ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ(Siddaramaiah) ಅವರಿಗೆ ಕೇವಲ ಅಲ್ಪಸಂಖ್ಯಾತರು ಮಾತ್ರ ಕಾಣುತ್ತಿರುವುದು ದುರಂತ ಅಂತಾ ಬಿಜೆಪಿ ಟೀಕಿಸಿದೆ. ಹಿಜಾಬ್ ವಿವಾದ(Karnataka Hijab Row) ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿರುವ ಬಿಜೆಪಿ #CongressVoteBankPolitics ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಗಳನ್ನು ಮಾಡಿದೆ.
‘ಹಿಜಾಬ್ ನೆಪ(Hijab Row)ದಲ್ಲಿ ಕರಾವಳಿ ಜಿಲ್ಲೆಯನ್ನು ಮತ್ತೆ ಮತೀಯ ಶಕ್ತಿಗಳ ಆಡಂಬೋಲವಾಗಿ ಮಾರ್ಪಡಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಹಿಜಾಬ್ ಪ್ರತಿಭಟನೆ ಸಂದರ್ಭದಲ್ಲಿ ಕುಂದಾಪುರದಲ್ಲಿ ಇಬ್ಬರು ವ್ಯಕ್ತಿಗಳು ಆಯುಧ ಸಮೇತ ಸೆರೆಸಿಕ್ಕ ಪ್ರಕರಣ ಇದಕ್ಕೆ ಉದಾಹರಣೆಯಲ್ಲವೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: Heart Attack: ತಿಂಡಿ ತಿನ್ನಲು ಬಂದಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಹೋಟೆಲ್ನಲ್ಲೇ ಸಾವು!
‘ಅಲ್ಪಸಂಖ್ಯಾತರ ಮತಬ್ಯಾಂಕ್ ಉಳಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ(Siddaramaiah) ಮತ್ತು ರಾಜ್ಯ ಕಾಂಗ್ರೆಸ್ ಪಟಾಲಂ ಏನು ಬೇಕಾದರೂ ಮಾಡಲು ತಯಾರಿದೆ. ಬಿರಿಯಾನಿ ತಿನ್ನುವುದಕ್ಕಾಗಿ ಸಿದ್ದರಾಮಯ್ಯ ಅವರಿಗೆ ಸಿ.ಎಂ.ಇಬ್ರಾಹಿಂ(CM ibrahim) ಮನೆಗೂ ರಿಯಾಜ್ ಭಟ್ಕಳ್ ಮನೆಗೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ’ ಅಂತಾ ಕುಟುಕಿದೆ.
ಅಲ್ಪಸಂಖ್ಯಾತರ ಮತಬ್ಯಾಂಕ್ ಉಳಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಪಟಾಲಂ ಏನು ಬೇಕಾದರೂ ಮಾಡಲು ತಯಾರಿದೆ.
ಬಿರಿಯಾನಿ ತಿನ್ನುವುದಕ್ಕಾಗಿ ಸಿದ್ದರಾಮಯ್ಯ ಅವರಿಗೆ ಸಿ.ಎಂ.ಇಬ್ರಾಹಿಂ ಮನೆಗೂ ರಿಯಾಜ್ ಭಟ್ಕಳ್ ಮನೆಗೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.#CongressVoteBankPolitics
— BJP Karnataka (@BJP4Karnataka) February 7, 2022
‘ಸಿದ್ದರಾಮಯ್ಯನವರೇ ಹಿಜಾಬ್(Karnataka Hijab Row) ಧರಿಸುವುದು ಮೂಲಭೂತ ಹಕ್ಕು ಎಂದಿದ್ದೀರಿ. ಈಗ ಹಿಜಾಬ್ ಪ್ರತಿಭಟನೆಗೆ ಆಯುಧ ಸಮೇತ ಬಂದು ಸಿಕ್ಕಿ ಬಿದ್ದವರ ಬಗ್ಗೆ ಏನು ಹೇಳುತ್ತೀರಿ? ಮಾರಕಾಯುಧ ಹಿಡಿದು ಸಮಾಜದ ಶಾಂತಿಭಂಗ ಮಾಡುವುದು ಮೂಲಭೂತವಾದಿಗಳ ಮೂಲಭೂತ ಹಕ್ಕೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: DK Shivakumar : 'ಹಿಜಾಬ್ ವಿವಾದ ಇಡೀ ದೇಶಕ್ಕೆ ದೊಡ್ಡ ಅಪಮಾನ'
‘ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ(Siddaramaiah) ಅವರಿಗೆ ಕೇವಲ ಅಲ್ಪಸಂಖ್ಯಾತರು ಮಾತ್ರ ಕಾಣುತ್ತಿರುವುದು ದುರಂತ. ಕೇಸರಿ ಶಾಲನ್ನು ಬೇಡವೆಂದವರು ನೀವಲ್ಲವೇ? ಟಿಪ್ಪು ಜಯಂತಿ ಆಚರಿಸಿ ಹಾಗೂ ಟೋಪಿ ಧರಿಸಿ ಸಂಭ್ರಮಿಸಿದವರು ನೀವಲ್ಲವೇ? ಹಿಜಾಬ್(Hijab Row) ಉದ್ದೇಶದ ಹಿಂದಿನ ಕರಾಳಮುಖ ಕಳಚುತ್ತಿದೆ. ಈಗೇನು ಹೇಳುವಿರಿ?’ ಅಂತಾ ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.