Small Investors News: ರಸ್ತೆ ನಿರ್ಮಾಣದಲ್ಲಿ ಹಣಹೂಡಿಕೆ ಮಾಡಿ ನೀವೂ ಕೂಡ ಹಣ ಗಳಿಕೆ ಮಾಡಬಹುದು, ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದೇನು?

Nitin Gadkari - ರಸ್ತೆ ನಿರ್ಮಾಣ ಕಾರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ನಾವು ಹೇಗೆ ಹಣವನ್ನು ಗಳಿಸಬಹುದು? ಇದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari Small Investors) ಉತ್ತರ ನೀಡಿದ್ದಾರೆ. ಅಂದರೆ, ಸಣ್ಣ ಹೂಡಿಕೆದಾರರು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು.

Written by - Nitin Tabib | Last Updated : Feb 5, 2022, 09:11 PM IST
  • ರಸ್ತೆ ನಿರ್ಮಾಣದಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಸಂಪಾದನೆ
  • ಹಣ ಗಳಿಕೆಯ ವಿಧಾನ ಹಂಚಿಕೊಂಡ ಕೇಂದ್ರ ಗೃಹ ಸಚಿವ
  • ಸಣ್ಣ ಹೂಡಿಕೆದಾರರಿಗೆ ಭಾರಿ ಲಾಭ
Small Investors News: ರಸ್ತೆ ನಿರ್ಮಾಣದಲ್ಲಿ ಹಣಹೂಡಿಕೆ ಮಾಡಿ ನೀವೂ ಕೂಡ ಹಣ ಗಳಿಕೆ ಮಾಡಬಹುದು, ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದೇನು? title=
Small Investors News (File Photo)

ಮುಂಬೈ: ರಸ್ತೆಗಳಂತಹ ಮೂಲಸೌಕರ್ಯ (Road Projects) ಯೋಜನೆಗಳ ನಿರ್ಮಾಣಕ್ಕೆ ವಿದೇಶಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸುವುದಿಲ್ಲ ಮತ್ತು ಸಣ್ಣ ಹೂಡಿಕೆದಾರರಿಂದ (Small Investors) ಮಾತ್ರ ಹಣವನ್ನು ಸಂಗ್ರಹಿಸಲಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಶನಿವಾರ ಹೇಳಿದ್ದಾರೆ. ಮೂಲಸೌಕರ್ಯ ಯೋಜನೆಗಳಿಗಾಗಿ (Infrastructure Projects) 1 ಲಕ್ಷ ರೂಪಾಯಿ ಹೂಡಿಕೆ ಮಾಡಲು ಸಿದ್ಧರಿರುವ ಸಣ್ಣ ಹೂಡಿಕೆದಾರರಿಂದ ಸರ್ಕಾರವು ವರ್ಷಕ್ಕೆ ಎಂಟು ಪ್ರತಿಶತದಷ್ಟು ರಿಟರ್ನ್ ನೀಡಿ ಹಣವನ್ನು ಸಂಗ್ರಹಿಸಲಿದೆ  ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Relationship Tips: ನಿಮ್ಮ ಸಂಗಾತಿಗೆ ಅಪ್ಪಿ-ತಪ್ಪಿಯೂ ಕೂಡ ಈ ಸಿಕ್ರೆಟ್ ಹೇಳಬೇಡಿ, ಇಲ್ದಿದ್ರೆ..?

ಶೀಘ್ರದಲ್ಲಿಯೇ ಯೋಜನೆಯ ಘೋಷಣೆ
ಪಟ್ಟಣಗಳು ​​ಮತ್ತು ನಗರಗಳಲ್ಲಿನ ರೈಲ್ವೆ ಕ್ರಾಸಿಂಗ್‌ಗಳಲ್ಲಿ ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸುವ 8,000 ಕೋಟಿ ರೂ.ಗಳ ಯೋಜನೆಯೂ ನಡೆಯುತ್ತಿದೆ, ಆದರೆ ಅದನ್ನು ಬಜೆಟ್ ನಂತರ ಘೋಷಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. ತಮ್ಮ ಇಲಾಖೆಯು ವಾರ್ಷಿಕ 5 ಲಕ್ಷ ಕೋಟಿ ರೂ.ಗೂ ಹೆಚ್ಚು ಕೆಲಸ ಮಾಡುತ್ತದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ. ಇದನ್ನು ಕಂಡ ವಿದೇಶಿ ಹೂಡಿಕೆದಾರರು ಭಾರತೀಯ ರಸ್ತೆ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ. ಆದರೆ ಸರ್ಕಾರವು ಈ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದೂ ಕೂಡ ಅವರು ಹೇಳಿದ್ದಾರೆ.

ಇದನ್ನೂ ಓದಿ-ಶೀಘ್ರದಲ್ಲಿಯೇ ಈ 4 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಫಳಫಳ ಹೊಳೆಯಲಿದೆ, ಕಾರಣ ಇಲ್ಲಿದೆ

ದೇಶದ ಬಡವರಿಗಾಗಿ ಕೆಲಸ ಮಾಡಲಿದ್ದಾರೆ ಗಡ್ಕರಿ
'ನಾನು ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡಲು ಬಯಸುವುದಿಲ್ಲ ಎಂದು ಮಹಾರಾಷ್ಟ್ರ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಡ್ಕರಿ ಹೇಳಿದ್ದಾರೆ. ಅವರ ಬದಲಿಗೆ ರೈತರು, ಕೃಷಿ ಕಾರ್ಮಿಕರು, ಕಾನ್‌ಸ್ಟೆಬಲ್‌ಗಳು, ಗುಮಾಸ್ತರು ಮತ್ತು ಸರ್ಕಾರಿ ನೌಕರರಿಂದ ಹಣ ಸಂಗ್ರಹಿಸಿ ಅವರಿಗೆ ಲಾಭ ನೀಡುವೆ' ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ-LIC ಪಾಲಸಿ ಧಾರಾಕಾರ ಗಮನಕ್ಕೆ! ಈ ಎರಡು ಪಾಲಸಿಗಳಲ್ಲಿ ಭಾರಿ ಬದಲಾವಣೆ, ತಪ್ಪದೆ ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News