ್ ಖಾಲಿಯಾಗುತ್ತಿದ್ದಂತೆಯೇ ಕೈಗೆ ಸಿಕ್ಕ ಚಾರ್ಜರ್ (Phone charger) ಬಳಸಿ ಫೋನ್ ಚಾರ್ಜ್ ಮಾಡುವ ಅಭ್ಯಾಸ ಅನೇಕರದ್ದು. ಆದರೆ ಇದು ಎಷ್ಟು ಸರಿ? ಇನ್ನು ಇತ್ತೀಚಿನ ದಿನಗಳಲ್ಲಿ  ಸ್ಮಾರ್ಟ್ ಫೋನ್ ಇರುವ ಬಾಕ್ಸ್ ನಲ್ಲಿ ಚಾರ್ಜರ್ ಕೂಡ ಬರುವುದಿಲ್ಲ. iPhone 13 ಸರಣಿ ಮತ್ತು Samsung S ಸರಣಿಯ ಫೋನ್‌ಗಳಲ್ಲಿ ಚಾರ್ಜರ್ ಇರುವುದಿಲ್ಲ.  ಪ್ರಮುಖ ಫೋನ್‌ಗಳೊಂದಿಗೆ ಚಾರ್ಜರ್‌ಗಳನ್ನು ಒದಗಿಸದ ಹಲವು ಕಂಪನಿಗಳಿವೆ. ಇಂಥಹ ಪರಿಸ್ಥಿತಿಯಲ್ಲಿ ಮನೆಯಲ್ಲಿರಯುವ ಯಾವುದೋ, ಚಾರ್ಜರ್‌ ಮೂಲಕ ಫೋನ್ ಚಾರ್ಜ್ ಮಾಡಬಹುದೇ? 

ಬಾಕ್ಸ್‌ನಲ್ಲಿ ಬರುವ ಚಾರ್ಜರ್‌ ನಿಂದಲೇ ಫೋನ್ ಚಾರ್ಜ್ ಮಾಡಿ :
ಮೊದಲೇ ಹೇಳಿದ ಹಾಗೆ ತಮ್ಮ ಫೋನ್ ಅನ್ನು ಬೇರೆ ಯಾವುದೋ ಫೋನ್ ಚಾರ್ಜರ್ ನಿಂದ (Phone charger) ಚಾರ್ಜ್ ಮಾಡುವ ಅಭ್ಯಾಸ ಹೊಂದಿರುತ್ತಾರೆ. ನಮ್ಮದೇ ಚಾರ್ಜರ್ ನಲ್ಲಿ ಫೋನ್ ಚಾರ್ಜ್ ಮಾಡಿದರೆ ನಿಧಾನವಾಗಿ ಚಾರ್ಜ್ ಆಗುತ್ತದೆ ಎಂದು ಬೇರೆ ಯಾವುದೇ ಚಾರ್ಜರ್ ನಲ್ಲಿ ಚಾರ್ಜ್ ಮಾಡುವವರು ಅನೇಕರಿದ್ದಾರೆ. ಆದರೆ ನಿಧಾನವಾಗಿ ಚಾರ್ಜ್ ಆದರೂ, ಫೋನ್ ಜೊತೆ ಬರುವ ಚಾರ್ಜರ್ ಬಳಸುವುದೇ ಸೂಕ್ತ. ನಿಮ್ಮ ಫೋನ್ 20w ಚಾರ್ಜಿಂಗ್ ಅನ್ನು ಬೆಂಬಲಿಸಿದರೆ, ಅದು  120w ಅಥವಾ 65w ನೊಂದಿಗೆ ಚಾರ್ಜ್ ಆಗುತ್ತದೆ. ಏಕೆಂದರೆ ಕಂಪನಿಯು 20 W ವರೆಗೆ ಚಾರ್ಜಿಂಗ್ ಬೆಂಬಲದ ಪ್ರಕಾರ ಫೋನ್ ಅನ್ನು ಸಿದ್ಧಪಡಿಸಿರುತ್ತದೆ.  

ಇದನ್ನೂ ಓದಿ : Amazon Republic Day Sale: 23 ಸಾವಿರ ಬೆಲೆಯ ಈ 5G Smartphone ಅನ್ನು ಕೇವಲ 3,500 ರೂ.ಗಳಿಗೆ ಹೀಗೆ ಖರೀದಿಸಿ

ಫೋನ್ ಬಾಕ್ಸ್‌ ನೊಂದಿಗೆ ಚಾರ್ಜರ್ ಬರದಿದ್ದರೆ ಏನು ಮಾಡಬೇಕು?
ಕಂಪನಿಯು ಚಾರ್ಜರ್ (Company Charger) ಅನ್ನು ನೀಡದ ಸ್ಮಾರ್ಟ್‌ಫೋನ್ (Smartphone) ಅನ್ನು ನೀವು ತೆಗೆದುಕೊಂಡಿದ್ದರೆ, ಕಂಪನಿಯು ಶಿಫಾರಸು ಮಾಡುವಷ್ಟೇ  ಸಾಮರ್ಥ್ಯದ ಚಾರ್ಜರ್ ಅನ್ನು ಖರೀದಿಸಿ. ಅದೇ ಚಾರ್ಜರ್ನೊಂದಿಗೆ,  ಫೋನ್ ಅನ್ನು ಸರಿಯಾಗಿ ಚಾರ್ಜ್ ಮಾಡುವುದು ಸಾಧ್ಯವಾಗುತ್ತದೆ. ನಿಮ್ಮ ಚಾರ್ಜರ್ ಹಾಳಾಗಿದ್ದರೆ ಅಥವಾ ಮುರಿದಿದ್ದರೆ, ಅದೇ ಕಂಪನಿ ಅಥವಾ ಉತ್ತಮ ಕಂಪನಿಯಿಂದ ಚಾರ್ಜರ್ ಖರೀದಿಸಿ.

ಮಾರುಕಟ್ಟೆಗೆ ಬಂದಿದೆ ಎರಡು ಬ್ಯಾಟರಿಗಳ ಸ್ಮಾರ್ಟ್‌ಫೋನ್‌ಗಳು :
ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, ಫೋನ್‌ನ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು. ಆದರೆ, ಇದು ಕೆಲವು ಅನಾನುಕೂಲಗಳನ್ನು ಹೊಂದಿದೆ. ವೇಗದ ಚಾರ್ಜಿಂಗ್ ಬ್ಯಾಟರಿಯ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ಬ್ಯಾಟರಿ ಅವಧಿಯನ್ನು ತ್ವರಿತವಾಗಿ ಕೊನೆಗೊಳಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹಲವು ಕಂಪನಿಗಳು ಸ್ಮಾರ್ಟ್ ಫೋನ್ ಗಳಲ್ಲಿ ಎರಡು ಬ್ಯಾಟರಿಗಳನ್ನು ಅಳವಡಿಸುತ್ತಿವೆ. Xiaomi 11i ಹೈಪರ್ಚಾರ್ಜ್, Xiaomi 11i, OnePlus 9 Pro ಮತ್ತು Samsung Galaxy Z ಫೋಲ್ಡ್ ಅನ್ನು ಒಳಗೊಂಡಿರುವ ಎರಡು ಬ್ಯಾಟರಿಗಳನ್ನು ಹೊಂದಿರುತ್ತವೆ. 

ಇದನ್ನೂ ಓದಿ : ಮಾರುಕಟ್ಟೆಗೆ ಬಂದಿರುವ ಈ ತಂತ್ರಜ್ಞಾನದಿಂದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವೆಚ್ಚ ಅರ್ಧದಷ್ಟು ಇಳಿಯಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News