CBSE 10th-12th Term-1 Result: ಮಹತ್ವದ ನೋಟೀಸ್ ಜಾರಿಗೊಳಿಸಿದ ಬೋರ್ಡ್

ಟರ್ಮ್-1 ಪರೀಕ್ಷೆಗೆ ಸಂಬಂಧಿಸಿದಂತೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮಹತ್ವದ ಮಾಹಿತಿಯನ್ನು ನೀಡಿದೆ. 

Written by - Ranjitha R K | Last Updated : Feb 16, 2022, 03:03 PM IST
  • ಟರ್ಮ್-1 ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ
  • ಟರ್ಮ್-1 ರ ಫಲಿತಾಂಶ ಯಾವಾಗ ?
  • ಏಪ್ರಿಲ್ 26 ರಿಂದ ಟರ್ಮ್-2 ಪರೀಕ್ಷೆ
CBSE 10th-12th Term-1 Result: ಮಹತ್ವದ ನೋಟೀಸ್ ಜಾರಿಗೊಳಿಸಿದ ಬೋರ್ಡ್ title=
ಟರ್ಮ್-1 ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ (file photo)

ನವದೆಹಲಿ : ಟರ್ಮ್-1 ಪರೀಕ್ಷೆಗೆ ಸಂಬಂಧಿಸಿದಂತೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮಹತ್ವದ ಮಾಹಿತಿಯನ್ನು ನೀಡಿದೆ. ಇದರ ಪ್ರಕಾರ ಫೆಬ್ರವರಿ 16ರಂದು  10-12ನೇ ಫಲಿತಾಂಶವನ್ನು ಮಂಡಳಿಯು ಬಿಡುಗಡೆ ಮಾಡುವುದಿಲ್ಲ (Cbse Class 10 Term 1 Result). ಫೆಬ್ರುವರಿ 16ರಂದು ಫಲಿತಾಂಶ ಹೊರಬೀಳಲಿದೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡಳಿ ಈ ನೋಟೀಸ್ ಬಿಡುಗಡೆ ಮಾಡಿದೆ.  

ಏಪ್ರಿಲ್ 26 ರಿಂದ ಟರ್ಮ್-2 ಪರೀಕ್ಷೆ : 
CBSE term 2 exam ಏಪ್ರಿಲ್ 26 ರಿಂದ ನಡೆಯಲಿದೆ. ಆದರೆ, ಈ ಕುರಿತು ವಿವರವಾದ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಡೇಟ್‌ಶೀಟ್‌ನ ಸಂಪೂರ್ಣ ವಿವರಗಳನ್ನು ಫೆಬ್ರವರಿ 20 ರೊಳಗೆ ಅಧಿಕೃತ ವೆಬ್‌ಸೈಟ್‌ನಲ್ಲಿ (website) ಬಿಡುಗಡೆ ಮಾಡುವ ನಿರೀಕ್ಷೆ ಇದೆ. ನಂತರ ವಿದ್ಯಾರ್ಥಿಗಳು ಅದನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. 

ಇದನ್ನೂ ಓದಿ : Bank Special Offer: ಗೃಹಸಾಲ ತೆಗೆದುಕೊಳ್ಳುವಾಗ EMI ಪಾವತಿಸಬೇಕಾಗಿಲ್ಲ, ಕೊಡುಗೆ ಏನೆಂದು ತಿಳಿಯಿರಿ

ಟರ್ಮ್-1 ರ ಫಲಿತಾಂಶ ಯಾವಾಗ ?
2021 ರ ಡಿಸೆಂಬರ್‌ನಲ್ಲಿ 10 ನೇ-12 ನೇ ಅವಧಿಯ ಪರೀಕ್ಷೆಗಳು ಮುಗಿದಿವೆ (Cbse Class 10 Term 1 Result). ಪರೀಕ್ಷೆ ನಡೆದಾಗಿನಿಂದ ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಆದರೆ,  ಫಲಿತಾಂಶವನ್ನು ಮಂಡಳಿಯಿಂದ ಇನ್ನೂ ಬಿಡುಗಡೆ ಮಾಡಲಾಗಿಲ್ಲ (CBSE Result). ಇನ್ನೂ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು, ಮಂಡಳಿಯು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿದೆ.  ಹೀಗಿರುವಾಗ, ಫಲಿತಾಂಶವನ್ನು ಬಿಡುಗಡೆ ಮಾಡಲು ಸಮಯ ತೆಗೆದುಕೊಳ್ಳಬಹುದು. 

ಟರ್ಮ್-1 ರಲ್ಲಿ ಯಾವುದೇ ವಿದ್ಯಾರ್ಥಿ ಫೇಲ್ ಆಗುವುದಿಲ್ಲ : 
ಯಾವುದೇ ವಿದ್ಯಾರ್ಥಿಯು ಟರ್ಮ್-1 ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದಿಲ್ಲ. ಟರ್ಮ್-1 ಪರೀಕ್ಷೆಗೆ ಮಂಡಳಿಯಿಂದ ಅಂಕಗಳನ್ನು ಮಾತ್ರ ನೀಡಲಾಗುತ್ತದೆ. ಟರ್ಮ್-2 ಪರೀಕ್ಷೆಯ ನಂತರ ಅಂತಿಮ ಅಂಕ ಪಟ್ಟಿಯನ್ನು ನೀಡಲಾಗುತ್ತದೆ. 

ಇದನ್ನೂ ಓದಿ :Deep Sidhu: ಕೆಂಪು ಕೋಟೆ ಗಲಭೆ ಆರೋಪಿ, ಪಂಜಾಬಿ ನಟ ದೀಪ್ ಸಿಧು ಅಪಘಾತದಲ್ಲಿ ದುರ್ಮರಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News